More

    ಜಾಹ್ನವಿ ಕಪೂರ್ ‘ಶಿಖು’ ಹಾರ ಧರಿಸಿದ್ದಕ್ಕಾಗಿ ಶಿಖರ್ ಪಹಾರಿಯಾ ಪ್ರತಿಕ್ರಿಯಿಸಿದ್ದು ಹೀಗೆ..!

    ಹೈದರಾಬಾದ್: ಶಿಖರ್ ಪಹಾರಿಯಾನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾಳೆ ಎಂಬ ವದಂತಿಯಿರುವ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಆಗಾಗ್ಗೆ ಆತನೊಂದಿಗೆ ಕಾಣಿಸಿಕೊಂಡಿದ್ದಾಳೆ. ಇದರೊಂದಿಗೆ ಆಕೆ ಡೇಟಿಂಗ್ ಮಾಡುತ್ತಿರುವುದು ಬಹಳ ಸ್ಪಷ್ಟವಾಗಿದೆ. ಆದಾಗ್ಯೂ, ಇಬ್ಬರೂ ಇನ್ನೂ ಅಧಿಕೃತವಾಗಿ ಇದನ್ನು ಖಚಿತಪಡಿಸಿಲ್ಲ. ಈ ನಡುವೆ ಜಾಹ್ನವಿ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ ಈ ನಟಿಯ ಅಭಿಮಾನಿಗಳಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ. ವಿಶೇಷವಾಗಿ ಗಮನಾರ್ಹವಾದ ‘ಶಿಖು’ ಹಾರ ಹಾಕಿಕೊಂಡು ಹಾಟ್​ ಟಾಪಿಕ್​ ಆಗಿ ಗಮನ ಸೆಳೆದಿದ್ದಾಳೆ.

    ಇದನ್ನೂ ಓದಿ: ನಾಗ ಚೈತನ್ಯ ಜೊತೆ ಡೇಟಿಂಗ್..​? ಪ್ರೀತಿ ಬಗ್ಗೆ ಶೋಭಿತಾ ಧೂಳಿಪಾಲ ಹೇಳಿದ್ದೇನು?

    ಜಾಹ್ನವಿ ತನ್ನ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ ‘ಶಿಖು’ ನೆಕ್ಲೇಸ್‌ನೊಂದಿಗೆ ಕಪ್ಪು ಮತ್ತು ಬಿಳಿ ಉಡುಪು ಧರಿಸಿರುವ ಸೊಗಸಾದ ಫೋಟೋಗಳನ್ನು ಹಾಕಿದ್ದಾಳೆ. ಆಕೆಯ ಬಹುಕಾಂತೀಯ ಉಡುಪಿನ ಹೊರತಾಗಿ, ಶಿಖರ್​ ಪಹಾರಿಯಾ ಹೆಸರಿನ ‘ಶಿಖು’ ನೆಕ್ಲೇಸ್ ಎಲ್ಲರ ಗಮನ ಸೆಳೆಯಿತು. ಇದರ ಹಲವು ಚಿತ್ರಗಳನ್ನು ಹಂಚಿಕೊಂಡ ಆಕೆ, ಹೇರ್ ಬೋ ಎಮೋಜಿಯೊಂದಿಗೆ ಶೀರ್ಷಿಕೆ ನೀಡಿದ್ದಾಳೆ.

    ಇದಕ್ಕೆ ಅಭಿಮಾನಿಗಳು ಮತ್ತು ಉದ್ಯಮ ಸ್ನೇಹಿತರು ಅಭಿನಂದನೆಗಳ ಸುರಿಮಳೆಗರೆದಿದ್ದಾರೆ. ಹಲವರು ಹೃದಯ, ಚಪ್ಪಾಳೆ ಮತ್ತಿತರ ಎಮೋಜಿಗಳೊಂದಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಆಕೆಯ ಗೆಳೆಯ ಶಿಖರ್ ಪಹಾರಿಯಾ ಥಂಬ್ಸ್ ಅಪ್ ಎಮೋಜಿಯೊಂದಿಗೆ ಶಹಬ್ಬಾಸ್​ ಹೇಳಿದ್ದಾನೆ. ಇದಕ್ಕೆ ಆಕೆಯ ಸಹೋದರಿ, ನಟಿ ಖುಷಿ ಕಪೂರ್, “ಲೇಡೀಸ್ ಅಂಡ್ ಜೆಂಟಲ್ಮೆನ್” ಎಂದು ಹ್ಯಾಂಡ್ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾಳೆ. ಇದು ಮತ್ತೊಮ್ಮೆ ಅಭಿಮಾನಿಗಳು ಇವರಿಬ್ಬರ ಡೇಟಿಂಗ್​ ಬಗ್ಗೆ ಚರ್ಚಿಸುವಂತೆ ಮಾಡಿದೆ.

    ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಸೀಸನ್ 8 ರಲ್ಲಿ ಕಾಣಿಸಿಕೊಂಡ ನಂತರ ಜಾನ್ಹವಿ ಮತ್ತು ಶಿಖರ್ ಅವರ ಸಂಬಂಧದ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ. ಇವರಿಬ್ಬರು ತಮ್ಮ ಸಂಬಂಧವನ್ನು ಮುಚ್ಚಿಡುವುದನ್ನು ಮುಂದುವರಿಸುತ್ತಿರುವ ಬೆನ್ನಲ್ಲೇ ಅವರ ಸೂಕ್ಷ್ಮ ಸನ್ನೆಗಳು ಊಹಾಪೋಹಗಳಿಗೆ ರೆಕ್ಕೆ-ಪುಕ್ಕ ಬರುವಂತೆ ಮಾಡಿದೆ.

    ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ: ಪಶ್ಚಿಮ ಬಂಗಾಳದ ರಾಜಭವನ ನೀಡಿದ ಪ್ರತಿಕ್ರಿಯೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts