More

    ಪ್ರಲ್ಹಾದ ಜೋಶಿ ನಾಮಪತ್ರ ಸಲ್ಲಿಕೆ; ಮೂವರು ಮಾಜಿ ಸಿಎಂಗಳು ಭಾಗಿ

    ಧಾರವಾಡ: ಸತತ ೪ ಬಾರಿ ಲೋಕಸಭೆ ಚುನಾವಣೆ ಗೆದ್ದು ಕೇಂದ್ರ ಸಚಿವರಾಗಿರುವ ಬಿಜೆಪಿಯ ಪ್ರಲ್ಹಾದ ಜೋಶಿ ಸೋಮವಾರ ೫ನೇ ಬಾರಿ ಅಖಾಡಕ್ಕಿಳಿದರು. ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಜೋಶಿ ನಾಮಪತ್ರ ಸಲ್ಲಿಕೆ ವೇಳೆ ಶಕ್ತಿ ಪ್ರದರ್ಶನ ಜೋರಾಗಿತ್ತು. ವಿಶೇಷವೆಂದರೆ ಮೂವರು ಮಾಜಿ ಮುಖ್ಯಮಂತ್ರಿಗಳು ಜೋಶಿ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.
    ನಗರದ ಮುರುಘಾಮಠಕ್ಕೆ ತೆರಳಿ ಡಾ. ಮಲ್ಲಿಕಾರ್ಜುನ ಶ್ರೀಗಳ ಆಶೀರ್ವಾದ ಪಡೆದ ಸಚಿವ ಜೋಶಿ, ಅಲ್ಲಿಂದ ಶಿವಾಜಿ ವೃತ್ತಕ್ಕೆ ಬಂದು ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೃಹತ್ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಅಂಬೇಡರ್, ಬಸವೇಶ್ವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಶಿವಾಜಿ ವೃತ್ತದಿಂದ ಹೊರಟ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
    ಕಾರ್ಯಕರ್ತರು ಮೆರವಣಿಗೆಯುದ್ದಕ್ಕೂ ಭಾರತ್ ಮಾತಾಕಿ ಜೈ',ಜೈ ಜೈ ಮೋದಿ’ ಘೋಷಣೆ ಕೂಗುತ್ತ ಮೆರವಣಿಗೆಯೊಂದಿಗೆ ಸಾಗಿದರು. ಪ್ರತಿಯೊಬ್ಬರೂ ಕೇಸರಿ ಶಾಲು ಮತ್ತು ಟೊಪ್ಪಿಗೆ ಧರಿಸಿದ್ದರಿಂದ ಮೆರವಣಿಗೆ ಸಂಪೂರ್ಣ ಕೇಸರಿಮಯವಾಗಿತ್ತು.
    ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ಹಿರಿಯ ಮುಖಂಡರಾದ ಡಾ. ವಿಜಯ ಸಂಕೇಶ್ವರ, ಡಾ. ಪ್ರಭಾಕರ ಕೋರೆ, ಶಾಸಕರಾದ ಬೈರತಿ ಬಸವರಾಜ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಮುಖಂಡರಾದ ಸಿ.ಟಿ. ರವಿ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಸೀಮಾ ಮಸೂತಿ, ಹಾಲಪ್ಪ ಆಚಾರ್, ವೀರಭದ್ರಪ್ಪ ಹಾಲಹರವಿ, ನಾಗರಾಜ ಛಬ್ಬಿ, ಪಾಲಿಕೆ ಮೇಯರ್ ವೀಣಾ ಬಾರದ್ವಾಡ, ಜೆಡಿಎಸ್ ಮುಖಂಡ ಗುರುರಾಜ ಹುಣಸೀಮರದ, ಇತರರಿದ್ದರು.

    ಕೊನೇ ಘಳಿಗೆಯಲ್ಲಿ ಬಂದ ಬೊಮ್ಮಾಯಿ
    ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆಯ ಕೊನೇ ಘಳಿಗೆಯಲ್ಲಿ ಬಂದರು. ಹಾವೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬೊಮ್ಮಾಯಿ, ತರಾತುರಿಯಲ್ಲಿ ಧಾರವಾಡಕ್ಕೆ ಬಂದರು. ಅಷ್ಟೊತ್ತಿಗೆ ಪ್ರಲ್ಹಾದ ಜೋಶಿ ವಿವಿಧ ಮುಖಂಡರೊAದಿಗೆ ೩ ಪ್ರತಿ ನಾಮಪತ್ರ ಸಲ್ಲಿಸಿದ್ದರು. ಬೊಮ್ಮಾಯಿ ಅವರಿಗಾಗಿ ಜಿಲ್ಲಾಽಕಾರಿ ಕಚೇರಿಯಲ್ಲಿ ಕಾದು ಕುಳಿತಿದ್ದರು. ಆದರೆ, ಬೊಮ್ಮಾಯಿ ೩.೧೫ಕ್ಕೆ ಆಗಮಿಸಿದರು. ಜಿಲ್ಲಾಽಕಾರಿ ಕಚೇರಿ ಒಳಗೆ ಪ್ರವೇಶಿಸುವಷ್ಟರಲ್ಲಿ ಅವಽ ಮುಗಿದಿದ್ದರಿಂದ ಜೋಶಿ ಅವರೊಂದಿಗೆ ವಾಪಸಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts