ರಾಯಚೂರಿನ ಹನುಮನ ಗುಡಿಯಲ್ಲಿ ಸುದೀಪ್ ದಂಪತಿಯಿಂದ ಹೋಮ,ಹವನ ವಿಶೇಷ ಪೂಜೆ

sudeep
Published on

ರಾಯಚೂರು: ಸ್ಯಾಂಡಲ್​ವುಡ್​​ ನಟ ಕಿಚ್ಚ ಸುದೀಪ್,  ಪತ್ನಿ ಪ್ರಿಯಾ ದಂಪತಿ ರಾಯಚೂರಿನ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ  ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತಾದ ಕೆಲವು ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿವೆ

ರಾಯಚೂರು ನಗರದ ಗಾಂಧಿ ವೃತ್ತದಲ್ಲಿರುವ ಹನುಮಾನ್  ದೇವಾಲಯ ಇತ್ತೀಚೆಗೆ ಉದ್ಘಾಟನೆಯಾಗಿದೆ. ಜೀರ್ಣೊದ್ದಾರ ವೇಳೆಯೂ ದೇವಾಲಯಕ್ಕೆ ಭೇಟಿ ನೀಡಿದ್ದ ಸುದೀಪ್ ಆಗ ಒಬ್ಬರೇ ಬಂದಿದ್ದರು. ಈಗ ಪತ್ನಿಯನ್ನೂ ಕರೆತಂದು ಹನುಮಾನ್​ಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ತಮ್ಮೂರಿಗೆ ನೆಚ್ಚಿನ ನಟ ಬಂದಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ, ಸುದೀಪ್ ನೋಡಲು ಬಿರು ಬಿಸಿಲಿನಲ್ಲಿ ಅಭಿಮಾನಿಗಳು ಕಾದು ನಿಂತಿದ್ದರು. ಸದ್ಯ ಸುದೀಪ್ ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ತಮಿಳುನಾಡಿನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಚಿತ್ರೀಕರಣ ಕೊನೆ ಹಂತದಲ್ಲಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net