More

  ಸಾಲಕ್ಕೆ ಹಣ ಕಟಾವು ಮಾಡುವಂತಿಲ್ಲ: ಬ್ಯಾಂಕ್‌ಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

  ಮಂಡ್ಯ: ಬರ ಪರಿಹಾರವೆಂದು ರೈತರ ಖಾತೆಗೆ ಪಾವತಿಯಾಗಿರುವ ಹಣವನ್ನು ಬ್ಯಾಂಕ್‌ಗಳು ತಮ್ಮ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಾರದೆಂದು ಜಿಲ್ಲಾಧಿಕಾರಿ ಡಾ.ಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
  ಜಿಲ್ಲೆಯಲ್ಲಿ ರೈತರ ಖಾತೆಯಲ್ಲಿರುವ ಹಣವನ್ನು ಸಾಲಕ್ಕೆ ಕಟಾವು ಮಾಡಿಕೊಳ್ಳುತ್ತಿರುವ ಸಂಬಂಧ ಸಾಕಷ್ಟು ದೂರು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಮೇ.18ರಂದು ಆದೇಶ ಹೊರಡಿಸಿರುವ ಡಿಸಿ, ಬರ ಪರಿಹಾರವೆಂದು ಬಂದಿರುವ ಹಣವನ್ನು ರೈತರಿಗೆ ನೀಡುವಂತೆ ತಿಳಿಸಿದ್ದಾರೆ.
  ಬರದ ಹಿನ್ನಲೆ ಜಿಲ್ಲೆಯಲ್ಲಿ ಬೆಳೆಹಾನಿಗೆ ಸಂಬಂಧಿಸಿದಂತೆ 34,94 ಕೋಟಿ ರೂಗಳನ್ನು ಪರಿಹಾರವಾಗಿ 79,839 ರೈತರ ಖಾತೆಗೆ ಜಮೆ ಮಾಡಲಾಗಿದೆ. 
  ಆದರೆ ಈ ಹಣವನ್ನು ರೈತರು ಪಡೆದಿರುವ ಸಾಲಕ್ಕೆ ಬ್ಯಾಂಕ್‌ಗಳು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದವು. ಈ ಸಂಬಂಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸಿ ತುರ್ತು ಕ್ರಮ ವಹಿಸಿದ್ದು, ತೀವ್ರ ಬರಗಾಲದಿಂದಾಗಿ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ಸಾಲಕ್ಕೆ ಹಣ ಕಟಾವು ಮಾಡುವಂತಿಲ್ಲ: ಬ್ಯಾಂಕ್‌ಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts