blank

ಮನೆಯಲ್ಲಿ ಈ 4 ವಸ್ತುಗಳಿದ್ದರೆ ಲಕ್ಷ್ಮಿ ಒಲಿಯುವುದಿಲ್ಲ! ಇದನ್ನು ಗಮನಿಸದೆ ಹೋದ್ರೆ ಕೈಯಲ್ಲಿ 1 ಪೈಸೆಯೂ ಉಳಿಯಲ್ಲ | Vastu Tips

blank

Vastu Tips: ಇಂದು ಯಾರಿಗೆ ತಾನೇ ಧನಲಕ್ಷ್ಮಿ ಬೇಡ? ವಿದ್ಯೆ ಇಲ್ಲದೇ ಹೋದ್ರೂ ಪರವಾಗಿಲ್ಲ ಹಣವೇ ಮೊದಲು. ಅದೇ ಮುಖ್ಯ ಎನ್ನುತ್ತಾರೆ ನಮ್ಮ ಜನ. ಪ್ರತಿಯೊಬ್ಬರಿಗೂ ಲಕ್ಷ್ಮಿದೇವಿಯ ಕೃಪಾಕಟಾಕ್ಷ ಬೇಕೇ ಬೇಕು. ಅದಕ್ಕಾಗಿಯೇ ನಾನಾ ರೀತಿಯ ಪೂಜಾ ಕಾರ್ಯಗಳನ್ನು ನಡೆಸುತ್ತಾರೆ. ಒಂದು ಬಾರಿ ಲಕ್ಷ್ಮಿ ಒಲಿದರೆ ಸಾಕು ಅವರ ಬದುಕು ಬಂಗಾರ, ಪ್ರತಿದಿನ ಸಿಂಗಾರ. ಆದ್ರೆ, ಒಮ್ಮೊಮ್ಮೆ ಅದೃಷ್ಟ, ಸಮಯ ಕೈಕೊಟ್ಟಾಗ ಹಗ್ಗವು ಹಾವಾದೀತು ಎಂಬುದರಲ್ಲಿ ಅಚ್ಚರಿಯೇ ಇಲ್ಲ ಬಿಡಿ. ದಿನವಿಡೀ ಕಷ್ಟಪಟ್ಟರೂ ದಿನಾಂತ್ಯದ ವೇಳೆಗೆ ಕೈಯಲ್ಲಿ ಒಂದು ರೂಪಾಯಿ ಕೂಡ ಉಳಿಯದ ಪರಿಸ್ಥಿತಿಯನ್ನು ಹಲವರು ನೋಡಿದ್ದಾರೆ. ಈ ಅನುಭವ ನಿಮಗೂ ಆಗಿರಬಹುದು. ಅಸಲಿಗೆ ಇದಕ್ಕಿರುವ ಕಾರಣಗಳೇನು? ವಾಸ್ತು ಶಾಸ್ತ್ರ ಹೇಳೋದೇನು? ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪನ! ಭಾರೀ ಶಬ್ದಕ್ಕೆ ಬೆಚ್ಚಿದ ಜನ | Earthquake

ಈ ವಿಷಯ ವಾಸ್ತು ಶಾಸ್ತ್ರದಲ್ಲಿ ಹೇಳುವುದಕ್ಕಿಂತ ನಮ್ಮ ಪೂರ್ವಜರು, ಅಂದಿನ ಕಾಲದಿಂದಲೂ ಇಂತಹ ಸಂಗತಿಗಳನ್ನು ಹೇಳಿಕೊಂಡು ಬಂದಿದ್ದಾರೆ. ಮನೆಯಲ್ಲಿ ಕೆಲವು ಬೇಡದ ವಸ್ತುಗಳನ್ನು ಇಡುವುದರಿಂದ ಅಥವಾ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿ ಮನೆಯೊಳಗೆ ಕಾಲಿಡುವುದಿಲ್ಲ ಎಂಬ ನಂಬಿಕೆಯನ್ನು ಮನೆ ಮಂದಿಗೆಲ್ಲಾ ತಿಳಿಸುತ್ತಿದ್ದರು. ಈ ವಿಷಯಗಳು ಈಗಲೂ ಅನೇಕರ ಮನೆಯಲ್ಲಿ ಒಂದು ಬಲವಾದ ನಂಬಿಕೆಯಾಗಿ ಉಳಿದಿದೆ. ಬಹುತೇಕರು ಅಂತಹ ವಿಚಾರಗಳನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ. ಅಷ್ಟಕ್ಕೂ ಯಾವ ವಸ್ತುಗಳು ಮನೆಯಲ್ಲಿದ್ದರೆ ಹಣ ಉಳಿಯೋದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಯಾವೆಲ್ಲ ವಸ್ತುಗಳು ಆರ್ಥಿಕ ಪರಿಸ್ಥಿತಿಗೆ ಅಡ್ಡಿಯಾಗುತ್ತವೆ? ಯಾವ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಮನೆಯಿಂದ ಹೊರಗಿಡಬೇಕು ಎಂಬುದರ ವಿವರ ಹೀಗಿದೆ.

ಮನೆಯಲ್ಲಿ ಈ 4 ವಸ್ತುಗಳಿದ್ದರೆ ಲಕ್ಷ್ಮಿ ಒಲಿಯುವುದಿಲ್ಲ! ಇದನ್ನು ಗಮನಿಸದೆ ಹೋದ್ರೆ ಕೈಯಲ್ಲಿ 1 ಪೈಸೆಯೂ ಉಳಿಯಲ್ಲ | Vastu Tips

ನಿಂತ ಗಡಿಯಾರಗಳು

ನಮ್ಮ ದಿನನಿತ್ಯ ಜೀವನದ ಭಾಗವಾಗಿರುವ ಹಾಗೂ ನಾವು ನಿಂತರು ನಿಲ್ಲದ ಸಮಯವನ್ನು ಸರಿಯಾಗಿ ತೋರಿಸುವ ವಿಧ ವಿಧವಾದ ಗಡಿಯಾರಗಳು. ಮನೆಯ ಹಾಲ್​ ಅಥವಾ ರೂಮ್​ನಲ್ಲಿ ಗೋಡೆ ಗಡಿಯಾರಗಳನ್ನು ತರುವ ನಾವು, ಅದು ಕೆಟ್ಟು ನಿಂತರೆ ಅದನ್ನು ಸರಿಪಡಿಸದೆ, ಹೊಸ ಗಡಿಯಾರಗಳ ಮೊರೆ ಹೋಗುತ್ತೇವೆ. ಈ ಮೂಲಕ ಕೆಟ್ಟ ಹಳೆಯ ಗಡಿಯಾರಗಳನ್ನು ಅಲ್ಲೇ ಅಥವಾ ಡ್ರಾಯರ್‌ನಲ್ಲಿ ಇಡುವ ಮೂಲಕ ಮರೆತುಬಿಡುತ್ತೇವೆ. ಇದು ಕೈಯಲ್ಲಿ ಹಣ ನಿಲ್ಲದಕ್ಕೂ ಒಂದು ಕಾರಣ ಎನ್ನಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ನಿಂತ ಗಡಿಯಾರಗಳನ್ನು ಮನೆಯಲ್ಲಿ ಇಡಬಾರದು. ಅದು ನಮ್ಮ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ಹಣ ಗಳಿಸುವಲ್ಲಿಯೂ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ತುಕ್ಕು ಹಿಡಿದ ಕಬ್ಬಿಣ

ಜ್ಯೋತಿಷ್ಯದಲ್ಲಿ, ಕಬ್ಬಿಣವನ್ನು ಶನಿ ಗ್ರಹಕ್ಕೆ ಹೋಲಿಸಲಾಗುತ್ತದೆ. ಕಬ್ಬಿಣ ತುಕ್ಕು ಹಿಡಿಯುತ್ತಿದ್ದರೆ, ಅದನ್ನು ಮನೆಯಲ್ಲಿ ಇಡಬಾರದು ಎಂದು ಹೇಳುತ್ತಾರೆ. ಇದು ಮಾನಸಿಕ ತೊಂದರೆಗೆ ಕಾರಣವಾಗಬಹುದು. ಇದರಿಂದ ವ್ಯಕ್ತಿಯು ತನ್ನ ವೃತ್ತಿಜೀವನದ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಸಾಧ್ಯವಾಗುವುದಿಲ್ಲ. ಹಿಡಿದ ಕೆಲಸ-ಕಾರ್ಯ ಮತ್ತು ವ್ಯವಹಾರಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ.

ಇದನ್ನೂ ಓದಿ: ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿಗೆ ಮಾಸ್ಟರ್‌ಪ್ಲ್ಯಾನ್: ಸಚಿವ ರಾಮಲಿಂಗಾರೆಡ್ಡಿ | New design with local culture

ಮೃತ ಸಂಬಂಧಿಕರ ವಸ್ತ್ರಗಳು

ವಾಸ್ತು ದೋಷಗಳಿಗೆ ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಮೃತ ಕುಟುಂಬಸ್ಥರು ಅಥವಾ ಸಂಬಂಧಿಕರ ವಸ್ತುಗಳು, ಬಟ್ಟೆ, ದಿಂಬು, ಬೆಡ್​ಶೀಟ್​ ಇತ್ಯಾದಿಗಳನ್ನು ಮನೆಯಲ್ಲಿ ಇಡಬಾರದು. ಜ್ಯೋತಿಷ್ಯದ ಪ್ರಕಾರ, ಮೃತರಿಗೆ ಸಂಬಂಧಿಸಿದ ಯಾವುದೇ ವಸ್ತುಗಳು ಮನೆಯಲ್ಲಿ ಇರಬಾರದು. ವಿಶೇಷವಾಗಿ, ಅವರ ಬಟ್ಟೆಗಳನ್ನು ಬಡವರಿಗೆ ಅಥವಾ ನಿರ್ಗತಿಕರಿಗೆ ದಾನ ಮಾಡಬೇಕು. ಮನೆಯಲ್ಲಿ ಹಳೆಯ ಬಟ್ಟೆಗಳನ್ನು ಇಡುವುದರಿಂದ ಆರ್ಥಿಕ ನಷ್ಟವೂ ಉಂಟಾಗುತ್ತದೆ.

ಮನೆಯಲ್ಲಿ ಈ 4 ವಸ್ತುಗಳಿದ್ದರೆ ಲಕ್ಷ್ಮಿ ಒಲಿಯುವುದಿಲ್ಲ! ಇದನ್ನು ಗಮನಿಸದೆ ಹೋದ್ರೆ ಕೈಯಲ್ಲಿ 1 ಪೈಸೆಯೂ ಉಳಿಯಲ್ಲ | Vastu Tips

ನಳದಿಂದ ನೀರು ಸೋರಿಕೆ

ಹಲವೊಮ್ಮೆ ಮನೆಯಲ್ಲಿನ ನಲ್ಲಿಯಿಂದ ನೀರು ಸೋರುತ್ತಲೇ ಇರುತ್ತದೆ. ಅನೇಕ ಜನರು ಇದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಅಳವಡಿಸಲಾದ ನಲ್ಲಿ ನೀರು ಆಫ್ ಆಗಿದ್ದರೂ, ಅದರಿಂದ ನೀರು ಸೋರುತ್ತಲೇ ಇದ್ದರೆ, ಅದನ್ನು ಸಂಪತ್ತಿನ ಸೂಚಕವೆಂದು ಪರಿಗಣಿಸಲಾಗುತ್ತದೆ. ಅಂದರೆ, ಮನೆಯಲ್ಲಿ ಪದೇ ಪದೇ ನೀರಿನ ಸೋರಿಕೆಯಿಂದಾಗಿ, ಆರ್ಥಿಕ ನಷ್ಟವಾಗುತ್ತದೆ ಎಂದು ಹೇಳಲಾಗಿದೆ. ನೀರು ವ್ಯರ್ಥವಾದಂತೆಯೇ ಆದಾಯವೂ ದಿನದಿಂದ ದಿನಕ್ಕೆ ವ್ಯಯವಾಗುತ್ತಿರುತ್ತದೆ,(ಏಜೆನ್ಸೀಸ್).

ಚಿನ್ನದ ಕತ್ತಿ, ಕಿರೀಟ… ಹರಾಜಿನತ್ತ ಕಣ್ಣು ಕುಕ್ಕುವ ಜಯಲಲಿತಾ ಆಭರಣಗಳು? ಹೀಗಿದೆ ವರದಿ | Jayalalithaa

Share This Article

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…

ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…

ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes

grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…