More

    ಪೋಷಕರ ಬೇಜವಾಬ್ದಾರಿ; ಮನೆಯಲ್ಲಿ ಮಲಗಿದ್ದ ಮಗಳಿಗಾಗಿ ಪೊಲೀಸರ ಜತೆ ಊರೆಲ್ಲಾ ಹುಡುಕಿದ್ರು!

    ಬೆಂಗಳೂರು: ದೊಡ್ಡ ಕುಟುಂಬಗಳು ಹೋಗಿ ಸಣ್ಣ ಅತಿಸಣ್ಣ ಕುಟುಂಬಗಳು ಹೆಚ್ಚುತ್ತಿವೆ. ಇಂದಿನ ಬ್ಯುಸಿ ಜೀವನದಲ್ಲಿ ಕೆಲಸ ಎಂದು ಸಮಯ ಕಳೆಯುತ್ತಾ ಮಕ್ಕಳು, ಪತ್ಮಿ, ಪತ್ನಿಗೆ ಸಮಯ ಕೊಡಲಾಗದಷ್ಟು ಕೆಲಸದಲ್ಲಿ ತೊಡಗಿಕೊಂಡಿರುತ್ತೇವೆ. ಗಡಿಬಿಡಿಯ ಜೀವನ ನಮ್ಮದಾಗಿದೆ. ಹೀಗೆ ಕೆಲವೊಮ್ಮೆ ನಮ್ಮ ಬೇಜವಾಬ್ದಾರಿ ದೊಡ್ಡ ಅವಾಂತರವನ್ನು ಸೃಷ್ಟಿ ಮಾಡುತ್ತದೆ ಎನ್ನುವುದಕ್ಕೆ ಪೂರಕವಾಗಿ ಒಂದು ಘಟನೆ ನಡೆದಿದೆ.

    ಬೆಂಗಳೂರಿನ ಕೆ.ಆರ್‌.ಪುರದ ಜನತಾ ಕಾಲೋನಿಯ ನಿವಾಸಿಗಳಾದ ಮೀನಾ ದಂಪತಿ ಮನೆಯಲ್ಲೇ ಇದ್ದ ತಮ್ಮ 6 ವರ್ಷದ ಮಗಳಿಗಾಗಿ ಪೊಲೀಸರ ಜತೆ ಸೇರಿ ಊರೆಲ್ಲಾ ಹುಡುಕಿದ್ದಾರೆ. ಕೊನೆಗೆ ಮನೆಗೆ ವಾಪಸ್‌ ಬಂದಾಗ ಮಗು ಮನೆಯಲ್ಲೇ ಇರುವುದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ.

    ಮೀನಾ ದಂಪತಿಗೆ 6 ವರ್ಷದ ಮುದ್ದಾದ ಮಗಳಿದ್ದಾಳೆ. ಆಕೆ ಮನೆಯಲ್ಲಿ ಕಾಣಿಸಿಲ್ಲ. ಈ ವಿಚಾರವಾಗಿ ದಂಪತಿ ಗಾಬರಿಗೊಂಡಿದ್ದಾರೆ. ನನ್ನ ಮಗು ಕಿಡ್ನ್ಯಾಪ್‌ ಆಗಿದೆ ಎಂದು ನಿನ್ನೆ ರಾತ್ರಿ 7.30 ಕ್ಕೆ ಕೆ.ಆರ್‌.ಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಗು ಮನೆ ಮುಂದೆ ಆಟವಾಡುತ್ತಿದಾಗ ಕಾಣೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಗಳನ್ನು ಎಲ್ಲಾ ಕಡೆ ಹುಡುಕಾಟ ನಡೆಸಿದ್ರೂ ಸಿಗಲಿಲ್ಲ. ಹೀಗಾಗಿ ಕಂಪ್ಲೇಟ್ ಕೊಡಲು ಬಂದಿದ್ದೇವೆ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ತಕ್ಷಣ ಪೊಲೀಸರು ಹುಡುಕಾಟ ಆರಂಭಿಸಿದರು. ಪೊಲೀಸರ ಜೊತೆ ಮಗಳಿಗಾಗಿ ಪೋಷಕರು ಅಕ್ಕಪಕ್ಕದ ಏರಿಯಾಗಳಲ್ಲೆಲ್ಲಾ ಹುಡುಕಾಟ ನಡೆಸಿದ್ದಾರೆ.

    ಇದನ್ನೂ ಓದಿ: ಪುರಾಣ ಪ್ರಸಿದ್ಧ ಕದ್ರಿ ದೇವಸ್ಥಾನಕ್ಕೆ ನುಗ್ಗಲು ಪ್ರಯತ್ನಿಸಿದ ಅನ್ಯ ಕೋಮಿನವರು! ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು…

    ಪೊಲೀಸರು ಮಗುವಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ನಂತರ ಕಿಡ್ನಾಪ್ ಆದ ಸ್ಥಳದಲ್ಲಿ ಏನಾದರೂ ಮಾಹಿತಿ ಸಿಗಬಹುದಾ ಎಂದು ಹುಡುಕಲು ಪೊಲೀಸರು ತೆರಳಿದ್ದಾರೆ. ಈ ವೇಳೆ ಮನೆಯಲ್ಲೇ ಮಗು ನಿದ್ದೆ ಮಾಡುತ್ತಿರುವುದು ಅವರಿಗೆ ತಿಳಿದುಬಂದಿದೆ. ಮನೆಯಲ್ಲಿ ಗುಡ್ಡೆ ಹಾಕಿದ್ದ ಬಟ್ಟೆಗಳ ಅಡಿಯಲ್ಲಿ ತಮ್ಮ ಮಗಳು ಮಲಗಿರುವುದನ್ನು ಕಂಡು ಮೀನಾ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ.

    ಮಗಳು ಮಲಗಿದಾಗ ತಾಯಿ ಒಣಗಿದ್ದ ಬಟ್ಟೆಯನ್ನು ಮಗುವಿನ ಮೇಲೆ ತಂದು ಹಾಕಿದ್ರು, ಮಗು ಮಲಗಿ ಚೆನ್ನಾಗಿ ನಿದ್ರಿಸುತ್ತಿತ್ತು. ತಾಯಿ ಬಟ್ಟೆ ಹಾಕಿದ್ರೂ ಎಚ್ಚರಗೊಡಿರಲಿಲ್ಲ. ಪೋಷಕರ ಬೇಜಾವಾಬ್ದಾರಿಗೆ ಪೊಲೀಸರು ಸುಸ್ತೋ ಸುಸ್ತೋ.

    ಸಿದ್ದರಾಮಯ್ಯಗೆ ಎಡಗೈ ನೋವು; ಮನೆಗೆ ಆಗಮಿಸಿದ ವೈದ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts