More

    ಲೋಕಾ ಜನ ಸಂಪರ್ಕ ಸಭೆ ! ಸಾರ್ವಜನಿಕರಿಗೆ ನಾಳೆ ಬನ್ನಿ, ನಾಳೆ ಬನ್ನಿ ಎನ್ನುವಂತಿಲ್ಲ: ಲೋಕಾ ಎಚ್ಚರಿಕೆ

    ವಿಜಯವಾಣಿ ಸುದ್ದಿಜಾಲ ಗದಗ
    ಲೋಕಾಯುಕ್ತ ಪೊಲೀಸ್​ ಅಧಿಕಾರಿಗಳು ನಗರಸಭೆಯ ಸಭಾ ಭವನದಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ ಮತ್ತು ಸಾರ್ವ ಜನಿಕರಿಂದ ಅಹವಾಲು ಸ್ವೀಕರಿಸಿದರು.
    ಈ ವೇಳೆ ಜನನ ಮರಣ ಪ್ರಮಾಣ ಪತ್ರ, ಜಮೀನು ಸರ್ವೇ ವರದಿ ನೀಡುವುದು, ಯುಜಿಡಿ ಕಳಪೆ ಕಾಮಗಾರಿ, ಮಾರುಕಟ್ಟೆಯಲ್ಲಿ ಕಸ ವಿಲೇವಾರಿ ಸಮಸ್ಯೆ ಸೇರಿ ಹಲವಾರು ಸಮಸ್ಯೆಗಳ ಕುರಿತು ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದರು.
    ಗದಗ ಜಿಲ್ಲಾ ಕೇಂದ್ರದಲ್ಲಿ ಜನ ಸಾಮಾನ್ಯರು ಸಣ್ಣ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಮೇಲೆ ಲೋಕಾಯುಕ್ತ ಅಧಿಕಾರಿಗಳು ದೂರುಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರಲ್ಲದೇ, ನಿಗದಿತ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕೆಲಸಗಳನ್ನು ರ್ಪೂಣಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು.

    ಲೋಕಾ ಜನ ಸಂಪರ್ಕ ಸಭೆ ! ಸಾರ್ವಜನಿಕರಿಗೆ ನಾಳೆ ಬನ್ನಿ, ನಾಳೆ ಬನ್ನಿ ಎನ್ನುವಂತಿಲ್ಲ: ಲೋಕಾ ಎಚ್ಚರಿಕೆ


    ಜನನ ಮರಣ ಪ್ರಮಾಣ ಪತ್ರಕ್ಕಾಗಿ ಪೂರಕ ದಾಖಲೆಗಳನ್ನು ಒದಗಿಸಿದರೂ, ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಕಳೆದೊಂದು ತಿಂಗಳಿ ನಿಂದ ನಾಳೆ ಬನ್ನಿ, ನಾಳೆ ಬನ್ನಿ ಎನ್ನುವ ಕಾರಣ ನೀಡಿ ಮುಂದೂ ಡುತ್ತಿದ್ದಾರೆ ಎಂದು ದೂರುದಾರರು ಲೋಕಾ ಯುಕ್ತ ಅಧಿಕಾರಿಗಳಿಗೆ ದೂರು ನೀಡಿದರು. ಜಮೀನು, ಆಸ್ತಿ ಸರ್ವೇ ಮಾಡಿ ವರದಿ ನೀಡಲು ಅಧಿಕಾರಿ ಗಳು ವಿಳಂಬ ಮಾಡುತ್ತಿದ್ದಾರೆ ಎಂದು ಕೆಲ ದೂರುದಾರರು ಆರೋಪಿಸಿದರು. ನಗರದ ಗ್ರೇನ್​ ಮಾರುಕಟ್ಟೆ, ಟಾಂಗಾಕೂಟ ಭಾಗದಲ್ಲಿ ನಗರಸಭೆ ಸಿಬ್ಬಂದಿ ಕಸವಿಲೇವಾರಿ ಸಮರ್ಪಕವಾಗಿ ಮಾಡುತ್ತಿಲ್ಲ. ಕಸ ಎಲ್ಲೆಂದರಲ್ಲಿ ಬಿದ್ದು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ಕೂಡಲೇ ಪರಿಹಾರ ಒದಗಿಸಬೇಕು ಎಂದು ಮಾರುಕಟ್ಟೆಯ ವರ್ತಕರು, ಗ್ರಾಹಕರು ಅಹವಾಲು ಸಲ್ಲಿಸಿದರು.
    ಗದಗ&ಬೆಟಗೇರಿ ಅವಳಿ ನಗರದ 35 ವಾರ್ಡುಗಳಲ್ಲಿ ಒಳಚರಂಡಿ (ಯುಜಿಡಿ) ಕಾಮಗಾರಿ ಕಳಪೆಯಾಗಿದ್ದು, ಅಲ್ಲಲ್ಲಿ ಸೋರಿಕೆ ಕಂಡು ಬರುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರು ರಸ್ತೆಯ ಮೇಲೆ ಓಡಾಡದ ಸ್ಥಿತಿ ನಿರ್ಮಾಣವಾಗುತ್ತಿದೆ. ಒಳಚರಂಡಿ ಕಾಮಗಾರಿಗಳನ್ನು ಸರಿಪಡಿಸಬೇಕು. ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರದ ವಿವಿಧ ವಾರ್ಡುಗಳಿಂದ ಆಗಮಿಸಿದ ಸಾರ್ವಜನಿಕರು ಲೋಕಾಯುಕ್ತ ಪೊಲೀಸ್​ ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದರು.

