VIDEO: ಇದು ಮುಸ್ಲಿಂ ರಾಷ್ಟ್ರ ಎನ್ನುತ್ತ ಒಂದೊಂದೇ ಗಣಪತಿ ಮೂರ್ತಿಯನ್ನು ನೆಲಕ್ಕೆಸೆದಳು ಬುರ್ಖಾಧರಿಸಿದ ಮಹಿಳೆ!

burkha
Published on

ಬರಹೇನ್‌: ಗಣೇಶ ಚತುರ್ಥಿ ಇನ್ನೇನು ಆರಂಭವಾಗಲಿದೆ. ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಈ ಬಾರಿ ಗಣೇಶನ ಹಬ್ಬವನ್ನು ಅದ್ಧೂರಿಯಾಗಿ ಮಾಡುತ್ತಿಲ್ಲವಾದರೂ ಗಣೇಶನ ಮೂರ್ತಿಯ ಖರೀದಿಗೇನೂ ಕಮ್ಮಿ ಇಲ್ಲ.

ಗಣೇಶನ ಹಬ್ಬ ಭಾರತದಲ್ಲಿ ಮಾತ್ರವಲ್ಲದೇ, ವಿದೇಶಗಳಲ್ಲಿಯೂ ಭಾರಿ ಜನಪ್ರಿಯವಾಗಿದೆ. ಬಹರೇನ್‌ನಲ್ಲಿಯೂ ಗಣೇಶನ ಹಬ್ಬವನ್ನು ಭಾರತೀಯರು ವಿಜೃಂಭಣೆಯಿಂದ ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿ ಅಲ್ಲಿಯ ಮಾಲ್‌ಗಳಲ್ಲಿ ಈಗ ಗಣೇಶನ ಮೂರ್ತಿಗೆ ಬೇಡಿಕೆ ಹೆಚ್ಚಿದೆ.

ಇದೇ ಕಾರಣಕ್ಕೆ ಇಲ್ಲಿಯ ಮನಾಮದ ಜುಫೈರ್‌ ಎಂಬಲ್ಲಿನ ಶಾಪಿಂಗ್‌ ಮಾಲ್‌ ಒಂದರಲ್ಲಿ ಗಣೇಶನ ವಿಗ್ರಹಗಳನ್ನು ಮಾರಾಟಕ್ಕೆ ಇರಿಸಲಾಗಿದೆ. ಮಾಲ್‌ ಒಳಗೆ ಬಂದಿದ್ದ ಇಬ್ಬರು ಬುರ್ಖಾಧಾರಿಗಳ ಪೈಕಿ ಒಬ್ಬಾಕೆ, ಅಲ್ಲಿರುವ ಎಲ್ಲಾ ಗಣೇಶನ ಮೂರ್ತಿಗಳನ್ನು ಎತ್ತಿ ಎತ್ತಿ ಬೀಸಾಕಿದ್ದಾಳೆ. ಅದನ್ನು ಅಲ್ಲಿರುವವರೊಬ್ಬರು ಚಿತ್ರೀಕರಿಸಿದ್ದಾರೆ. ಇದು ಮುಸ್ಲಿಂ ದೇಶ. ಇಲ್ಲಿ ಗಣೇಶನ ಮೂರ್ತಿ ಇಡಬಾರದು ಎಂದು ಈ ಮಹಿಳೆ ಆವೇಷ ವ್ಯಕ್ತಪಡಿಸಿದ್ದಾಳೆ.

ಗಣಪತಿ ಮೂರ್ತಿಗಳನ್ನು ಛಿದ್ರಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಇದಕ್ಕೆ ಒಂದು ವರ್ಗ ಭಾರಿ ಹೆಮ್ಮೆ ಪಟ್ಟುಕೊಂಡಿದೆ. ಈ ಮೂರ್ತಿ ಒಡೆದಿರುವುದನ್ನು ಸಂತೋಷದಿಂದ ಹಂಚಿಕೊಳ್ಳಲಾಗಿದೆ. ಹಲವರು ‘ಗುಡ್‌ ಜಾಬ್‌’ ಎಂದಿದ್ದರೆ, ಇನ್ನು ಕೆಲವರು ‘ಈ ಮಹಿಳೆಯನ್ನು ಶ್ಲಾಘಿಸಬೇಕು’ ಎಂದಿದ್ದಾರೆ. ಅದಕ್ಕೆ ಒಬ್ಬಾತ ಪ್ರತಿಕ್ರಿಯೆ ನೀಡಿ, ಅಲ್ಹಾನ ಆದೇಶ ಬಂದರೆ ಮಾತ್ರ ಈ ರೀತಿ ಕೃತ್ಯ ಎಸಗಬೇಕು, ಇಲ್ಲದಿದ್ದರೆ ಹಾಗೆ ಮಾಡುವುದು ಅಪರಾಧ ಎಂದಿದ್ದಾರೆ.

ಮಹಿಳೆಯ ಕೃತ್ಯಕ್ಕೆ ಹಿಂದೂ ಧರ್ಮದವರಿಂದ ಭಾರಿ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ವಿಡಿಯೋ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ, ಶಾಪಿಂಗ್‌ ಮಾಲ್‌ಗೆ ಹಾನಿಗೊಳಿಸಿದ ಮತ್ತು ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಅಡಿಯಲ್ಲಿ ಪೊಲೀಸರು 54 ವರ್ಷದ ಮಹಿಳೆಯೊಬ್ಬರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net