ನಾಗ ಚೈತನ್ಯ ಜೊತೆ ಡೇಟಿಂಗ್..​? ಪ್ರೀತಿ ಬಗ್ಗೆ ಶೋಭಿತಾ ಧೂಳಿಪಾಲ ಹೇಳಿದ್ದೇನು?

shobhitha-nagachaithnya
Published on

ಹೈದರಾಬಾದ್​: ತೆಲುಗು ಚಿತ್ರರಂಗದ ಸ್ಟಾರ್​ ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳ ನಡುವೆ ಇತ್ತೀಚಿನ ಸಂದರ್ಶನವೊಂದರಲ್ಲಿ ಶೋಭಿತಾ ತನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

ನೀವು ಪ್ರೀತಿಯ ಸೆಳೆತಕ್ಕೆ ಸಿಲುಕಿದ್ದೀರಾ ಎಂಬ ಪ್ರಶ್ನೆಗೆ 'ನಾನು ಯಾವಾಗಲೂ ಪ್ರೀತಿಸುತ್ತಿರುತ್ತೇನೆ ಎಂದು ಶೋಭಿತಾ ತಿಳಿಸಿದ್ದಾಳೆ. ಆದರೆ, ಈಕೆ ಪ್ರೇಮ ಸಂಬಂಧ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಪ್ರೀತಿಯು ಒಂದು ನಿರ್ಣಾಯಕ ಶಕ್ತಿಯಾಗಿದೆ. ಬಹುಶಃ ಇದು ಅಗತ್ಯ ಆಗಿರಬಹುದು ಎಂದಿದ್ದಾಳೆ.

ಹಾಗಾದರೆ ಪ್ರೀತಿ, ಪ್ರೇಮವನ್ನು ನೀವು ಹೇಗೆ ಅನುಭವಿಸುತ್ತಿದ್ದೀರಿ? ಎಂಬ ಪ್ರಶ್ನೆಗೆ, ಶೋಭಿತಾ "ನನ್ನ ದೇಹವು ಏನಿದ್ದರೂ, ಏನಿಲ್ಲದಿದ್ದರೂ ತಡೆದುಕೊಳ್ಳುವ ಶಕ್ತಿ ಹೊಂದಿದೆ. ಮನಸ್ಸು ನಾನಿಷ್ಟ ಪಟ್ಟಂತೆ ಸ್ವತಂತ್ರ ಮತ್ತು ಕೂಲ್​ ಆಗಿ ಇರುವುದನ್ನು ಬಯಸುತ್ತದೆ. ನಾನು ನನ್ನದೇ ಆದ ಸಿದ್ಧಾಂತ ಹೊಂದಿದ್ದು, ನನ್ನ ದೇಹ ಮತ್ತು ಮನಸ್ಸು ಅದಕ್ಕೆ ಬೆಂಬಲಿಸುತ್ತದೆ. ಆದರೆ ನಾನು ಕಡಿಮೆ ದುಃಖ ಮತ್ತು ಹೆಚ್ಚಿನ ತೃಪ್ತಿಯನ್ನು ಪಡೆಯುತ್ತೇನೆ." ಎಂದಿದ್ದಾಳೆ.

ಮಾತು ಮುಂದುವರಿಸಿದ ಶೋಭಿತಾ, "ನಾನು ಈಗ ಕಡಿಮೆ ಅವಲಂಬನೆಯನ್ನು ಬೆಳೆಸಿಕೊಂಡಿದ್ದೇನೆ. ವಿಶ್ವದಲ್ಲಿ ಭಕ್ತಿಯು ಉದಾತ್ತ ಭಾವನೆಯಾಗಿದೆ ಎಂದು ನಾನು ನಂಬುತ್ತೇನೆ. ಅಹಂಕಾರದಿಂದ ದೂರವಿದ್ದೇನೆ ಎಂದು ನಾನು ಭಾವಿಸುವುದಿಲ್ಲ. ಆದರೆ ಬೇರೆಯವರೊಂದಿಗೆ ಬೆರೆಯುವುದರಲ್ಲಿ ಸೌಂದರ್ಯವಿದೆ ಎಂದು ನಾನು ನಂಬುತ್ತೇನೆ ಎಂದಿದ್ದಾಳೆ.

ನಾಗಚೈತನ್ಯ ಮತ್ತು ಶೋಭಿತಾ ಡೇಟಿಂಗ್ ಮಾಡುತ್ತಿದ್ದಾರೆ. ಅವರು ಒಟ್ಟಿಗೆ ಏಕಾಂತವನ್ನು ಕಳೆಯುತ್ತಿದ್ದಾರೆ. ಒಟ್ಟಿಗೆ ವಿಹಾರಕ್ಕೆ ಹೋಗುತ್ತಾರೆ. ಅವರು ತಮ್ಮ ಖಾಸಗಿ ಜೀವನವನ್ನು ಸಾರ್ವಜನಿಕರಿಂದ ದೂರವಿಡಲು ಬಯಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಶೋಭಿತಾ ಪ್ರೀತಿ ಕುರಿತು ಮಾತನಾಡಿರುವುದು ಗಮನಸೆಳೆದಿದೆ.

ಶೋಭಿತಾ ಇತ್ತೀಚೆಗೆ ದೇವ್ ಪಟೇಲ್ ಅವರ ಮಂಕಿ ಮ್ಯಾನ್ ನಲ್ಲಿ ಕಾಣಿಸಿಕೊಂಡಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net