    ಸ್ಥಳದಲ್ಲೇ ಪರಿಹಾರ:
    ಜನನ&ಮರಣ ಪ್ರಮಾಣ ಪತ್ರ ಹಾಗೂ ಜಮೀನು ಸರ್ವೇ ಮಾಡಿದ ವರದಿ ನೀಡುವುದು ಕುರಿತಂತೆ ದಾಖಲಾಗಿದ್ದ ದೂರುಗಳ ಪೈಕಿ ತಲಾ ಎರಡು ದೂರುಗಳಿಗೆ ಸ್ಥಳದಲ್ಲೇ ಲೋಕಾಯುಕ್ತ ಅಧಿಕಾರಿಗಳು ಪರಿಹಾರ ಒದಗಿಸಿದರು. ಜನನ&ಮರಣ ಪ್ರಮಾಣ ಪತ್ರ ಹಾಗೂ ಜಮೀನು ಸರ್ವೇ ಮಾಡಿದ ವರದಿ ಸಿದ್ಧವಾಗಿದ್ದರೂ ಸಾರ್ವಜನಿಕರಿಗೆ ವಿತರಿಸಿದೇ ವಿಳಂಬ ಮಾಡುತ್ತಿದ್ದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ದೂರುದಾರರಿಗೆ ಜನನ&ಮರಣ ಪ್ರಮಾಣ ಪತ್ರ ಹಾಗೂ ಸರ್ವೇ ವರದಿಯನ್ನು ಸಾರ್ವಜನಿಕರಿಗೆ ತಲುಪುವಂತೆ ಮಾಡಿದರು.
    ಲೋಕಾಯುಕ್ತ ಪಿ. ವಿಜಯ ಬಿರಾದಾರ, ಸಿಪಿಐಗಳಾದ ರವಿ ಪುರುಷೋತ್ತಮ, ಎಸ್​.ಎಸ್​. ತೇಲಿ, ಗದಗ&ಬೆಟಗೇರಿ ನಗರಸಭೆ ಪ್ರಭಾರ ಪೌರಾಯುಕ್ತ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ತಹಸೀಲ್ದಾರ್​ ಶ್ರೀನಿವಾಸಮೂತಿರ್ ಕುಲಕಣಿರ್, ಸಾರಿಗೆ ಇಲಾಖೆ ಅಧಿಕಾರಿ ಬಾಲಕೃಷ್ಣ, ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹನುಮಂತ ಬಂಡಿವಡ್ಡರ ಹಲವರು ಇದ್ದರು.


    ಯಾವುದೇ ಸರ್ಕಾರಿ ಇಲಾಖೆ ಅಧಿಕಾರಿಗಳು ತಮ್ಮ ಕೆಲಸ ಮಾಡಿಕೊಡುವಲ್ಲಿ ವಿಳಂಬ ಅಥವಾ ಲಂಚ ಕೇಳಿದರೆ ಜನತೆ ಲೋಕಾಯುಕ್ತಕ್ಕೆ ದೂರು ನೀಡಬೇಕು.
    – ವಿಜಯ ಬಿರದಾರ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts