More

    ಫಲಿತಾಂಶಕ್ಕೂ ಮುನ್ನ ಕೈ ಅಭ್ಯರ್ಥಿಗಳಿಗೆ ನಾಯಕರಿಂದ ಎಚ್ಚರಿಕೆ ಪಾಠ!

    ಬೆಂಗಳೂರು: ಫಲಿತಾಂಶ ಪ್ರಕಟ ಆಗುವ ಮುನ್ನವೇ ಕಾಂಗ್ರೆಸ್ ‌ಪಾಳೆಯದಲ್ಲಿ ಎಚ್ಚರಿಕೆ ಹೆಜ್ಜೆ ಇಡುವ ತಯಾರಿ ನಡೆಸಲಾಗುತ್ತಿದ್ದು ಬಿಜೆಪಿಯ ಆತ್ಮವಿಶ್ವಾಸವನ್ನ ನಿರ್ಲಕ್ಷ್ಯ ಮಾಡದ ಕಾಂಗ್ರೆಸ್, ತಮ್ಮ ಅಭ್ಯರ್ಥಿಗಳಿಗೆ ಪಾಠ ಮಾಡಿದೆ.

    ನಿನ್ನೆ ರಾತ್ರಿ ಎರಡು ತಾಸು ವರ್ಚುವಲ್ ಸಭೆ ನಡೆಸಿದ ಕೈ ನಾಯಕರು 224 ಅಭ್ಯರ್ಥಿಗಳಿಗೆ ಪಾಠ ಮಾಡಿದ್ದಾರೆ. ವರ್ಚುವಲ್ ಸಭೆಯಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ, ಡಿಕೆಶಿ, ಸುರ್ಜೇವಾಲ ತಮ್ಮ ಅಭ್ಯರ್ಥಿಗಳ ಮುಂದೆ ಸರ್ಕಾರ ರಚಿಸುವ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿದ್ದಾರೆ.

    ಕೈ ಅಭ್ಯರ್ಥಿಗಳಿಗೆ ಎಚ್ಚರಿಕೆ ಪಾಠ..!

    ಸಿದ್ದರಾಮಯ್ಯ ತಮ್ಮ ಅಭ್ಯರ್ಥಿಳಿಗೆ ಹಿತವಚನ ತಿಳಿಸಿದರೆ, ಸುರ್ಜೇವಾಲ, ಡಿಕೆ ಶಿವಕುಮಾರ್ ಅಭ್ಯರ್ಥಿಗಳಿಗೆ ನೀತಿ ಪಾಠ ಹೇಳಿದ್ದಾರೆ.

    ಎಚ್ಚರಿಕೆ ಪಾಠಗಳಲ್ಲಿ ಪ್ರಮುಖವಾಗಿ ಇವಿಎಂ ಯಂತ್ರಗಳನ್ನ ಶೇಖರಿಸಿಟ್ಡಿರುವ ಸ್ಟ್ರಾಂಗ್ ರೂಮ್ ಬಗ್ಗೆ ಎಚ್ಚರವಾಗಿದ್ದು ಕಾಂಗ್ರೆಸ್ ‌ಕಾರ್ಯಕರ್ತರು 24/7 ಸ್ಟ್ರಾಂಗ್ ರೂಮ್ ಗಳ ಮೇಲೆ ನಿಗಾ ಇಟ್ಟು ಕಾವಲು ಕಾಯಿರಿ ಎಂದಿದ್ದಾರೆ.

    ಪ್ರಮುಖ ಎಚ್ಚರಿಕೆಗಳು ಹೀಗಿವೆ:

    1. ಸ್ಟ್ರಾಂಗ್ ರೂಮ್ ಗಳಲ್ಲಿ ಏನು ಬೇಕಾದ್ರೂ ಆಗಬಹುದು ಎಚ್ಚರಿಕೆ ವಹಿಸಿ, ಮೈಮರೆಯಬೇಡಿ
    2. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ಆಪರೇಷನ್ ‌ಗೆ ಒಳಗಾಗಬೇಡಿ
    3. ಅನ್ಯ ಪಕ್ಷದ ಆಮಿಷಗಳಿಗೆ ಯಾರೂ ಬಲಿಯಾಗಬೇಡಿ
    4. ಕಾಂಗ್ರೆಸ್ ಪಕ್ಷ‌ದ ಅಭ್ಯರ್ಥಿಗಳಿಗೆ ಲೀಡ್ ಸಿಕ್ತಿದ್ದ ಹಾಗೆ ಬೆಂಗಳೂರಿನತ್ತ ಹೊರಟು ಬನ್ನಿ
    5. ಸರ್ಕಾರ ರಚನೆ ಆಗುವ ತನಕ ನಾವು ಸೂಚಿಸಿದ ಸ್ಥಳದಲ್ಲಿ ಇರಿ
    6. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಉತ್ತಮ ಸ್ಥಾನ ನಿಮಗೆ ಸಿಗಲಿದೆ
    7. ಯಾರು ಕೂಡ ಮೈಮರೆಯಬೇಡಿ ಎಂದು ಸೂಚನೆ

    ಎಂದು ಕಾಂಗ್ರೆಸ್​ ಅಭ್ಯರ್ಥಿಗಳಿಗೆ ನಾಯಕರು ಕಿವಿ ಮಾತು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts