More

    ದನ ಕಾಯೋ ಕೆಲ್ಸ ಮಾಡುತ್ತಲೇ ಯುಪಿಎಸ್ಸಿ ಪಾಸ್​: ದರ್ಶನ್​ರ ಸ್ಪೂರ್ತಿಯ ಕತೆ ಇದು!

    ಬೆಂಗಳೂರು: ಯುಪಿಎಸ್​ಸಿ ಪರೀಕ್ಷೆ ಬರೆದು ರ್ಯಾಂಕ್ ಪಡೆಯುವುದು ಅಭ್ಯರ್ಥಿಗಳಿಗೆ ಸಲುಭವಾಗಿರಲಿಲ್ಲ. ಅವರು ಪಟ್ಟ ಕಠಿಣ-ಪರಿಶ್ರಮದ ಬಗ್ಗೆ ಅವರ ಮಾತುಗಳಲ್ಲೇ ಕೇಳೋಣ..

    ದನ ಕಾಯೋ ಕೆಲ್ಸನೇ ತುಂಬಾ ಖುಷಿ ನೀಡುತ್ತೆ…

    ನನಗೆ ಕೃಷಿ ಮಾಡೋದು ಅಂದ್ರ ತುಂಬಾ ಇಷ್ಟ. ಯುಪಿಎಸ್​ಸಿ ಪರೀಕ್ಷೆ ಸಿದ್ಧತೆ ನಡೆಸುತ್ತಲೇ ದನ ಕಾಯೋ ಕೆಲ್ಸ ಆರಂಭಿಸಿದೆ. ನನ್ನದು ದನ ಕಾಯೋ ಕೆಲ್ಸ ಮಾಡುತ್ತಲೇ ಯುಪಿಎಸ್ಸಿ ಪಾಸ್​: ದರ್ಶನ್​ರ ಸ್ಪೂರ್ತಿಯ ಕತೆ ಇದು!‘ದನದಿಂದ ಧನ’ ಸಂಪಾದಿಸುವ ಹಾದಿ ಕಂಡುಕೊಳ್ಳಬೇಕೆಂಬ ಪ್ರಯತ್ನದಲ್ಲಿ ನಿರತನಾದೆ ಎನ್ನುತ್ತಾರೆ ಕನ್ನಡದಲ್ಲಿ ಪರೀಕ್ಷೆ ಬರೆದು 594ನೇ ರ್ಯಾಂಕ್​ ಪಡೆದ ಎಚ್.ಜಿ.ದರ್ಶನ ಕುಮಾರ್.

    ವಿಜಯವಾಣಿ ನೇರ ಫೋನ್​ ಇನ್​ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಚಿಕ್ಕವಯಸ್ಸಿನಲ್ಲೇ ನನ್ನ ಅಪ್ಪ ಬಳಿ ಕೃಷಿ ಮಾಡುತ್ತೇನೆ ಎಂದು ಕೇಳಿದಾಗ, ಅಪ್ಪ ಎಲ್ಲರಂತೆಯೇ ‘ಹೋಗು ನಾವು ಮಾಡುತ್ತಿರೋದೇ ಸಾಕು. ನೀನು ಓದಿ ಕೆಲ್ಸ ಹುಡಿಕೋ’ ಎಂದರು. ಅಂದು ಯಾಕೋ ಬೇಸರವಾಯಿತು. ಇಂಜಿನಿಯರಿಂಗ್ ಮುಗಿಸಿದ ಬಳಿಕ ನಾನು ಅಪ್ಪನ ಆಸೆಯಂತೆ ಇನ್ಪೋಸಿಸ್ ಕಂಪನಿಯಲ್ಲಿ ಕೆಲಸ ಆರಂಭಸಿದೆ. ಸ್ವಲ್ಪ ವರ್ಷ ಅಮೆರಿಕಾದಲ್ಲೂ ಕೆಲಸ ಮಾಡಿದೆ. ಇದಾದ ಮೇಲೆ ಏಕೋ..ಏನೋ ನನ್ನ ದೇಶಕ್ಕೆ ನಾನು ಮರಳಬೇಕು. ಅಲ್ಲೇ ಏನಾದರೂ ಮಾಡಬೇಕು ಎಂಬ ಹಂಬಲ ಹೆಚ್ಚಾಯಿತು. ಸೀದಾ ಹಳ್ಳಿಗೆ ಬಂದೆ. 2016ರಲ್ಲಿ ಯುಪಿಎಸ್​ಪಿ ಪರೀಕ್ಷೆ ಆರಂಭಿಸಿದೆ.

    ಮೊದಲ ಎರಡು ಬಾರಿ ಆಂಗ್ಲ ಭಾಷೆಯಲ್ಲಿ ಪರೀಕ್ಷೆ ಬರೆದೆ. ಆದರೆ, ಪಾಸ್ ಆಗಲಿಲ್ಲ. ಆಂಗ್ಲ ಭಾಷೆಯಲ್ಲಿ ಉತ್ತರಗಳನ್ನು ಬರೆಯುವ ಬದಲು ನಾನು ಓದಿ ಕಲಿತ ಕನ್ನಡ ಭಾಷೆಯಲ್ಲಿ ಏಕೇ ಪ್ರಯತ್ನ ಮಾಡಬಾರದು ಎಂಬ ಆಲೋಚನೆ ಬಂತು. ಆನಂತರ ಕನ್ನಡದಲ್ಲೇ ಪರೀಕ್ಷೆ ಬರೆದೆ. ಕನ್ನಡ ನನ್ನ ಮಾತೃಭಾಷೆ. ಇದರಲ್ಲಿ ವಿಚಾರಗಳನ್ನು ಸುಸಲಿತವಾಗಿ ತಿಳಿಸಲು, ಸೂಕ್ತ ಪದಗಳು ನನಗೆ ಲಭ್ಯವಾಗುತ್ತಿದ್ದರಿಂದ ಕನ್ನಡವೇ ಸೂಕ್ತ ಎನಿಸಿತು. 4ನೇ ಪ್ರಯತ್ನದಲ್ಲಿ ಪಾಸ್ ಆದೆ.

