ಸಲೂನ್‌ನಲ್ಲಿ ಫೇಶಿಯಲ್‌ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ; ಸೌಂದರ್ಯ ಕಾಳಜಿ ಜತೆ ಆರೋಗ್ಯದ ಕುರಿತು ಎಚ್ಚರಿಕೆ ಇರಲಿ...

facial image (1)
ಸಾಂದರ್ಭಿಕ ಚಿತ್ರ
Published on

ನವದೆಹಲಿ:  ಮೆಕ್ಸಿಕೋದ ಸ್ಪಾದಲ್ಲಿ ಚರ್ಮದಲ್ಲಿ ಕಾಲಜಿನ್‌ ಉತ್ಪಾದನೆ ಹೆಚ್ಚಿಸಿ, ಚರ್ಮವು ಹೊಳೆಯುವಂತೆ ಮಾಡುವುದೇ ರಕ್ತಪಿಶಾಚಿ ಫೇಶಿಯಲ್‌ ಮಾಡಿಸಿಕೊಂಡ ಮೂವರು ಮಹಿಳೆಯರಿಗೆ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗಿದ್ದಾರೆ. ವ್ಯಾಂಪೈರ್‌ ಫೇಶಿಯಲ್‌ ಮಾಡಿಸಿಕೊಂಡ ಕಾರಣ ಇವರಿಗೆ ಎಚ್‌ಐವಿ ತಗುಲಿದೆ ಎಂಬ ಮಾಹಿತಿಯು ಅಧ್ಯಯನ ವರದಿಯಿಂದ ಲಭ್ಯವಾಗಿದೆ.

ವ್ಯಾಂಪೈರ್‌ ಫೇಶಿಯಲ್‌ಅನ್ನು ಕಡಿಮೆ ಬೆಲೆಗೆ ಮಾಡುವುದರಿಂದ ಹೆಚ್ಚಿನ ಮಹಿಳೆಯರು, ಅದರಲ್ಲೂ 40 ವರ್ಷ ದಾಟಿದವರು ಹೆಚ್ಚು ಮಾಡಿಸಿಕೊಳ್ಳುತ್ತಾರೆ. ಆದರೆ, ಇದು ಈಗ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ.

ಅಮೆರಿಕದ ನ್ಯೂ ಮೆಕ್ಸಿಕೋ ಸ್ಪಾದಲ್ಲಿ ಕಾಸ್ಮೆಟಿಕ್‌ ಇಂಜೆಕ್ಷನ್‌ ಪ್ರೊಸೀಜರ್‌ ಮೂಲಕ ನಡೆಸುವ ವ್ಯಾಂಪೈರ್‌ ಫೇಶಿಯಲ್‌ ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ ತಗುಲಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಮಾಹಿತಿ ನೀಡಿದೆ.

ವಯಸ್ಸಾದ ಮಹಿಳೆಯರು, ಸುಕ್ಕು ಗಟ್ಟಿದ ಚರ್ಮದ ಕಾಂತೀಯತೆಯನ್ನು ಸೂಜಿಯ ಮೂಲಕವೇ ಹೆಚ್ಚಿಸುವುದು ಇದರ ಪ್ರಮುಖ ವಿಧಾನವಾಗಿದೆ. ವ್ಯಾಂಪೈರ್‌ ಫೇಶಿಯಲ್‌ಅನ್ನು ರಕ್ತಪಿಶಾಚಿ ಫೇಶಿಯಲ್‌ ಎಂದೂ ಕರೆಯಲಾಗುತ್ತದೆ. ಸ್ಪಾಗಳಲ್ಲಿ ಸೂಜಿ ಅಥವಾ ಇಂಜೆಕ್ಷನ್‌ ಮೂಲಕ ಮಹಿಳೆಯರ ಮುಖದ ಮೇಲಿನ ಸುಕ್ಕು ಮಾಯಮಾಡುವುದು, ಅವರು ಯುವತಿಯರಂತೆ ಮಾಡುವ ಸೌಂದರ್ಯ ವರ್ಧಕ ವಿಧಾನ ಇದಾಗಿದೆ. ಇದನ್ನು ಪ್ಲೇಟ್‌ಲೆಟ್‌ ರಿಚ್‌ ಪ್ಲಾಸ್ಮಾ (PRP) ಅಥವಾ ಪ್ಲೇಟ್‌ಲೆಟ್‌ ರಿಚ್‌ ಫೈಬ್ರಿನ್‌ (PRF) ಎಂದು ಕೂಡ ಕರೆಯಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net