More

    ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

    ಗದಗ: ಸರ್ಕಾರಿ ಆಸ್ಪತ್ರೆ ಎಂದರೆ ಕಳಪೆ ಎನ್ನುವ ಮನೋಭಾವ ಹಲವರದ್ದು. ಇದು ಬಡವರಿಗಾಗಿ ಮಾತ್ರ ಇರುವಂಥದ್ದು, ಆದ್ದರಿಂದಲೇ ಈ ಆಸ್ಪತ್ರೆಗೆ ಶ್ರೀಮಂತರು ಬರುವುದೇ ಇಲ್ಲ. ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದೇ ಬಹುತೇಕ ಎಲ್ಲರೂ ಆಡಿಕೊಳ್ಳುವುದು ಉಂಟು.

    ಆದರೆ ಇವೆಲ್ಲಾ ಹೇಳಿಕೆಗಳು ಸುಳ್ಳು, ಸರ್ಕಾರಿ ಆಸ್ಪತ್ರೆಯೆಂದರೆ ಹೀಗಳೆಯುವುದು ಸಲ್ಲದು ಎಂದು ಶ್ರೀಮಂತರು, ರಾಜಕೀಯ ಧುರೀಣರು ಬಾಯಿಯಿಂದ ಹೇಳುತ್ತಿದ್ದರೂ ಅದನ್ನು ಮಾಡಿತೋರಿಸುವವರು ವಿರಳಾತಿವಿರಳ.

    ಆದರೆ ಬಾಯಿಯಿಂದ ಹೇಳುವುದನ್ನು ಕರ್ತವ್ಯದ ಮೂಲಕ ಮಾಡಿ ತೋರಿಸಿದ್ದಾರೆ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು. ತಮ್ಮ ಪತ್ನಿಯ ಡೆಲಿವರಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಇದನ್ನೂ ಓದಿ: ದನ ಕಾಯೋ ಕೆಲ್ಸ ಮಾಡುತ್ತಲೇ ಯುಪಿಎಸ್ಸಿ ಪಾಸ್​: ದರ್ಶನ್​ರ ಸ್ಪೂರ್ತಿಯ ಕತೆ ಇದು!

    ಕರೊನಾ ಸೋಂಕಿನ ಈ ದಿನಗಳಲ್ಲಿ ಕರೊನಾ ಹೊರತಾಗಿ ಯಾವುದೇ ಪ್ರಕರಣಗಳಿಗೆ ಸರ್ಕಾರ ಆಸ್ಪತ್ರೆಗೆ ಹೋಗಲು ಭಯ ಪಡುವ ಈ ದಿನಗಳಲ್ಲಿಯೂ ಜಿಲ್ಲಾಧಿಕಾರಿಯವರು ಸರ್ಕಾರಿ ಆಸ್ಪತ್ರೆಯನ್ನೇ ಆಯ್ಕೆ ಮಾಡಿಕೊಂಡಿರುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಗದಗದ ಕೆಸಿ ರಾಣಿ ರಸ್ತೆಯ ದುಂಡಪ್ಪ, ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಶಸ್ತ್ರಚಿಕಿತ್ಸೆ ಮೂಲಕ ಇವರ ಪತ್ನಿಯ ಹೆರಿಗೆ ಮಾಡಲಾಗಿದ್ದು, ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

    ಕಂದನ ನೋಡುವ ಮೊದಲೇ ಪೈಲಟ್‌ ದುರ್ಮರಣ: ಸಾವಿನ ಅರಿವಿಲ್ಲದ ತುಂಬುಗರ್ಭಿಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts