More

    ಎಲ್ಲ ಸಮುದಾಯಗಳಿಗೆ ಗ್ಯಾರಂಟಿ: ಎಚ್.ಕೆ. ಪಾಟೀಲ

    ಗದಗ: ಜಾತಿ, ಮತ, ಪಕ್ಷ ಹಾಗೂ ಪಂಗಡ ಮೀರಿ ಸರ್ವರಿಗೂ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
    ನಗರದ 22ನೇ ವಾರ್ಡ್ ನ ಒಕ್ಕಲಗೇರಿ ಓಣಿಯ ಕಮತರ ಪ್ಲಾಟ್ ನಲ್ಲಿ ಜರುಗಿದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಕೋಟಿ ಹತ್ತು ಲಕ್ಷ ಕುಟುಂಬಗಳು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು. ಪರಿಣಾಮವಾಗಿ ಬಡತನ ಮುಕ್ತಗೊಳಿಸುವ ಹಾಗೂ ಸ್ವಾವಲಂಬಿ ಬದುಕಿಗೆ ಪೂರಕ ಪ್ರಯತ್ನ ನಮ್ಮ ಪಕ್ಷದ್ದು. ಈ ಹಿನ್ನೆಲೆಯಲ್ಲಿ ಮೇ.7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
    ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸ್ಥಾಪಿಸಿ ದೂರದೃಷ್ಟಿ ಮೆರೆದ, ಮುಖ್ಯಮಂತ್ರಿಗಳ ಕ್ಷೇತ್ರಕ್ಕೆ ಕಡಿಮೆ ಇಲ್ಲದಂತೆ ಗದಗ ಜಿಲ್ಲೆಯನ್ನು ಅಭಿವೃದ್ಧಿಗೊಳಿಸಿದ ಸಚಿವರಾದ ಎಚ್.ಕೆ.ಪಾಟೀಲ ಅವರ ಮಾರ್ಗದರ್ಶನದಲ್ಲಿ ಮುಂದುವರೆಯುವೆ. ತಮ್ಮ ಸಲಹೆಗಳನ್ನು ಸದಾ ಸ್ವೀಕರಿಸಿ ಸಾಗುವೆ ಎಂದರು.
    ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಸಂಭಾವಿತ ಸ್ವಭಾವದ ಆನಂದಸ್ವಾಮಿ ಗಡ್ಡದೇವರಮಠ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವುದು ನಮಗೆ ಹೆಮ್ಮೆ. ಮನೆ ಮಗನಂತಿರುವ ಅವರನ್ನು ಚುನಾಯಿಸಿ ಜಿಲ್ಲೆಯ ಮತ್ತಷ್ಟು ಅಭಿವೃದ್ಧಿಗೆ ಕೈ ಜೋಡಿಸೋಣ ಎಂದರು.
    ಶಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಅಸೂಟಿ, ಮುಖಂಡರಾದ
    ವಿರೂಪಾಕ್ಷಪ್ಪ ಅಕ್ಕಿ, ರವಿ ಕಮತರ, ಅಕ್ಬರಸಾಬ ಬಾಬರ್ಚಿ, ಎಸ್.ಆರ್. ಹಿರೇಮಠ, ಎಸ್.ಎಸ್.ಬಿಜಾಪುರ, ಆರ್.ಎಚ್.ತೋರಗಲ್ಲ, ಎಂ.ಟಿ. ಹೆಸರೂರ, ಐ.ಜಿ.ಪಠಾಣ್, ಜಿ.ಸಿ. ಮುಲ್ಲಾ, ಇಸ್ಮಾಯಿಲ್ ರೋಣದ, ದಾವೂದ್ ಅಲಿ ಉಳ್ಳಾಗಡ್ಡಿ, ದಾವೂದಸಾಬ ಕುರಹಟ್ಟಿ ಉಪಸ್ಥಿತರಿದ್ದರು.
    ಫೋಟೋ ಶೀರ್ಷಿಕೆ
    ಕಾಂಗ್ರೆಸ್ ಕ್ಯಾಂಪೇನ್
    ಗದಗ: ನಗರದ ಒಕ್ಕಲಗೇರಿ ಓಣಿಯ ಕಮತರ ಪ್ಲಾಟ್ ನಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts