ಬೆಂಗಳೂರಿನ ರೇವ್ ಪಾರ್ಟಿಗೂ ನನಗೂ ಯಾವುದೇ ಸಂಬಂಧವಿಲ್ಲ: ಸ್ಪಷ್ಟನೆ ಕೊಟ್ಟ'ಪವರ್​​' ಸಿನಿಮಾ ನಟಿ ಹೇಮಾ

actress Hema Gives Clarity About Bengaluru Rave Party News
Published on

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಕಲಾವಿದೆ ಹೇಮಾ ಭಾಗವಹಿಸಿದ್ದರು ಎಂಬ ಸುದ್ದಿಯೊಂದು ಹಬ್ಬಿತ್ತು. ಆದರೆ ಈ ಕುರಿತಾಗಿ ಪ್ರತಿಕ್ರಿಯಿಸಿದ ನಟಿ ಹೇಮಾ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ರೇವ್ ಪಾರ್ಟಿ ನಡೆದಿದ್ದು, ಹಲವು ಟಾಲಿವುಡ್ ನಟರು ಪಾಲ್ಗೊಂಡಿದ್ದಾರೆ ಎಂಬ ಸುದ್ದಿ ಬೆಳಗ್ಗೆಯಿಂದ ಬರುತ್ತಿದೆ. ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಗೆ ಬೆಂಗಳೂರಿನ ಪೊಲೀಸರು ಬ್ರೇಕ್ ಹಾಕಿದ್ದಾರೆ. ಆ ಪಾರ್ಟಿಯಲ್ಲಿ ಡ್ರಗ್ಸ್ ಕೂಡ ಬಳಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಪೊಲೀಸರು ಮತ್ತು ನಾರ್ಕೋಟಿಕ್ಸ್ ಅಧಿಕಾರಿಗಳು ರೇವ್ ಪಾರ್ಟಿ ನಡೆದ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಈ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಹಲವರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಆದರೆ ಅದರಲ್ಲಿ ಟಾಲಿವುಡ್ ನಟರು ಮತ್ತು ಹಿರಿಯ ಕ್ಯಾರೆಕ್ಟರ್ ಆರ್ಟಿಸ್ಟ್ ಹೇಮಾ ಇದ್ದಾರೆ ಎಂಬ ವರದಿಗಳಿವೆ. ಈ ಸುದ್ದಿಗೆ ಪ್ರತಿಕ್ರಿಯಿಸಿರುವ ನಟಿ ಹೇಮಾ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಹೇಮಾ ಮಾತನಾಡಿ, ನಾನು ಹೈದರಾಬಾದ್‌ನಲ್ಲಿದ್ದೇನೆ. ನಾನು ಇಲ್ಲಿ ಹೈದರಾಬಾದ್ ಫಾರ್ಮ್ ಹೌಸ್‌ನಲ್ಲಿ ಉಳಿದುಕೊಂಡು ಆನಂದಿಸುತ್ತಿದ್ದೇನೆ. ಬೆಂಗಳೂರು ರೇವ್ ಪಾರ್ಟಿಗೂ ನನಗೂ ಸಂಬಂಧವಿಲ್ಲ. ಇದರಲ್ಲಿ ನನ್ನನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ. ಕನ್ನಡ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಸತ್ಯಾಂಶವಿಲ್ಲ. ಅಲ್ಲಿ ಯಾರಿದ್ದಾರೋ ಎನೋ ನನಗೆ ಗೊತ್ತಿಲ್ಲ. ನನ್ನ ಬಗ್ಗೆ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net