More

    ಕರೆಂಟ್​ ಬಿಲ್​ ವಿಚಾರವಾಗಿ ಶುರುವಾದ ಗಲಾಟೆ; ಅಧಿಕಾರಿ ಕೊಲೆಯಲ್ಲಿ ಅಂತ್ಯ

    ಪುಣೆ: ಕರೆಂಟ್​ ಬಿಲ್​ ವಿಚಾರವಾಗಿ ಶುರುವಾದ ಗಲಾಟೆ ಮಹಿಳೆ ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ತಾಲ್ಲೂಕಿನಲ್ಲಿ ನಡೆದಿದೆ. ಮೃತರನ್ನು ರಿಂಕು ಥಿಟೆ (26) ಎಂದು ಗುರುತಿಸಲಾಗಿದ್ದು, ಆರೋಪಿ ಅಭಿಜಿತ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಆರೋಪಿ ಅಭಿಜಿತ್​ ಪೋಟೆ ಈ ಹಿಂದೆ 570 ರೂಪಾಯಿಗಳ ಕರೆಂಟ್​ ಬಿಲ್​ ಬಂದಿದೆ ಎಂದು ಆರೋಪಿಸಿ ಸರಿಪಡಿಸುವಂತೆ MSEDCL ಅಧಿಕಾರಿಗಳ ಬಳಿ ಮನವಿ ಮಾಡಿದ್ದ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿರಲಿಲ್ಲ.

    ಇದನ್ನೂ ಓದಿ: ಆರ್​ಸಿಬಿ ಅಬ್ಬರಕ್ಕೆ ಬೆಚ್ಚಿದ ಕಾವ್ಯಾ ಮಾರನ್​; ಸೋಶಿಯಲ್​ ಮೀಡಿಯಾದಲ್ಲಿ ರಿಯಾಕ್ಷನ್​ ವೈರಲ್

    ಇದರಿಂದ ಕುಪಿತಗೊಂಡ ಆರೋಪಿಯು ಬುಧವಾರ (ಏಪ್ರಿಲ್ 24) ಈ ಬಗ್ಗೆ ಮತ್ತೊಮ್ಮೆ ಮಾತನಾಡಲು MSEDCL ಕಚೇರಿಗೆ ಆಗಮಿಸಿದ್ದ. ಈ ವೇಳೆ ಕಚೇರಿಯಲ್ಲಿದ್ದ ರಿಂಕು ಥಿಟೆ ಅವರ ಬಳಿ ತನಗಾದ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿ ವಿವರಣೆ ನೀಡುವ ವೇಳೆ ಆರೋಪಿಯು ಏಕಾಏಕಿ ಹರಿತವಾದ ಆಯುಧದಿಂದ ಆಕೆ ಮೇಲೆ ದಾಳಿ ಮಾಡಿದ್ದಾನೆ. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಘಟನೆ ಸಂಬಂಧ ಆರೋಪಿ ಅಭಿಜಿತ್​ನನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತನ ವಿರುದ್ಧ ಭಾರತ ದಂಡ ಸಂಹಿತೆ (IPC Section) 302 ಸೇರಿದಂತೆ ವಿವಿಧ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts