ಏಕಕಾಲದಲ್ಲಿ ಯುವಕರಿಬ್ಬರನ್ನು ಮದ್ವೆಯಾಗಲು ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಅರ್ಜಿ ಸಲ್ಲಿಸಿದ ಯುವತಿಗೆ ಶಾಕ್​!

Kerala Girl
Published on

ಕೊಲ್ಲಂ: ಕೇರಳದ ಕೊಲ್ಲಂ ತಾಲೂಕಿನ ಪಠಾಣಪುರಂ ಮೂಲದ ಯುವತಿಯೊಬ್ಬಳು ಏಕಕಾಲದಲ್ಲಿ ಇಬ್ಬರು ಯುವಕರನ್ನು ಮದುವೆಯಾಗುವ ಬಯಕೆ ವ್ಯಕ್ತಪಡಿಸಿ, ಪಠಾಣಪುರಂ ಮತ್ತು ಪುನಲೂರಿನ ಸಬ್​ ರಿಜಿಸ್ಟ್ರಾರ್​ ಕಚೇರಿಗಳಿಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ದಾಖಲಿಸಿದ್ದಳು. ಇದನ್ನು ನೋಡಿ ಕಚೇರಿ ಸಿಬ್ಬಂದಿ ಗೊಂದಲಕ್ಕೀಡಾಗಿದ್ದರು. ಇದೀಗ ಎರಡು ವಾರಗಳ ಸಮಯದಲ್ಲಿ ಯುವತಿ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಹಳೆಯ ಬಾಯ್​ಫ್ರೆಂಡ್​ ಅನ್ನು ಆಯ್ದುಕೊಂಡಿದ್ದಾಳೆ. ಆದಾಗ್ಯೂ ಸಬ್ ರಿಜಿಸ್ಟ್ರಾರ್ ಸಲ್ಲಿಕೆಯಾಗಿರುವ ಎರಡೂ ಅರ್ಜಿಗಳ ಸಂಬಂಧ ಯುವತಿ ಮತ್ತು ಇಬ್ಬರು ಯುವಕರನ್ನು ವಿಚಾರಣೆಗೆ ಕರೆಯುವ ಮೂಲಕ ಯುವತಿಗೆ ಸಬ್​ ರಿಜಿಸ್ಟ್ರಾರ್​ ಕಚೇರಿ ಶಾಕ್​ ನೀಡಿದೆ.

ಎರಡು ಕಡೆ ಅರ್ಜಿ

ಅರ್ಜಿ ಸಲ್ಲಿಸಿದ ಯುವತಿ ಪಠಾಣಪುರಂನಲ್ಲಿ ಲ್ಯಾಬ್​ ಟೆಕ್ನಿಶಿಯನ್​ ಆಗಿದ್ದಾಳೆ. ಪುನ್ನಲಾ ಮೂಲದ ಯುವಕನನ್ನು ಮದುವೆ ಆಗುತ್ತೇನೆಂದು ಜೂನ್​ 30ರಂದು ಪಠಾಣಪುರಂ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಳು. ಬಳಿಕ ಜುಲೈ 13ರಂದು ಇದೇ ಯುವತಿ ಪುನಲೂರು ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದು, ಪುನಲೂರು ಮೂಲದ ಯುವಕನನ್ನು ಮದುವೆ ಆಗುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾಳೆ.

ಪ್ರಕರಣ ಬೆಳಕಿಗೆ ಬಂದಿದ್ಹೇಗೆ?

ಯುವತಿ ಮೂಲತಃ ಪಠಾಣಪುಂನವಳು. ಹೀಗಾಗಿ ಪುನಲೂರು ಸಬ್​ ರಿಜಿಸ್ಟ್ರಾರ್​ ಕಚೇರಿ ಅರ್ಜಿಯ ಸಂಬಂಧ ನೋಟಿಫಿಕೇಶನ್​ ಅನ್ನು ಪಠಾಣಪುಂ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಕಳುಹಿಸಲು ನಿರ್ಧರಿಸಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮೊನ್ನೆ (ಜು.13) ಪುನಲೂರು ಮೂಲದ ಯುವಕನ ಜತೆ ತೆರಳಿ ತನ್ನ ಹೇಳಿಕೆಯನ್ನು ದಾಖಲಿಸಿ ಬಂದಿದ್ದಾಳೆ.

ಗೊತ್ತಿಲ್ಲದೆ ಸಹಿ

ಯುವತಿಯ ಪ್ರಕಾರ ಆಕೆ ಪುನಲೂರು ಮೂಲದ ಯುವಕನ ಜತೆ ಲಿವಿಂಗ್​ ಟುಗೆದರ್​ನಲ್ಲಿದ್ದಳು. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗ ಹಿನ್ನೆಲೆಯಲ್ಲಿ ತಾಯಿ ಮನೆಯಲ್ಲಿ ಉಳಿದುಕೊಂಡಿದ್ದಳು. ಇದೇ ಸಮಯದಲ್ಲಿ ಆಕೆಗೆ ಪಠಾಣಪುರಂ ಮೂಲದ ಯುವಕನ ಪರಿಚಯವಾಗಿತ್ತು. ಆಕೆ ಹೇಳುವ ಪ್ರಕಾರ ಆತ ನನಗೆ ಗೊತ್ತಿಲ್ಲದೆ ಅರ್ಜಿಗೆ ಸಹಿ ಹಾಕಿಸಿಕೊಂಡಿದ್ದಾನೆ. ಆದರೆ, ಅದು ಮದುವೆಗೆ ಸಂಬಂಧಿಸಿದ ಅರ್ಜಿ ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾಳೆ.

ವಿಚಾರಣೆಗೆ ಹಾಜರಾಗಲು ತಾಕೀತು

ಆದರೆ, ಪಠಾಣಪುರಂ ಸಬ್​ ರಿಜಿಸ್ಟ್ರಾರ್​ ಕಚೇರಿಯು ಆಕೆಯ ಒಂದು ಬದಿಯ ಕತೆಯನ್ನು ನಂಬಲು ತಯಾರಿಲ್ಲ. ಏನೋ ಮುಚ್ಚಿಡುತ್ತಿದ್ದಾಳೆ ಎಂಬ ಸಂದೇಹ ಬಂದಿದ್ದು, ಜುಲೈ 21ಕ್ಕೆ ಪುನ್ನಲಾ ಮೂಲದ ಯುವಕನೊಂದಿಗೆ ವಿಚಾರಣೆಗೆ ಬರುವಂತೆ ಯುವತಿಗೆ ತಾಕೀತು ಮಾಡುವ ಮೂಲಕ ಆಕೆಗೆ ಶಾಕ್​ ನೀಡಿದೆ. ಇದೇ ವೇಳೆ ಪುನಲೂರು ಸಬ್‌ ರಿಜಿಸ್ಟ್ರಾರ್‌ ಕಚೇರಿಯಿಂದ ಜುಲೈ 22ರಂದು ಮಹಿಳೆಯರು ಹಾಗೂ ಪುನಲೂರು ಮೂಲದವರ ನಡುವೆ ಸಭೆಗೆ ಕರೆ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net