More

    ತಂಬಾಕಿನಿಂದ ಬದುಕು ಕಟ್ಟಿಕೊಂಡ ರೈತ

    ಎಚ್.ಡಿ.ಕೋಟೆ: ರಾಜ್ಯದಲ್ಲಿ ಬೆಳೆಯುವ ಉತ್ಕೃಷ್ಟ ದರ್ಜೆಯ ವರ್ಜೀನಿಯಾ ತಂಬಾಕಿಗೆ ವಿಶ್ವದಾದ್ಯಂತ ಹೆಚ್ಚು ಬೇಡಿಕೆಯಿದ್ದು, ಅದರಲ್ಲೂ ಮೈಸೂರು ಭಾಗದಲ್ಲಿ ಬೆಳೆಯುವ ತಂಬಾಕಿಗೆ ಇನ್ನಿಲ್ಲದ ಬೇಡಿಕೆ ಇದೆ.

    ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕು. ಮಳೆ ಆಶ್ರಯದಲ್ಲಿ ಉತ್ಕೃಷ್ಟ ತಂಬಾಕು ಬೆಳೆದು ಲಾಭದೊಂದಿಗೆ ಹೆಸರು ಮಾಡುವ ಮೂಲಕ ಇಲ್ಲೊಬ್ಬ ಯುವ ರೈತ ಇತರರಿಗೆ ಮಾದರಿಯಾಗಿದ್ದಾರೆ. ಸರಗೂರು ತಾಲೂಕಿನ ಹಳಿಯೂರು ಗ್ರಾಮದ ರೈತ ಚಿನ್ನಯ್ಯ ಮೂರು ದಶಕಗಳಿಂದಲೂ ಮಳೆ ಆಶ್ರಯದಲ್ಲೇ ತಂಬಾಕು ಬೆಳೆಯುವ ಮೂಲಕ ಹೆಸರಿನ ಜತೆಗೆ ಲಾಭ ಮಾಡುತ್ತಿದ್ದಾರೆ.

    ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಿಯೂರು ಗ್ರಾಮದ ಚಿನ್ನಯ್ಯ ತಮ್ಮ ತಂದೆ ಕಾಲದಿಂದಲೂ ಹೊಗೆಸೊಪ್ಪನ್ನು ಪ್ರಮುಖ ಬೆಳೆಯಾಗಿಸಿಕೊಂಡಿದ್ದು, ಜೀವನ ಕಂಡುಕೊಂಡಿದ್ದಾರೆ. ಈ ನಡುವೆ ಕೆಲವು ವರ್ಷ ವ್ಯವಸಾಯದಿಂದ ದೂರವಿದ್ದು, ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು. ನಂತರ ರಾಜಕಾರಣದತ್ತ ಮುಖ ಮಾಡಿದರು. ಆದರೆ ಅದರಲ್ಲಿ ಯಾವುದೇ ತೃಪ್ತಿ ಕಾಣದೆ ಮತ್ತೆ ಕೃಷಿಯತ್ತ ಮುಖ ಮಾಡಿದ್ದಾರೆ.

    ಚಿನ್ನಯ್ಯ ಅವರ ಹೆಸರಿನಲ್ಲಿ ಇರುವ 8 ಎಕರೆ ಜಮೀನಿನ ಪೈಕಿ 6 ಎಕರೆ ಜಮೀನಿನಲ್ಲಿ ಹೊಗೆಸೊಪ್ಪು ಬೆಳೆಯುತ್ತಿದ್ದಾರೆ. ಜಮೀನಿಗೆ ಯಾವುದೇ ನೀರಾವರಿ ಸೌಲಭ್ಯ ಇಲ್ಲ. ಜತೆಗೆ ಕೊಳವೆ ಬಾವಿಯನ್ನೂ ಕೊರೆಸಿಲ್ಲ. ಆದರೂ ಮಳೆ ಆಶ್ರಯದಲ್ಲಿ ಉತ್ಕೃಷ್ಟ ತಂಬಾಕು ಬೆಳೆದು ಹೆಚ್ಚು ಲಾಭ ಗಳಿಸುವುದು ವಿಶೇಷ. ಅತ್ಯುತ್ತಮ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಕಾರಣ ಇವರ ಜಮೀನಿನಲ್ಲಿ ಬೆಳೆಯುವ ಹೊಗೆಸೊಪ್ಪಿನ ಗುಣಮಟ್ಟ ಉತ್ತಮ ವಾಗಿರುತ್ತದೆ.

    ತಂಬಾಕು ಬೆಳೆಯಲು ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಟ್ರೇ ಮೂಲಕ ನಾಟಿ ಮಾಡುವ ಇವರು ಕೋಕೋಪಿಟ್, ಮಣ್ಣು ಸಂರಕ್ಷಣಾ ಕ್ರಮ, ಅಗತ್ಯ ರಾಸಾಯನಿಕ ಗೊಬ್ಬರ ಬಳಕೆ ಇವರ ಯಶಸ್ಸಿನ ಗುಟ್ಟು. ಎ್ಸಿವಿ ತಂಬಾಕಿನಲ್ಲಿ ಸಿಎಚ್ 3 ತಳಿಯನ್ನು ನಾಟಿ ಮಾಡಿ ಪ್ರತಿ ಹೆಕ್ಟೇರ್‌ನಲ್ಲಿ 1,994 ಕೆಜಿ ಇಳುವರಿ ಪಡೆದಿದ್ದಾರೆ. ಅದರಲ್ಲಿ ಶೇ.52 ರಷ್ಟು ಉತ್ತಮ, ಶೇ.33 ರಷ್ಟು ಮಧ್ಯಮ ಹಾಗೂ ಶೇ.15 ರಷ್ಟು ಮಾತ್ರ ಕೆಳ ದರ್ಜೆಯ ತಂಬಾಕು ಬೆಳೆದಿದ್ದು, ಒಂದು ಎಕರೆಗೆ ಸರಾಸರಿ 800 ರಿಂದ 900 ಕೆಜಿ ಇಳುವರಿ ತೆಗೆಯುತ್ತಾರೆ.

    ತಂಬಾಕು ನಾಟಿಗೂ ಮೊದಲು ಜಮೀನಿಗೆ ಕೆರೆಗೋಡು, ಕುರಿ ಗೊಬ್ಬರ, ಐಟಿಸಿ ಕಂಪನಿ ನೀಡುವ ಬೇವಿನಹಿಂಡಿ ಹಾಕಿ ಜಮೀನು ಹದ ಮಾಡುತ್ತಾರೆ. ಮಳೆ ಬಂದ ನಂತರ ಜಮೀನಿಗೆ ತಂಬಾಕು ನಾಟಿ ಮಾಡುತ್ತಾರೆ. ಮೂವತ್ತು ದಿನದೊಳಗೆ ಮಳೆ ಬಿದ್ದದ್ದನ್ನು ನೋಡಿಕೊಂಡು ಮಂಡಳಿ ನೀಡುವ ಡಿಎಎನ್, ಸಿಎಎನ್, ಎಸ್‌ಒಪಿ ಮೊದಲಾದ ರಾಸಾಯನಿಕ ಗೊಬ್ಬರ ಹಾಕುತ್ತಾರೆ. ಇನ್ನು ಡಬಲ್ ಬ್ಯಾರನ್ ಹೊಗೆಸೊಪ್ಪು ಬೆಳೆಯಲು 3 ರಿಂದ 4 ಲಕ್ಷ ರೂ. ಖರ್ಚಾಗುತ್ತದೆ. ಪ್ರತಿ ಕೆಜಿ 250 ರಿಂದ 280 ರೂ.ಗೆ ಮಾರಾಟವಾಗುವುದರಿಂದ 11ಲಕ್ಷ ರೂ. ವರೆಗೆ ಮಾರಾಟವಾಗಿ 5 ರಿಂದ 6 ಲಕ್ಷ ರೂ. ಲಾಭ ಗಳಿಸಬಹುದು ಎಂಬುದು ರೈತ ಸಂತೋಷ ಅವರ ಅಭಿಪ್ರಾಯ.

    ಹೊಗೆಸೊಪ್ಪು ವಾರ್ಷಿಕ ಬೆಳೆಯಾದ ಕಾರಣ ಹೆಚ್ಚು ಕೂಲಿಯಾಳುಗಳು ಬೇಕಾಗುತ್ತದೆ. ಅಲ್ಲದೆ ಹೊಗೆಸೊಪ್ಪನ್ನು ಹದ ಮಾಡಲು ಉರುವಲು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಹೊಗೆಸೊಪ್ಪು ಬೆಳೆಗಾರರಿಗೆ ಯಾವಾಗಲೂ ಕೂಲಿಯಾಳುಗಳು ಹಾಗೂ ಉರುವಲು ಸಮಸ್ಯೆ ಕಾಡುತ್ತದೆ. ಮಹಾತ್ಮಗಾಂ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದ ನಂತರವಂತೂ ಕೂಲಿಗೆ ಆಳುಗಳೇ ಸಿಗುತ್ತಿಲ್ಲ. ಸ್ವಲ್ಪ ಸ್ಥಿತಿವಂತರು ಯಾಂತ್ರೀಕರಣಕ್ಕೆ ಮೊರೆ ಹೋಗಿದ್ದಾರೆ ನಮ್ಮಂತ ಬಡ ರೈತರು ತುಂಬಾ ಕಷ್ಟ ಪಡುವ ಪರಿಸ್ಥಿತಿ ಇದೆ ಎಂಬುದು ರೈತನ ಅಳಲು.

    ಭೂಮಿ ತಾಯಿಯನ್ನು ನಂಬಿ ಜಮೀನಿನಲ್ಲಿ ಉಳುಮೆ ಮಾಡಿದ್ದು, ಒಂದೇ ವರ್ಷದಲ್ಲಿ ಹೊಗೆಸೊಪ್ಪು ನನ್ನ ಕೈ ಹಿಡಿದಿದೆ. ನನಗೆ ಜಮೀನು ಮಾಡಲು ನನಗೆ ನನ್ನ ತಾಯಿ ಮತ್ತು ಪತ್ನಿ ಸಾಥ್ ನೀಡಿದರಿಂದ ನನಗೆ ತಂಬಾಕು ಬೆಳೆಲಾಭದಾಯಕವಾಗಿದೆ. ಹತ್ತಿ, ಜಿಯಾ ಬೆಳೆ ಬೆಳೆದು ಬಾರಿ ನಷ್ಟ ಉಂಟಾಗಿತ್ತು, ಆದರೂ ಕುಗ್ಗದೆ ಹೊಗೆಸೊಪ್ಪುನ್ನು ಮುಂಗಾರು ಮತ್ತು ಹಿಂಗಾರಿನಲ್ಲಿ ಬೆಳೆ ಬೆಳೆದಿದ್ದರಿಮದ ಹೆಚ್ಚು ಲಾಭ ಗಳಿಸಲು ಸಾಧ್ಯವಾಯಿತು.
    ಚಿನ್ನಯ್ಯ ತಂಬಾಕು ಬೆಳೆದ ರೈತ

    ನನ್ನ ಸ್ನೇಹಿತ ಹೊಗೆಸೊಪ್ಪು ಬೆಳೆದು ಅಕ್ಕಪಕ್ಕದ ಗ್ರಾಮದವರಿಗೆ ಮಾದರಿಯಾಗಿದ್ದಾರೆ. ಸ್ನೇಹಿತನನ್ನು ನೋಡಿ ನನಗೂ ಹೊಗೆಸೊಪ್ಪು ಬೆಳೆಯಲು ಮನಸ್ಸು ಬಂದಿದೆ. ತಂಬಾಕು ಬೆಳೆ ಬೆಳೆಯುವ ಸಂಬಂಧ ಅವರ ಬಳಿ ಮಾಹಿತಿ ಪಡೆದು ತಂಬಾಕು ಕೃಷಿಯಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಲು ಮನಸ್ಸು ಮಾಡಿದ್ದೇನೆ.
    ಸೋಮಣ್ಣ ಹಳೆಹೆಗ್ಗುಡಿಲು ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts