Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ ಪಾಲಿಸುತ್ತಾರೆ. ಚಿನ್ನ ಲಾಭವೇ ನಿಜ. ಹಾಗಂತ ಅದೇ ಎಲ್ಲಾ ಸಮಸ್ಯೆಗೂ ಪರಿಹಾರವಲ್ಲ. ಮನೆಯಲ್ಲಿ ಚಿನ್ನವಿದೆ ಸುಲಭವಾಗಿ ಲೋನ್ ಪಡೆಯಬಹುದು, ನಮ್ಮೆಲ್ಲಾ ಕಷ್ಟಗಳನ್ನು ಬಗೆಹರಿಸಿಕೊಳ್ಳಬಹುದು ಎಂಬ ಧೈರ್ಯದಿಂದ ಹಲವರು ಇಂತಹ ತಪ್ಪುಗಳನ್ನು ಆಗಾಗ್ಗೆ ಮಾಡುತ್ತಾರೆ. ಇದರಿಂದ ನಷ್ಟ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅಸಲಿಗೆ ಚಿನ್ನ ಅಡವಿಡುವ ಮುನ್ನ ಕೆಲವು ವಿಷಯಗಳು ನಿಮಗೆ ಗೊತ್ತಿರಲೇಬೇಕು.
ಇದನ್ನೂ ಓದಿ: ಜ್ಞಾನದ ಸಂಸ್ಕೃತಿ ವಿಸ್ತರಣೆ – ಪುಸ್ತಕ ಪ್ರೇಮಿಗಳ ದಿನಾಚರಣೆಯಲ್ಲಿ ಡಾ.ಮೋಹನ್ ಆಳ್ವ ಅಭಿಮತ
ಚಿನ್ನದ ಲೋನ್ ಸುಲಭ
ಈಗ ಎಲ್ಲಾ ಬ್ಯಾಂಕುಗಳು ಚಿನ್ನಕ್ಕೆ ಸಾಲ ಕೊಡುತ್ತದೆ. ಹಾಗಾಗಿ ಜನರು ಕೂಡ ಬಹಳ ಸುಲಭವಾಗಿ ತಮ್ಮಲ್ಲಿರುವ ಚಿನ್ನವನ್ನು ಹಿಂದೆ-ಮುಂದೆ ಯೋಚಿಸದೆ ಅಡವಿಡುತ್ತಿದ್ದಾರೆ. ಮನೆಗೆ ದುಬಾರಿ ವಸ್ತು ಅಥವಾ ಇನ್ನಿತರ ಸಣ್ಣ-ಪುಟ್ಟ ಖರೀದಿಗಾಗಿ ಚಿನ್ನವನ್ನು ಒತ್ತೆ ಇಡುವ ಜನಸಾಮಾನ್ಯರು, ಹಣ ಪಡೆಯುವ ಖುಷಿಯಲ್ಲಿ ಮುಂದಿನ ಪರಿಸ್ಥಿತಿಗಳನ್ನು ಚಿಂತಿಸುವುದಿಲ್ಲ. ಅಸಲಿಗೆ ಇದು ಬ್ಯಾಂಕ್ಗಳಿಗೆ ಲಾಭವೇ. ಸಾಲ ನೀಡುವಾಗ ಬ್ಯಾಂಕ್ಗಳು ಕ್ರೆಡಿಟ್ ಸ್ಕೋರ್‌ಗಳನ್ನು ಚೆಕ್ ಮಾಡುವ ಅಗತ್ಯವಿರುವುದಿಲ್ಲ. ಇದು ಎಲ್ಲಾ ವರ್ಗದ ಜನರಿಗೂ ಅನುಕೂಲವೇ ನಿಜ.
ನೆನಪಿನಲ್ಲಿರಲಿ
ಸಾಲಗಾರರು ಮರುಪಾವತಿಸಲು ಸಾಧ್ಯವೇ ಎಂಬುದನ್ನು ಪರಿಗಣಿಸದ ಬ್ಯಾಂಕ್ಗಳು, ಚಿನ್ನವನ್ನು ಮೇಲಾಧಾರವಾಗಿ ಒತ್ತೆ ಇಡುವುದರಿಂದ, ಆ ವಿಷಯಗಳನ್ನು ಪರಿಗಣಿಸುವುದಿಲ್ಲ. ಹಣ ಹಿಂತಿರುಗಿಸಲು ಸಾಧ್ಯವಾಗದಿದ್ದರೆ ಚಿನ್ನವನ್ನು ವಜಾ ಮಾಡಿಕೊಳ್ಳುವುದು ಬ್ಯಾಂಕ್ಗಳಿಗೆ ಚೆನ್ನಾಗಿ ತಿಳಿದಿದೆ. ಇಂದು ಅನೇಕ ಬ್ಯಾಂಕುಗಳಿಂದ ನಿಮಿಷಗಳಲ್ಲಿ ಚಿನ್ನದ ಸಾಲವನ್ನು ಪಡೆಯಬಹುದು. ಚಿನ್ನದ ವಿರುದ್ಧ ಸಾಲ ಪಡೆಯುವುದು ಯಾವುದೇ ಇತರೆ ಸಾಲಕ್ಕಿಂತ ಸುಲಭ. ಆದಾಗ್ಯೂ, ಚಿನ್ನದ ವಿರುದ್ಧ ಸಾಲ ಪಡೆಯುವಾಗ ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಹಲವಾರು ವಿಷಯಗಳು ಹೀಗಿವೆ.
ನಿಮಗೆ ಸಾಲ ಬೇಕಾದಲ್ಲಿ ಬ್ಯಾಂಕುಗಳು ನಿಮ್ಮಿಂದ ಚಿನ್ನವನ್ನು ಮೇಲಾಧಾರವಾಗಿ ತೆಗೆದುಕೊಳ್ಳುತ್ತವೆ. ಬ್ಯಾಂಕುಗಳು ಆ ಚಿನ್ನವನ್ನು ರಕ್ಷಿಸಬೇಕು. ನೀವು ಅಡವಿಟ್ಟ ಚಿನ್ನವನ್ನು ಬ್ಯಾಂಕ್ ಭದ್ರ ಲಾಕರ್ನಲ್ಲಿ ಇಡುತ್ತದೆಯೇ ಎಂಬುದರ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಕಳ್ಳತನ, ಅಗ್ನಿ ಅವಘಡ ಅಥವಾ ಇನ್ನಾವುದೇ ಅಪಘಾತದ ಸಂದರ್ಭದಲ್ಲಿ, ಸುರಕ್ಷಿತ ವಲಯದಲ್ಲಿ ಉಳಿಯಲು ವಿಮೆ ಮತ್ತು ಭದ್ರತಾ ವ್ಯವಸ್ಥೆಗಳನ್ನು ಹೊಂದಿರುವುದು ಅತ್ಯಗತ್ಯ. ಬ್ಯಾಂಕುಗಳಲ್ಲಿ ಸಿಸಿಟಿವಿ ಕಣ್ಗಾವಲಿನ ವ್ಯವಸ್ಥೆಯು ಬಲಿಷ್ಠವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಥರ್ಡ್ ಪಾರ್ಟಿ ಬಳಕೆ
ಇದೆಲ್ಲವನ್ನೂ ಪರಿಗಣಿಸುವ ಮೂಲಕ, ನೀವು ನಿಮ್ಮ ಚಿನ್ನ ಸುರಕ್ಷಿತವಾಗಿರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೀರಿ ಹಾಗೂ ವಿಶ್ವಾಸ ಹೊಂದುತ್ತೀರಿ. ಇಂತಹ ಬ್ಯಾಂಕ್ಗಳಲ್ಲಿ ನಿಮ್ಮ ಚಿನ್ನವನ್ನು ಅಡವಿಟ್ಟರೆ ನಿಮಗೆ ಒಳಿತು. ಚಿನ್ನ ಅಡವಿಟ್ಟು ಸಾಲ ನೀಡುವ ಕೆಲವು ಸಂಸ್ಥೆಗಳಿಂದ ಕೆಲವು ಕಾನೂನುಬಾಹಿರ ಅಭ್ಯಾಸಗಳಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಪರಿಶೀಲನೆಗೆ ಒಳಗಾಗಿದೆ. ಕೆಲವು ಸಂಸ್ಥೆಗಳು ಸಾಲಗಳನ್ನು ಒದಗಿಸಲು ಥರ್ಡ್ ಪಾರ್ಟಿಗಳನ್ನು ಬಳಸುತ್ತಿವೆ. ಇದನ್ನು ಪರಿಶೀಲಿಸಿಕೊಳ್ಳಿ. ಸಾಲವು ಡೀಫಾಲ್ಟ್ ಆಗಿದ್ದರೆ, ಚಿನ್ನದ ಹರಾಜಿನ ಸಮಯದಲ್ಲಿ ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸಲು ಆಗುವುದಿಲ್ಲ. ಇದರಿಂದಾಗಿ, ಅಡವಿಟ್ಟು ಸಾಲ ಪಡೆದವರು ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಚಿನ್ನ ಅಡವಿಡುವಾಗ ಆಯಾ ಬ್ಯಾಂಕ್ಗಳು ಘೋಷಿಸುವ ಆಫರ್ಗಳ ಬಗ್ಗೆ ಗಮನ ಇರಲಿ. ಬಡ್ಡಿದರಗಳ ಜತೆಗೆ ಒಟ್ಟು ಸಾಲದ ಮೊತ್ತ ಮತ್ತು ಇಎಂಐ ಅವಧಿಯನ್ನು ಎಚ್ಚರಿಕೆಯಿಂದ ಪರಿಗಣಿಸಿ. ಅನೇಕ ಬ್ಯಾಂಕುಗಳು ಚಿನ್ನದ ಸಾಲಗಳ ಮೇಲೆ ಇಎಂಐ ಸೌಲಭ್ಯವನ್ನು ಸಹ ಒದಗಿಸುತ್ತವೆ,(ಏಜೆನ್ಸೀಸ್).
ಶೀಘ್ರವೇ ಆರ್ಬಿಐನಿಂದ ಹೊಸ 50 ರೂ. ನೋಟು ರಿಲೀಸ್! ಈ ನಿರ್ಧಾರದಿಂದ ಹಳೆಯ ನೋಟುಗಳ ಗತಿ ಏನು? ಇಲ್ಲಿದೆ ಉತ್ತರ | RBI