More

  ಮುಂದಿನ 5 ದಿನಗಳ ಕಾಲ ಈ ಮೂರು ರಾಜ್ಯಗಳಲ್ಲಿ ತೀವ್ರ ಬಿಸಿ ಗಾಳಿ! ಹವಾಮಾನ ಇಲಾಖೆ ಎಚ್ಚರಿಕೆ

  ನವದೆಹಲಿ: 2024ರ ಮಾರ್ಚ್​-ಏಪ್ರಿಲ್​ನಲ್ಲಿ ಬಿಸಿಲ ತಾಪಮಾನ ಹೆಚ್ಚಾಗಲಿದ್ದು, ಜೂನ್​ ತಿಂಗಳಲ್ಲಿ ಉಷ್ಣಾಂಶ ದುಪ್ಪಟ್ಟಾಗಲಿದೆ ಎಂದು ಈ ಹಿಂದೆಯೇ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆಯೇ ಉತ್ತರ ಭಾರತದ ಹಲವು ನಗರಗಳಲ್ಲಿ ಬಿಸಿಲ ಬೇಗೆಯು ದಾಖಲೆಯ ಮಟ್ಟವನ್ನು ಮೀರಿ, ಏರಿಕೆ ಕಂಡಿದೆ. ಒಂದೆಡೆ ದಕ್ಷಿಣ ಭಾಗದ ಕೇರಳ, ಕರ್ನಾಟಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ವರ್ಷದ ಮೊದಲ ಮಳೆ ಈಗಾಗಲೇ ದಾಖಲಾಗಿದೆ.

  ಇದನ್ನೂ ಓದಿ: ಧೋನಿ ನಿವೃತ್ತಿಯ ಬಗ್ಗೆ ಬಿಗ್ ಅಪ್‌ಡೇಟ್; ಸಿಎಸ್‌ಕೆಗೆ ಯಾವಾಗ ವಿದಾಯ ಹೇಳಲಿದ್ದಾರೆ ಗೊತ್ತಾ?

  ಇದೀಗ ಐಎಂಡಿ ಮತ್ತೊಂದು ಹೊಸ ಮಾಹಿತಿಯನ್ನು ಪ್ರಕಟಿಸಿದ್ದು, ಮುಂದಿನ ಐದು ದಿನಗಳ ಕಾಲ ನವದೆಹಲಿ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ತೀವ್ರವಾಗಲಿದೆ. ಇಂದು (ಮೇ.20) ದೆಹಲಿಯಲ್ಲಿ 44 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗುವ ನಿರೀಕ್ಷೆಯಿದೆ. ಇದೇ ರೀತಿಯ ಬಿಸಿ ಗಾಳಿ ರಾಜಸ್ಥಾನದಲ್ಲಿ ಮಂಗಳವಾರದಿಂದ (ಮೇ.21) ಶುಕ್ರವಾರದವರೆಗೆ (ಮೇ.24) ಇರಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.


  ಇಂದಿನಿಂದ ನಾಳೆಯವರೆಗೆ ಉತ್ತರಪ್ರದೇಶದ ಹಲವು ಭಾಗಗಳಲ್ಲಿ ಬಿಸಿ ಗಾಳಿ ಇರಲಿದ್ದು, ಈ ವಾರ ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್​, ಒಡಿಶಾ, ಬಿಹಾರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿಯೂ ಸಹ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಗಳು ಹೆಚ್ಚಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ,(ಏಜೆನ್ಸೀಸ್).

  ಲೀಗ್​ನಿಂದ ಹೊರಬಿದ್ದ MI​ಗೆ ನೀತಾ ಅಂಬಾನಿ ಕ್ಲಾಸ್​; ರೋಹಿತ್​, ಹಾರ್ದಿಕ್​ಗೆ ವಿಶೇಷ ಕಿವಿಮಾತು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts