Earthquake: ಇಂದು ಬೆಳ್ಳಂಬೆಳಗ್ಗೆಯೇ ದೆಹಲಿ-ಎನ್‌ಸಿಆರ್‌ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಭಾರೀ ಶಬ್ಬಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಬೆಳಗ್ಗೆ 5:36ರ ಸುಮಾರಿಗೆ 5 ಕಿಲೋಮೀಟರ್ ಆಳದಲ್ಲಿ 4 ತೀವ್ರತೆಯ ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ಇದನ್ನೂ ಓದಿ: IPL 2025: ಮಾ. 22ಕ್ಕೆ ಕೆಕೆಆರ್-ಆರ್ಸಿಬಿ ಉದ್ಘಾಟನಾ ಪಂದ್ಯ: ಮೇ3ಕ್ಕೆ ಬೆಂಗಳೂರಿನಲ್ಲಿ ಆರ್ಸಿಬಿ-ಸಿಎಸ್ಕೆ
ದೆಹಲಿ, ನೋಯ್ಡಾ, ಇಂದಿರಾಪುರಂ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ಭೂಕಂಪನ ಉಂಟಾಗಿದೆ. ಕಂಪನವು, 28.59 ಉತ್ತರ ಅಕ್ಷಾಂಶ ಮತ್ತು 77.16 ಪೂರ್ವ ರೇಖಾಂಶದಲ್ಲಿತ್ತು ಎಂದು ಎನ್‌ಸಿಎಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಕೆಲವು ಸೆಕೆಂಡ್ಗಳ ಕಾಲ ಸಂಭವಿಸಿದ ಭೂಕಂಪನಕ್ಕೆ ಬೆಚ್ಚಿಬಿದ್ದ ಜನತೆ, ತಮ್ಮ ತಮ್ಮ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಮುನ್ನೆಚ್ಚರಿಕೆಯಿಂದ ಹಲವರು ಸಹಾಯವಾಣಿಗೂ ಕರೆ ಮಾಡಿದ್ದಾರೆ. ವರದಿಗಳ ಪ್ರಕಾರ, ಯಾವುದೇ ಹಾನಿ ಅಥವಾ ಸಾವು-ನೋವುಗಳು ಸಂಭವಿಸಿಲ್ಲ ಎನ್ನಲಾಗಿದೆ,(ಏಜೆನ್ಸೀಸ್).