More

    ಸ್ಪ್ಯಾಮ್ ಕರೆ ತಡೆಗಟ್ಟಲು ಟ್ರೂ ಕಾಲರ್ ಜತೆ ಕೈ ಜೋಡಿಸಿದ ವಾಟ್ಸ್​ಆ್ಯಪ್!

    ನವದೆಹಲಿ: ನೀವು ವಾಟ್ಸ್​ಆ್ಯಪ್​ನಲ್ಲಿ ಅಂತಾರಾಷ್ಟ್ರೀಯ ನಂಬರ್​ಗಳಿಂದ ಸ್ಪ್ಯಾಮ್ ಕರೆಯನ್ನು ಪಡೆಯುತ್ತೀರಾ? ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ವಾಟ್ಸ್​ಆ್ಯಪ್​ ಸಂಸ್ಥೆ ಶೀಘ್ರದಲ್ಲೇ ಕೆಲವು ಹೊಸ ವೈಶಿಷ್ಟ್ಯಗಳನ್ನು ತರಲಿದೆ.

    ಟ್ರೂ ಕಾಲರ್​ ಜತೆ ಕೈ ಜೋಡಿಸಿದ ವಾಟ್ಸ್​ಆ್ಯಪ್!

    ವಾಟ್ಸ್​ಆ್ಯಪ್​ನಲ್ಲಿ ಸ್ಪ್ಯಾಮ್ ಕರೆಗಳನ್ನು ತಡೆಯುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಕಳೆದ ಕೆಲವು ದಿನಗಳಲ್ಲಿ, ನೀವು ಅಂತಹ ಅನೇಕ ಪ್ರಕರಣಗಳನ್ನು ನೋಡಿರಬೇಕು ಅಥವಾ ಅದಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಿರಬೇಕು. ಇತ್ತೀಚಿನ ದಿನಗಳಲ್ಲಿ, ವಾಟ್ಸ್​ಆ್ಯಪ್​ನಲ್ಲಿ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಬಳಕೆದಾರರಿಗೆ ಅಡಿಯೋ-ವಿಡಿಯೋ ಕರೆಗಳನ್ನು ಮಾಡಲಾಗುತ್ತಿದೆ. ಇದು ವಂಚನೆಯ ಹೊಸ ವಿಧಾನವಾಗಿ ಮಾರ್ಪಟ್ಟಿದ್ದು ಜನರು ಅಂತಹ ಕರೆಗಳನ್ನು ತೆಗೆದುಕೊಳ್ಳದಂತೆ ಸಲಹೆ ನೀಡಲಾಗುತ್ತಿದೆ.

    ಈಗ ಈ ಪ್ರಕರಣಗಳನ್ನು ನಿಲ್ಲಿಸಲು ವಾಟ್ಸ್​ಆ್ಯಪ್​ಏನು ಮಾಡುತ್ತಿದೆ ಎಂಬ ಪ್ರಶ್ನೆ ಎದ್ದಿದೆ. ಸ್ಪ್ಯಾಮ್ ಸಂದೇಶಗಳು ಮತ್ತು ಕರೆಗಳನ್ನು ನಿಗ್ರಹಿಸಲು, ವಾಟ್ಸ್​ಆ್ಯಪ್​ ಟ್ರೂ ಕಾಲರ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದಲ್ಲದೆ, ಅಪ್ಲಿಕೇಶನ್‌ಗೆ ಕೆಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗುತ್ತದೆ. ಇದು ಸ್ಪ್ಯಾಮ್ ಕರೆಗಳನ್ನು ಗುರುತಿಸಲು ಮತ್ತು ವ್ಯವಹರಿಸಲು ಬಳಕೆದಾರರಿಗೆ ಸಹಾಯ ಮಾಡಲಿದೆ.

    ಟ್ರೂ ಕಾಲರ್ ಹೇಗೆ ಕಾರ್ಯನಿರ್ವಹಿಸುತ್ತದೆ

    ಟೂಕಾಲರ್​ನ ಕೆಲಸ ಏನೆಂದರೆ ಸ್ಪ್ಯಾಮ್ ಕರೆಗಳನ್ನು ಗುರುತಿಸಿ ಫಿಲ್ಟರ್ ಮಾಡುವುದು. ಸುಮಾರು 35 ಕೋಟಿ ಬಳಕೆದಾರರು ಈ ಆ್ಯಪ್ ಬಳಸುತ್ತಿದ್ದಾರೆ. ನಿಮ್ಮ ಫೋನ್‌ನಲ್ಲಿ ನೀವು ಟ್ರೂ ಕಾಲರ್ ಹೊಂದಿದ್ದರೆ, ಕರೆ ಮಾಡುತ್ತಿರುವವರ ಹೆಸರನ್ನು ತಿಳಿಯುವ ಸೌಲಭ್ಯವನ್ನು ನೀವು ಪಡೆಯುತ್ತೀರಿ. ಇದರೊಂದಿಗೆ ನಿಮ್ಮ ಫೋನ್‌ನಲ್ಲಿ ಸೇವ್​ ಮಾಡದ ಸಂಖ್ಯೆಗಳನ್ನು ನೀವು ಗುರುತಿಸಬಹುದು. ಆದರೂ, ಈ ಟ್ರೂ ಕಾಲರ್ ಫಿಲ್ಟರ್ ವಾಟ್ಸ್​ಆ್ಯಪ್​ನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ವಾಟ್ಸ್​ಆ್ಯಪ್​ನ ಹೊಸ ವೈಶಿಷ್ಟ್ಯ ಯಾವಾಗ ಬರುತ್ತದೆ?

    ವಾಟ್ಸ್​ಆ್ಯಪ್​ನ ಹೊಸ ಸುರಕ್ಷತಾ ವೈಶಿಷ್ಟ್ಯ ಪ್ರಸ್ತುತ ಬೀಟಾ ಹಂತದಲ್ಲಿದೆ. ಅಂದರೆ ಅದರ ಪರೀಕ್ಷೆಯು ನಡೆಯುತ್ತಿದೆ. ಮೇ ತಿಂಗಳ ನಂತರ ಇದು ಜಾಗತಿಕವಾಗಿ ಬಿಡುಗಡೆ ಆಗಲಿದೆ ಎಂದು ನಂಬಲಾಗಿದೆ. ಟೂ ಕಾಲರ್ ಸೇವೆಯ ಹೊರತಾಗಿ, ಪ್ಲಾಟ್‌ಫಾರ್ಮ್‌ನಲ್ಲಿ ಸ್ಪ್ಯಾಮ್ ಅನ್ನು ತಡೆಯಲು ಕೆಲವು ಹೊಸ ವೈಶಿಷ್ಟ್ಯಗಳು ಲಭ್ಯವಿರುತ್ತವೆ ಎನ್ನಲಾಗಿದೆ.

    ವರದಿಗಳ ಪ್ರಕಾರ, ವಾಟ್ಸ್​ಆ್ಯಪ್​ ‘Silence Unknown Caller’ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಅಪರಿಚಿತ ಸಂಖ್ಯೆಗಳಿಂದ ಕರೆಗಳನ್ನು ಸ್ವಯಂಚಾಲಿತವಾಗಿ ಮ್ಯೂಟ್ ಮಾಡುತ್ತದೆ. ಅಪ್ಲಿಕೇಶನ್‌ನಲ್ಲಿನ ಕರೆ ವಿಭಾಗದಲ್ಲಿ ಈ ಕರೆಗಳನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ.

    ಹೊಸ ವೈಶಿಷ್ಟ್ಯ ಬರೋ ತನಕ ಏನು ಮಾಡಬೇಕು?

    ಹೊಸ ವಾಟ್ಸ್​ಆ್ಯಪ್​ ವೈಶಿಷ್ಟ್ಯಗಳು ಬಿಡುಗಡೆ ಆಗುವ ಮೊದಲು ಸ್ಪ್ಯಾಮ್ ಕರೆಗಳನ್ನು ತಡೆಯುವುದು ಹೇಗೆ? ಇದಕ್ಕಾಗಿ ನೀವು ಸ್ಪಾಮ್ ಸಂದೇಶಗಳು ಮತ್ತು ಕರೆಗಳನ್ನು ಬ್ಲಾಕ್ ಮಾಡಿ ರಿಪೋರ್ಟ್​ ಮಾಡಿ. ನಿಮಗೆ ಮುಂದಿನ ದಿನಗಳಲ್ಲಿ ಆ ಸಂಖ್ಯೆಯಿಂದ ಕರೆ-ಸಂದೇಶಗಳೇ ಬೇಡ ಎಂದು ನೀವು ಬಯಸಿದರೆ, ನೀವು ಆ ನಂಬರ್​ಅನ್ನು ಬ್ಲಾಕ್​ ಮಾಡಬೇಕು. ಹೊಸ ವೈಶಿಷ್ಟ್ಯ ಬರುವ ತನಕ ಯಾವುದೇ ಅಪರಿಚಿತ ಅಂತಾರಾಷ್ಟ್ರೀಯ ಕರೆಗಳನ್ನು ಸ್ವೀಕರಿಸದೇ ಇರುವುದು ಉತ್ತಮ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts