More

    ವಯಸ್ಸಾದ್ರೂ ನಟಿ ಸದಾ ಯಾಕಿನ್ನೂ ಮದುವೆ ಆಗಿಲ್ಲ? ಮೊನಾಲಿಸಾ ಬೆಡಗಿ ಕೊಟ್ಟ ಉತ್ತರ ಹೀಗಿದೆ ನೋಡಿ….

    ಚೆನ್ನೈ: ಒಂದು ಕಾಲದಲ್ಲಿ ಸಿನಿ ಇಂಡಸ್ಟ್ರಿಯ ಬಹುಬೇಡಿಕೆ ನಟಿಯಾಗಿದ್ದ ಸದಾ ಇದೀಗ ಸಿನಿ ರಂಗದಿಂದ ದೂರ ಉಳಿದಿದ್ದಾರೆ. ತೆಲುಗಿನ ಜಯಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಸದಾ, ಮೊದಲ ಚಿತ್ರದಲ್ಲಿ ಬ್ಲಾಕ್​ಬಸ್ಟರ್​ ಹಿಟ್​ ಕೊಟ್ಟರು. ಅಲ್ಲಿಂದಾಚೆಗೆ ತೆಲುಗು ಮತ್ತು ತಮಿಳಿನ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಅಲ್ಲದೆ, ಕನ್ನಡದಲ್ಲೂ ಮೊನಾಲಿಸಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸದಾ ನಟನೆ ಮಾಡಿದ್ದು, ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

    ಸದಾ ಸಾಕಷ್ಟು ಹಿಟ್​ ಸಿನಿಮಾಗಳನ್ನು ನೀಡಿದರೂ ಕ್ರಮೇಣವಾಗಿ ಸಾಲು ಸಾಲು ಸೋಲುಗಳಿಂದ ಸಿನಿಮಾ ಅವಕಾಶಗಳು ಕೈತಪ್ಪಿ ತೆರೆಮರೆಗೆ ಸರಿದರು. ಆದರೆ, ಇತ್ತೀಚೆಗೆ ಕಿರುತೆರೆಗೆ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಬಿಬಿ ಜೋಡಿ ಮತ್ತು ಡ್ಯಾನ್ಸ್​ ವಿಥ್​ ಯು ಹೆಸರಿನ ಟಿವಿ ರಿಯಾಲಿಟಿ ಶೋಗಳಲ್ಲಿ ಜಡ್ಜ್​ ಆಗಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಅಪಘಾತ ತಡೆಯದಿದ್ದರೆ ಟೋಲ್ ಸಂಗ್ರಹಕ್ಕೆ ಬಿಡಲ್ಲ ಹೆದ್ದಾರಿ ಅಧಿಕಾರಿಗಳಿಗೆ ಸಂಸದ ಸುರೇಶ್ ಎಚ್ಚರಿಕೆ

    ಸದ್ಯ ಸದಾ ಅವರಿಗೆ 39 ವರ್ಷ ವಯಸ್ಸು. ಇಷ್ಟು ವಯಸ್ಸಾಗಿದ್ದರೂ ಇನ್ನು ಮದುವೆ ಮಾಡಿ ಮಾಡಿಕೊಳ್ಳದೇ ಒಂಟಿ ಜೀವನ ಮುಂದುವರಿಸಿದ್ದಾರೆ. ಆಕೆಯ ಸಹೋದ್ಯೋಗಿಗಳು ಮತ್ತು ಫ್ರೆಂಡ್ಸ್​ ಮದುವೆ ಆಗಿ ಮಕ್ಕಳು ಮಾಡಿಕೊಂಡು ಈಗಾಗಲೇ ಜೀವನದಲ್ಲಿ ಸೆಟಲ್​ ಆಗಿದ್ದಾರೆ. ಆದರೆ, ಸದಾ ಎಲ್ಲೇ ಹೋಗಲಿ ಅಲ್ಲಿ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ ಕೇಳಿಬರುತ್ತಲೇ ಇರುತ್ತದೆ. ಇದೀಗ ಮತ್ತೊಮ್ಮೆ ಸದಾಗೆ ಅದೇ ಪ್ರಶ್ನೆ ಎದುರಾಗಿದೆ.

    ಇತ್ತೀಚಿನ ಸಂದರ್ಶನವೊಂದರಲ್ಲಿ ಸದಾ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಮದುವೆಯಾದರೆ ಆಕೆಯ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸದಾ ಪ್ರಕಾರ ಸಮಕಾಲೀನ ಕಾಲದಲ್ಲಿ ಮದುವೆ ಸಂಬಂಧಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಹೀಗಾಗಿ ಅವರು ಮದುವೆಯ ಬಗ್ಗೆ ಯೋಚನೆ ಮಾಡುವುದಿಲ್ಲವಂತೆ.

    ಮದುವೆ ತಪ್ಪಿಸುವುದು ಉತ್ತಮ 

    ಮದುವೆಯಾದ ನಂತರ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆ. ನನ್ನ ಪ್ರಸ್ತುತ ಜೀವನಶೈಲಿ ಮತ್ತು ನಾನು ಇಷ್ಟಪಡುವುದನ್ನು ಅನುಸರಿಸುವುದರಲ್ಲಿ ನಾನು ತುಂಬಾ ಸಂತೋಷವಾಗಿದ್ದೇನೆ. ಈ ಮಟ್ಟದ ತೃಪ್ತಿಯನ್ನು ಕಾಯ್ದುಕೊಳ್ಳಲು ಮದುವೆ ನನಗೆ ಅವಕಾಶ ನೀಡುತ್ತದೆ ಎಂಬುದರ ಬಗ್ಗೆ ನನಗೆ ಖಚಿತವಿಲ್ಲ. ನಮ್ಮನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿ ಸಿಕ್ಕರೆ ಪರವಾಗಿಲ್ಲ, ಆದರೆ ತಮ್ಮ ಆಲೋಚನೆಗಳಿಗೆ ವಿರುದ್ಧವಾದ ಮನಸ್ಸು ಸಿಕ್ಕರೆ ಕಷ್ಟ. ಅಲ್ಲದೆ, ಇಂದಿನ ಯುಗದಲ್ಲಿ ಅನೇಕ ಜನರು ಮದುವೆಯಾಗ ಕೆಲವೇ ದಿನಗಳಲ್ಲಿ ಬೇರ್ಪಡುತ್ತಾರೆ. ಆದರೆ, ಅದಕ್ಕೂ ಮುನ್ನ ವೈಭವದಿಂದ ಮದುವೆಗೆ ಆಗಿರುತ್ತಾರೆ. ಈ ರೀತಿಯಲ್ಲಿ ಕೊನೆಗೊಳ್ಳಬಹುದಾದ ಮದುವೆಗೆ ನಮ್ಮನ್ನೇಕೆ ಒಳಪಡಿಸಬೇಕು? ಅಂತಹ ಆಘಾತದ ಹಿಂದೆ ಹೋಗುವುದಕ್ಕಿಂತ ಮದುವೆಯನ್ನು ಸಂಪೂರ್ಣವಾಗಿ ತಪ್ಪಿಸುವುದು ಉತ್ತಮ ಎಂದು ಸದಾ ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)

    ಚಂದ್ರಯಾನ 3ರ ಮಹತ್ವಗಳೇನು.?: ತಾಂತ್ರಿಕ ಅಂಶ ವಿವರಿಸಿದ ಹಿರಿಯ ವಿಜ್ಞಾನಿ ಡಾ.ಗುರುಪ್ರಸಾದ್

    ಹುಷಾರ್​…ಗ್ರಾಹಕರಿಗೆ ಸಾಂಬಾರ್​ ನೀಡದಿದ್ದರೆ ನಿಮಗೂ ಬೀಳಬಹುದು ದಂಡ

    ಏಳನೇ ವೇತನ ಆಯೋಗ ಜಾರಿ ಯಾವಾಗ? ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts