

Murder Case: ತನ್ನ ಕುಟುಂಬದ ಸದಸ್ಯರನ್ನೇ ಭೀಕರವಾಗಿ ಹತ್ಯೆಗೈದಿರುವ ಆರೋಪಿ ಯುವಕ, ಅಜ್ಜಿ, ಕಿರಿಯ ಸಹೋದರ, ತಂದೆ ಅಣ್ಣ ಮತ್ತು ಅವರ ಪತ್ನಿ ಸೇರಿದಂತೆ ಕುಟುಂಬದ ಐವರನ್ನು ಕ್ರೂರವಾಗಿ ಕೊಲೆಗೈದ ಘಟನೆ ಕೇರಳದ ತಿರುವನಂತಪುರಂನಲ್ಲಿ ಸಂಭವಿಸಿದೆ.
ನಾಲ್ವರು ಕುಟುಂಬಸ್ಥರು ಮತ್ತು ಓರ್ವ ಯುವತಿ ಸಾವಿಗೀಡಾದವರು ಎಂದು ವರದಿ ಉಲ್ಲೇಖಿಸಿದೆ. ಮೃತರನ್ನು ಅಜ್ಜಿ ಸಲ್ಮಾಬೀಬಿ, ಸಹೋದರ ಅಫ್ಸಾನ್ (13), ಯುವಕನ ತಂದೆಯ ಸಹೋದರ ಲತೀಫ್, ಲತೀಫ್ ಪತ್ನಿ ಶಾಹಿದಾ ಮತ್ತು ಓರ್ವ ಯುವತಿ ಎಂದು ಆರಂಭಿಕ ತನಿಖೆಯಲ್ಲಿ ಗುರುತಿಸಲಾಗಿದೆ. ಈ ಪೈಕಿ ಯುವತಿ ಫರ್ಸಾನಾಳ ಆರೋಪಿ ಅಫಾನ್ ಪ್ರೇಯಸಿ ಎಂಬುದು ದೃಢವಾಗಿದೆ. ಫೆ.24ರ ಮುಂಜಾನೆ, ಪೊಲೀಸರಿಗೆ ಕರೆ ಮಾಡಿದ ಅಫಾನ್, ತನ್ನ ಕುಟುಂಬದ ಐದು ಮಂದಿಯನ್ನು ಭೀಕರವಾಗಿ ಹಲ್ಲೆಗೈದು ನಂತರ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.
ತನ್ನ ಕುಟುಂಬಸ್ಥರು ಹಾಗೂ ಪ್ರೇಯಸಿ ಫರ್ಸಾಳಾನ್ನು ಬರ್ಬರವಾಗಿ ಹತ್ಯೆಗೈದ ಅಫಾನ್, ತಂದೆಯ ಸಹೋದರ ಲತೀಫ್ ಮತ್ತು ಅವರ ಪತ್ನಿ ಶಾಹಿದಾಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಪ್ರತ್ಯೇಕವಾಗಿ ಇವರಿಬ್ಬರಿಗೂ ರಕ್ತ ಚಿಮ್ಮುವಂತೆ ಭೀಕರವಾಗಿ ಹಲ್ಲೆಗೈದಿದ್ದಾನೆ. ಆರೋಪಿಯ ಹೊಡೆತಕ್ಕೆ ನಲುಗಿದ ಲತೀಫ್ ಮತ್ತು ಅವರ ಪತ್ನಿ, ರಕ್ತದ ಮಡುವಿನಲ್ಲಿ ಬಿದ್ದು ನರಳಿ ಪ್ರಾಣಬಿಟ್ಟಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುವಂದಿದೆ.
ಪ್ರಾಥಮಿಕ ತನಿಖೆಯ ವರದಿ ಪ್ರಕಾರ, ಕುಟುಂಬದ ಐವರನ್ನು ಕೊಲ್ಲಲು ಅಫಾನ್ ಸುತ್ತಿಗೆಯನ್ನು ಬಳಸಿದ್ದಾನೆ. ಮನೆಯಲ್ಲಿ ಯಾವುದೇ ಕಳ್ಳತನದ ಕೆಲಸಗಳು ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ, ಸುತ್ತಿಗೆ ಹಿಡಿದಿದ್ದ ಅಫಾನ್, ಹಣಕ್ಕಾಗಿ ರೂಮ್ನಲ್ಲಿದ್ದ ವಾರ್ಡ್ರೋಬ್ನ ಬಲವಂತವಾಗಿ ತೆರೆಯಲು ಪ್ರಯತ್ನಿಸಿದ್ದಾನೆ. ಮಾದಕ ವ್ಯಸನಿಯಾಗಿದ್ದ ಅಫಾನ್, ಐವರನ್ನು ಹತ್ಯೆಗೈಯುವ ಮುನ್ನ ನಶೆಯಲ್ಲಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ತಾನೇ ಕೊಲೆ ಮಾಡಿರುವುದಾಗಿ ಅಫಾನ್ ತಪ್ಪೊಪ್ಪಿಕೊಂಡಿದ್ದೇ ಆದರೂ ಕೊಲೆಗೈಯುವ ಉದ್ದೇಶವೇನು ಎಂಬುದು ಇನ್ನೂ ಬಾಯ್ಬಿಟ್ಟಿಲ್ಲ. ಆತನನ್ನು ಬಂಧಿಸಲು ಬಂದ ಪೊಲೀಸರಿಗೆ ತಾನು ವಿಷ ಸೇವಿಸಿರುವುದಾಗಿ ತಿಳಿಸಿದ. ತಕ್ಷಣವೇ ಆತನನ್ನು ಆಸ್ಪತಗ್ರೆ ದಾಖಲಿಸಿದ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆಯ ನಡುವೆಯೇ ಕೊಲೆ ಹಿಂದಿನ ಉದ್ದೇಶ ತಿಳಿಯಲು ವಿಚಾರಣೆ ಕೈಗೊಂಡ ಪೊಲೀಸರಿಗೆ ಇದೊಂದು ಕೌಟುಂಬಿಕ ಕಲಹ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ, ಇಲ್ಲಿ ಹಲವು ಕೋನಗಳು ಉದ್ಬವಗೊಂಡಿದ್ದು, ಇದೇ ಕಾರಣಕ್ಕೆ ಆರೋಪಿ ಕೊಲೆಗೈದಿದ್ದಾನೆ ಎಂಬುದನ್ನು ದೃಢವಾಗಿ ಹೇಳುವುದು ಸದ್ಯ ಪೊಲೀಸರಿಗೆ ಸವಾಲಾಗಿದೆ.
ಈ ಭೀಕರ ಕೃತ್ಯದ ಹಿಂದಿನ ಕಾರಣ ನಿಗೂಢವಾಗಿಯೇ ಉಳಿದಿರುವುದು ಪೊಲೀಸರ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಅಫಾನ್ ತನ್ನ ತಾಯಿ ಮತ್ತು ಲತೀಫ್ ಬಳಿ ಸುಮಾರು 1.5 ಲಕ್ಷ ರೂಪಾಯಿ ಹಣವನ್ನು ಸಾಲವಾಗಿ ಪಡೆದಿದ್ದ. ಇದನ್ನು ವಾಪಾಸ್ ಕೊಡುವಂತೆ ಲತೀಫ್ ಅಫಾನ್ಗೆ ಹೇಳಿದ್ದರು. ಆದ್ರೆ, ಪದೇ ಪದೇ ಕೊಡುವಂತೆ ಪೀಡಿಸಿದ್ದರೋ ಎಂಬುದು ಸ್ಪಷ್ಟವಿಲ್ಲ ಎಂದು ಮೃತ ಲತೀಫ್ ಸಹೋದರ ಬದರುದ್ದೀನ್ ಹೇಳಿದ್ದಾರೆ. ಹಣ ವಾಪಾಸ್ ಕೊಡುವಂತೆ ಕೇಳಿದ್ದೇ ಬರ್ಬರ ಹತ್ಯೆಗೆ ಕಾರಣ ಎನ್ನುವಷ್ಟರಲ್ಲೇ ಮತ್ತೊಂದು ವಿಷಯ ಪ್ರಕರಣದ ದಿಕ್ಕನ್ನು ಬದಲಿಸಿದೆ. ಅದು ಪ್ರೇಯಸಿಯ ಸಾವು.
ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದ ಪ್ರೇಯಸಿ ಫರ್ಸಾನಾ ಮತ್ತು ತನ್ನ ನಡುವಿನ ಪ್ರೀತಿ ಸಂಬಂಧವನ್ನು ಅಫಾನ್ ತನ್ನ ತಾಯಿಯ ಬಳಿ ಪ್ರಸ್ತಾಪಿಸಿದ್ದನ್ನು. ತಾನು ಅವಳನ್ನೇ ಮದುವೆಯಾಗುವುದಾಗಿಯೂ ಮನೆಯಲ್ಲಿ ತಿಳಿಸಿದ್ದ. ಆದರೆ, ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ ಲತೀಫ್, ಅಫಾನ್ ಮನೆಗೆ ಬಂದಿದ್ದ ಎನ್ನಲಾಗಿದೆ. ಲತೀಫ್ ಹಸ್ತಕ್ಷೇಪವು ಆರೋಪಿಯನ್ನು ಕೆರಳಿಸಿದ್ದು, ಭೀಕರವಾಗಿ ಕೊಲೆಗೈಯಲು ಪ್ರೇರಪಿಸಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಸದ್ಯ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಪೊಲೀಸರು, ಅಫಾನ್ ಬಳಿ ಹೆಚ್ಚುವರಿ ಮಾಹಿತಿಯನ್ನು ವಿಚಾರಣೆ ಮೂಲಕ ಕಲೆಹಾಕುತ್ತಿದ್ದಾರೆ. ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).