Jayalalithaa: ಎರಡು ಚಿನ್ನದ ಕಿರೀಟ, ಒಂದು ಚಿನ್ನದ ಕತ್ತಿ ಸೇರಿದಂತೆ ಸುಮಾರು 27 ಕೆಜಿ ಚಿನ್ನಾಭರಣಗಳು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ದಿವಗಂತ ಜೆ. ಜಯಲಲಿತಾ ಅವರಿಗೆ ಸೇರಿದ ಕೆಲವು ವಸ್ತುಗಳಾಗಿವೆ. ನಿನ್ನೆ (ಫೆ.14) ಆರಂಭಗೊಂಡ ಪ್ರಕ್ರಿಯೆಯ ಭಾಗವಾಗಿ ಕರ್ನಾಟಕದ ವಿಶೇಷ ನ್ಯಾಯಾಲಯವು, ಜಯಲಲಿತಾಗೆ ಸೇರಿದ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಿದೆ. ಈಗಾಗಲೇ ಹಸ್ತಾಂತರ ಪ್ರಕ್ರಿಯೆ ಜಾರಿಯಲ್ಲಿದೆ.
ಇದನ್ನೂ ಓದಿ: ಗತ್ತಿನಿಂದ ಕೆಲಸ ಮಾಡಿ ಇಲ್ಲ ಮನೆಗೆ ಹೋಗಿ !; ಅಧಿಕಾರಿಗಳಿಗೆ ಉಪ ಲೋಕಾಯುಕ್ತರ ಖಡಕ್ ಸೂಚನೆ
2016ರಲ್ಲಿ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ವಿರುದ್ಧದ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇಷ್ಟೂ ಆಭರಣಗಳು ಸುಮಾರು 21 ವರ್ಷಗಳಿಂದ ಕರ್ನಾಟಕ ರಾಜ್ಯ ಖಜಾನೆಯಲ್ಲಿ ಬಿದ್ದಿತ್ತು ಎಂಬುದೇ ಅಚ್ಚರಿ ಸಂಗತಿ. ತಮಿಳುನಾಡು ಸರ್ಕಾರಕ್ಕೆ ವರ್ಗಾಯಿಸಿದ 4,000 ರೂ. ಕೋಟಿ ರೂ. ಆಸ್ತಿಯಲ್ಲಿ ಐಷಾರಾಮಿ ಮನೆಗಳು, 1,525 ಎಕರೆ ಭೂ ದಾಖಲೆಗಳು, 1,100 ಕೆಜಿ ಬೆಳ್ಳಿ, 1,000 ಕೆಜಿಗೂ ಅಧಿಕ ಚಿನ್ನ ಮತ್ತು ವಜ್ರಗಳು ಸೇರಿವೆ.
ತಮಿಳುನಾಡು ಸರ್ಕಾರ ಪಡೆದ ಪ್ರಶಸ್ತಿಗಳಲ್ಲಿ ಜಯಲಲಿತಾ ಅವರಿಗೆ ಸೇರಿದ್ದ ಚಿನ್ನದ ಕಿರೀಟವಿದು.
ಮಾಜಿ ಸಿಎಂಗೆ ಸೇರಿದ ಚಿನ್ನದ ಕತ್ತಿ
ಜಯಲಲಿತಾಗೆ ಸೇರಿದ ಈ ಚಿನ್ನದ ಹಾರ. ನವಿಲಿನ ಆಕಾರದ ವಜ್ರಗಳಿಂದ ಕೂಡಿರುವುದರಿಂದ ಬಹಳ ವಿಶೇಷ ಎನ್ನಲಾಗಿದೆ
ಜಯಲಲಿತಾ ಅವರ ಚಿನ್ನದ ಪ್ರತಿಮೆ
ಆಸ್ತಿ ಹರಾಜಿಗೆ?
ಈ ಕುರಿತು ಮಾತನಾಡಿರುವ ಅಕ್ರಮ ಆಸ್ತಿ ಪ್ರಕರಣದ ಸಾರ್ವಜನಿಕ ಅಭಿಯೋಜಕ ಕಿರಣ್ ಎಸ್. ಜವಲಿ, “ವಿಚಾರಣಾ ನ್ಯಾಯಾಲಯವು 1,526.16 ಎಕರೆ ವಿಸ್ತೀರ್ಣ ಹೊಂದಿರುವ ಆರು ಕಂಪನಿಗಳ ಎಲ್ಲಾ ಆಸ್ತಿಗಳನ್ನು ತಮಿಳುನಾಡು ರಾಜ್ಯಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿತ್ತು. 27 ಕೆಜಿ ಚಿನ್ನಾಭರಣಗಳನ್ನು ರಾಜ್ಯ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ನಿರ್ದೇಶಿಸಿತ್ತು. ನ್ಯಾಯಾಲಯವು ಈ ಎಲ್ಲಾ ವಸ್ತುಗಳನ್ನು ಇದೀಗ ತಮಿಳುನಾಡು ರಾಜ್ಯದ ಗೃಹ ಮತ್ತು ವಿಜಿಲೆನ್ಸ್ ಇಲಾಖೆಗಳ ಅಧಿಕಾರಿಗಳಿಗೆ ಹಸ್ತಾಂತರಿಸಿದೆ” ಎಂದರು.
“ಜಯಲಲಿತಾಗೆ ಸೇರಿದ ಚಿನ್ನಾಭರಣ ಮತ್ತು ಇನ್ನಿತರ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕಳುಹಿಸಬಹುದು ಅಥವಾ ಹಣವನ್ನು ಮರುಪಡೆಯಲು ಹರಾಜಿಗೆ ಕ್ರಮ ಕೈಗೊಳ್ಳಬಹುದು” ಎಂದು ಕಿರಣ್ ಹೇಳಿದ್ದಾರೆ,(ಏಜೆನ್ಸೀಸ್).