ಬೆಂಗಳೂರು: ಬಹುನಿರೀತ ಐಪಿಎಲ್ 18ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಭಾನುವಾರ ಬಿಡುಗಡೆಗೊಳಿಸಿದೆ. ಹಾಲಿ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಮಾರ್ಚ್ 22ರಂದು ಕೋಲ್ಕತದ ಈಡನ್ ಗಾರ್ಡನ್ಸ್ನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಏಪ್ರಿಲ್ 2 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ತಂಡ ಗುಜರಾತ್ ಟೈಟಾನ್ಸ್ ಎದುರು ಮೊದಲ ತವರಿನ ಪಂದ್ಯವನ್ನಾಡಲಿದೆ.
ಕಳೆದ ಬಾರಿ ಎರಡು ಹಂತದಲ್ಲಿ ಪ್ರಕಟಿಸಲಾಗಿದ್ದ ವೇಳಾಪಟ್ಟಿಯನ್ನು ಈ ಬಾರಿ ಒಮ್ಮೆಲೆ 74 ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಒಟ್ಟು 13 ವಿವಿಧ ತಾಣಗಳಲ್ಲಿ 65 ದಿನ ಟೂರ್ನಿ ನಡೆಯಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಹಾಗೂ ಕೆಕೆಆರ್ ತಂಡದ ನೂತನ ನಾಯಕರ ಮುಖಾಮುಖಿಯಾಗಲಿದೆ. ರಜತ್ ಪಾಟೀದಾರ್ ಆರ್ಸಿಬಿಯ ಸಾರಥ್ಯವಹಿಸಿಕೊಂಡಿದ್ದು, ಕೆಕೆಆರ್ ತಂಡ ನಾಯಕನ ಘೋಷಣೆ ಇನ್ನಷ್ಟೇ ಮಾಡಬೇಕಿದೆ.
ವಾರಾಂತ್ಯದ ದಿನವಾಗಿರುವ ಟೂರ್ನಿಯ 2ನೇ ದಿನವೇ ಮೊದಲ ಡಬಲ್ ಹೆಡರ್ ನಿಗದಿಯಾಗಿದ್ದು, ಮಾ.23ರ ಮೊದಲ ಪಂದ್ಯದಲ್ಲಿ ಹಾಲಿ ರನ್ನರ್ ಅಪ್ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ತಂಡಗಳು ಸೆಣಸಾಡಲಿವೆ. ದಿನದ ಎರಡನೇ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ಗಳಾದ ಸಿಎಸ್ಕೆ ಹಾಗೂ ಮುಂಬೈ ತಂಡಗಳ ಹೈವೋಲ್ಟೇಜ್ ಪಂದ್ಯ ಚೆನ್ನೆ$ನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ. ಟೂರ್ನಿಯಲ್ಲಿ ಒಟ್ಟು 12 ಡಬಲ್ ಹೆಡರ್ಗಳು ನಡೆಯಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ವಿಶಾಖಪಟ್ಟಣದಲ್ಲಿ ಮಾ.24ರಂದು ತನ್ನ ಅಭಿಯಾನ ಆರಂಭಿಸಿದರೆ, ಮಾ.25ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಟೈಟಾನ್ಸ್ ತಂಡಗಳು ಆವೃತ್ತಿಯ ಮೊದಲ ಪಂದ್ಯವನ್ನಾಡಲಿವೆ.
ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳ ಪೈಕಿ 3 ಮೂರು ತಂಡಗಳು 2 ತವರು ತಾಣಗಳಲ್ಲಿ ಆಡಲಿದ್ದು, ಗುವಾಹಟಿ ಹಾಗೂ ವಿಶಾಖಪಟ್ಟಣ ತಲಾ 2 ಪಂದ್ಯ ಹಾಗೂ ಧರ್ಮಶಾಲಾ ಮೂರು ಪಂದ್ಯಗಳಿಗೆ ಆತಿಥ್ಯವಹಿಸಲಿದೆ. ತವರಿನ ಆರಂಭಿಕ 2 ಲೀಗ್ ಪಂದ್ಯಗಳನ್ನು ಆಂಧ್ರದ ವಿಶಾಖಪಟ್ಟಣದಲ್ಲಿ ಆಡಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಏಪ್ರಿಲ್ 13ರಿಂದ ಟೂರ್ನಿಯ ಉಳಿದ ಪಂದ್ಯಗಳನ್ನು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಡಲಿದೆ. ಇನ್ನು ಮುಲ್ಲನ್ಪುರದ ಹೊಸ ಪಿಸಿಎ ಕ್ರೀಡಾಂಗಣವನ್ನು ತವರು ಅಂಗಣವಾಗಿ ಬದಲಾಯಿಸಿಕೊಂಡಿರುವ ಪಂಜಾಬ್ ಕಿಂಗ್ಸ್, ತವರಿನ 3 ಪಂದ್ಯಗಳನ್ನು ಧರ್ಮಶಾಲಾ ಎಚ್ಪಿಸಿಎ ಕ್ರೀಡಾಂಗಣದಲ್ಲಿ ಆಡಲಿದ್ದು, ಕ್ರಮವಾಗಿ ಲಖನೌ, ಡೆಲ್ಲಿ ಮತ್ತು ಮುಂಬೈ ಎದುರು ಆಡಲಿದೆ. ರಾಜಸ್ಥಾನ ತಂಡ ಕಳೆದ ಬಾರಿಯಂತೆ ಅಸ್ಸಾಂನ ಗುವಾಹಟಿಯನ್ನು ಎರಡನೇ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಟೂರ್ನಿಯ ಫೈನಲ್ ಮೇ 25ರಂದು ನಿಗದಿಯಾಗಿದೆ.
ಮೇ 25ಕ್ಕೆ ಕೋಲ್ಕತದಲ್ಲಿ ಫೈನಲ್
ಎಂದಿನ ಸಂಪ್ರದಾಯದಂತೆ ಈ ಸಲವೂ ಹಾಲಿ ಚಾಂಪಿಯನ್ ತಂಡ ಐಪಿಎಲ್ ೈನಲ್ ಪಂದಕ್ಕೆ ಆತಿಥ್ಯ ವಹಿಸಲಿದ್ದು, ಹಾಲಿ ಚಾಂಪಿಯನ್ ಕೆಕೆಆರ್ ತಂಡದ ತವರು ಮೈದನಾ ಈಡನ್ ಗಾರ್ಡನ್ಸ್ನಲ್ಲಿ ಮೇ 25ರಂದು ಪ್ರಶಸ್ತಿ ಕಾದಾಟ ನಡೆಯಲಿದೆ. ಅದಕ್ಕೂ ಮುನ್ನ ಮೇ 23ರಂದು 2ನೇ ಕ್ವಾಲಿೈಯರ್ ನಡೆಯಲಿದೆ. ರನ್ನರ್ ಅಪ್ ಸನ್ರೈಸರ್ಸ್ ತವರು ಮೈದಾನ ಹೈದರಬಾದ್ನಲ್ಲಿ 20ರಂದು ಮೊದಲ ಕ್ವಾಲಿೈಯರ್ ನಡೆಯಲಿದ್ದು, 21ರಂದು ಎಲಿಮಿನೇಟರ್ ನಡೆಯಲಿದೆ. ಮೇ 19 ಟೂರ್ನಿಯ ಮೊದಲ ಬಿಡುವಿನ ದಿನವಾಗಿದೆ.
ಏ.2ಕ್ಕೆ ಬೆಂಗಳೂರಿನಲ್ಲಿ ಮೊದಲ ಪಂದ್ಯ
ಐಪಿಎಲ್&18ರಲ್ಲಿ ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಆರ್ಸಿಬಿ ತಂಡ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಎದುರು ಕಣಕ್ಕಿಳಿಯಲಿದೆ. ಆರ್ಸಿಬಿ ತಂಡದ ಆರಂಭಿಕ ಎಂಟು ಪಂದ್ಯಗಳ ಪೈಕಿ ಬೆಂಗಳೂರಿನಲ್ಲಿ 3 ಪಂದ್ಯಗಳು ನಿಗದಿಯಾಗಿದ್ದು, ಏ.10 ರಂದು ಡೆಲ್ಲಿ, 18ಕ್ಕೆ ಪಂಜಾಬ್, 24ಕ್ಕೆ ರಾಜಸ್ಥಾನ, ಮೇ 3ಕ್ಕೆ ಸಿಎಸ್ಕೆ ಹಾಗೂ ಮೇ 13, 17 ರಂದು ಕ್ರಮವಾಗಿ ಸನ್ರೈಸರ್ಸ್, ಕೆಕೆಆರ್ ವಿರುದ್ಧ ಆಡಲಿದೆ.
ವೈಜಾಗ್ನಲ್ಲಿ ಡೆಲ್ಲಿ ತವರಿನ ಪಂದ್ಯ
ಈ ಬಾರಿಯೂ ಆಂಧ್ರದ ವೈಜಾಗ್ ಕ್ರೀಡಾಂಗಣವನ್ನೂ ಡೆಲ್ಲಿ ಕ್ಯಾಪಿಟಲ್ಸ್ ತಂಎ ಎರಡನೇ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಲಖನೌ ಸೂಪರ್ ಜೈಂಟ್ಸ್ (ಮಾ.24) ಹಾಗೂ ಸನ್ರೈಸರ್ಸ್ (ಮಾ.30) ವಿರುದ್ಧ ತನ್ನ ಆರಂಭಿಕ ಎರಡು ಪಂದ್ಯಗಳನ್ನು ಆಡಲಿದೆ. ಉಳಿದ ಐದು ಲೀಗ್ ಪಂದ್ಯಗಳನ್ನು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಡಲಿದೆ. ಕಳೆದ ಬಾರಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಆರಂಭಿಕ 2 ಲೀಗ್ ಪಂದ್ಯಗಳನ್ನು ಆಂಧ್ರದ ವಿಶಾಖಪಟ್ಟಣದಲ್ಲಿ ಆಡಿತ್ತು.