    ಯುಪಿಎಸ್​ಸಿ ಪರೀಕ್ಷೆ ಬರೆಯುತ್ತೇನೆ ಎಂಬ ಕಾರಣಕ್ಕೆ ನಾನು ದನ ಕಾಯೋ ಕೆಲ್ಸ ಬಿಟ್ಟಿರಲಿಲ್ಲ. ನಾನು ಒಂದೆರಡು ಹಸುಗಳಿಂದ ನನ್ನ ಕೆಲಸ ಆರಂಭಿಸಿದೆ. ಇಂದು 20 ಹಸುಗಳನ್ನು ಸಾಕುವ ಹಂತಕ್ಕೆ ತಲುಪಿದ್ದೇನೆ. ಮೊದಲಿಗೆ ಅಮೆರಿಕಾದಿಂದ ಹಳ್ಳಿಗೆ ಬಂದು ದನ ಕಾಯೋ ಕೆಲ್ಸ ಬೇಕಾ? ಎಂದು ಹೇಳುತ್ತಿದ್ದವರೇ ಹೆಚ್ಚು. ನಮ್ಮ ಕುಟುಂಬ ಸದಸ್ಯದವರೇ ಸೇರಿ ಕೆಲ್ಸ ಮಾಡುತ್ತೇವೆ. ಮಾಸಿಕ 50 ಸಾವಿರ ರೂ.ಆದಾಯ ಬರುತ್ತಿದೆ. ಅಂದು ಹೀಯಾಳಿಸಿ ಮಾತನಾಡಿದವರು ಇಂದು ನನ್ನ ಬಳಿ ಸಲಹೆ ಪಡೆಯುತ್ತಿದ್ದಾರೆ.

    ಸರ್ಕಾರದಲ್ಲಿ ಕೃಷಿ ಮಾಡುವವರಿಗೆ ಸಾಕಷ್ಟು ಸೌಲಭ್ಯಗಳಿವೆ. ಆದರೆ, ಇವು ರೈತರಿಗೆ ತಿಳಿದಿಲ್ಲ. ಸರ್ಕಾರದ ಯೋಜನೆಗಳು ಸಹ ಸಮರ್ಪಕವಾಗಿ ತಲುಪುತ್ತಿಲ್ಲ. ಇರುವ ಜಮೀನಿನಲ್ಲೇ ಮಾಸಿಕ 1 ಲಕ್ಷ ರೂ.ಅದಾಯ ಬರುವಂತೆ ಮಾಡಬೇಕೆಂಬುದು ನನ್ನ ಉದ್ದೇಶವಾಗಿದೆ. ಸರ್ಕಾರಿ ಸೇವೆ ಆರಂಭಿಸಿದರೂ ಸಹ ನಾನು ನನ್ನ ಕೃಷಿ ಬಿಡುವುದಿಲ್ಲ. ಕೃಷಿ ಮಾಡುವ ಹಂಬಲವಿರುವ ಯುವ ಉತ್ಸಾಹಿಗಳನ್ನು ಒಗ್ಗೂಡಿಸಿ ಕೃಷಿಯಲ್ಲಿ ತೊಡಗಿಸುವಂತೆ ಮಾಡುತ್ತೇನೆ.

    ಕನ್ನಡದಲ್ಲೇ ಬರೆಯಿರಿ: ಯುಪಿಎಸ್​ಸಿ ಎಂದಾಕ್ಷಣ ಇದು ಚೆನ್ನಾಗಿ ಆಂಗ್ಲ ಭಾಷೆ ಬಲ್ಲ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾತ್ರ ಎಂಬುದು ಸುಳ್ಳು. ನಾನು ಕನ್ನಡ ಭಾಷೆಯಲ್ಲೇ ಬರೆದು ಪಾಸ್ ಆಗಿದ್ದೇನೆ. ಆಂಗ್ಲ ಬಲ್ಲವರಿಗೆ ಮಾತ್ರವೇ ಯುಪಿಎಸ್​ಸಿ ಅಂದುಕೊಳ್ಳುವುದು ತಪ್ಪು. ಇಂದು ಕೆಎಎಸ್ ಅಧಿಕಾರಿಗಳಾಗಿರುವ ಬಹುತೇಕರಿಗೆ ಯುಪಿಎಸ್​ಸಿ ಬರೆದು ಪಾಸ್ ಆಗುವ ಸಾಮರ್ಥ್ಯ ಇದೆ. ಆದರೆ, ಅವರಲ್ಲಿ ಕೀಳಿರಿಮೆ ಮತ್ತು ಆಂಗ್ಲ ಭಾಷೆಯ ಬಗ್ಗೆ ಭಯ ಇದೆ. ಭಯ ಬಿಟ್ಟು ಕನ್ನಡದಲ್ಲಿ ಪರೀಕ್ಷೆ ಬರೆಯಿರಿ ಎಂದು ಸಲಹೆ ನೀಡಿದರು ದರ್ಶನ್​.

    ಯುಪಿಎಸ್ಸಿ ಆಕಾಂಕ್ಷಿಗಳ ಪ್ರಶ್ನೆಗಳಿಗೆ ವಿಜಯವಾಣಿ ಫೋನ್​ ಇನ್​ನಲ್ಲಿ ಟಾಪರ್​ಗಳು ನೀಡಿದ ಉತ್ತರಗಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts