More

    ಚಂದ್ರಯಾನ 3ರ ಮಹತ್ವಗಳೇನು.?: ತಾಂತ್ರಿಕ ಅಂಶ ವಿವರಿಸಿದ ಹಿರಿಯ ವಿಜ್ಞಾನಿ ಡಾ.ಗುರುಪ್ರಸಾದ್

    ಬೆಂಗಳೂರು: ಚಂದ್ರಯಾನ 3ರ ತಾಂತ್ರಿಕ‌ ಅಂಶಗಳನ್ನು ವಿಜ್ಞಾನ ಲೇಖಕರು ಹಾಗೂ ಹಿರಿಯ ವಿಜ್ಞಾನಿ ಡಾ. ಗುರುಪ್ರಸಾದ್ ವಿವರವಾಗಿ ತಿಳಿಸಿದ್ದಾರೆ. ಮುಂದೆ ಓದಿ…

    *ಸುಮಾರು 4 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿ ನೌಕೆ ಚಂದ್ರನ ಕಕ್ಷೆ ಸೇರುತ್ತದೆ.
    *ಹಂತಹಂತವಾಗಿ ನೌಕೆ ಪ್ರಯಾಣಿಸಲಿದೆ. ಅದು ಸಂಪೂರ್ಣ ರೊಬೋಟಿಕ್ ನೌಕೆ
    *ಸೂರ್ಯನ ಬೆಳಕು ಬೀಳದ ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ಹೋಗುವ ಪ್ರಯತ್ನ ನಡೆಯಲಿದೆ.
    *ಚಂದ್ರನ ದಕ್ಷಿಣ ಧ್ರುವದ ಮೇಲೆ ಸೂರ್ಯನ ಬೆಳಕು‌ ಬೀಳದ ಕಾರಣ ಅಲ್ಲಿ ಉಷ್ಣಾಂಶ ಕಡಿಮೆ‌ ಇರಲಿದೆ. ಉಷ್ಣಾಂಶ ಕಡಿಮೆ ಇರುವ ಕಾರಣ ಮಂಜು ಕಲ್ಲಾಗಿ ನಿಂತಿರುವ ಸಾಧ್ಯತೆಯಿದೆ. ಹೀಗಾಗಿ ನೌಕೆ ಇಲ್ಲಿ ಬಹಳ ಸುರಕ್ಷಿತವಾಗಿ ನೆಲೆ ಕಾಣಿಸಬಹುದು ಎಂಬ ನಂಬಿಕೆ ಮೇಲೆ ದಕ್ಷಿಣ ಧ್ರುವ ಟಾರ್ಗೆಟ್ ಇಡಲಾಗಿದೆ.
    *ಮೊದಲು ಚಂದ್ರನನ್ನು ಕೋಳಿ ಮೊಟ್ಟೆ ಆಕಾರದಲ್ಲಿ ಕಾಣುವ ದೂರದಲ್ಲಿ ನೌಕೆಯನ್ನು ಸುತ್ತಿಸಲಾಗುತ್ತದೆ. ಆದಾದ ಬಳಿಕೆ ಕ್ರಮೇಣವಾಗಿ ಚಂದ್ರನನ್ನು ವೃತ್ತಾಕಾರದಲ್ಲಿ ಕಾಣುವಲ್ಲಿಗೆ ನೌಕೆಯನ್ನು ತಂದು ನಿಲ್ಲಿಸಲಾಗುತ್ತದೆ. ಇಲ್ಲಿಂದ ಹಂತಹಂತವಾಗಿ ಲ್ಯಾಂಡಂರ್ ಅನ್ನು ನೌಕೆಯಿಂದ ವಿಭಜಿಸಿ ಚಂದ್ರನಭಕ್ಕೆ ಕಳುಹಿಸಲಾಗುತ್ತದೆ.
    *ಚಂದ್ರನನ್ನು ತಲುಪಿದ ಬೆನ್ನಲ್ಲೇ ರೋವರ್ ಅನ್ನು ಚಂದ್ರನ ಮೇಲೆ ಇಳಿಸಿ ಅಧ್ಯಯನ ಶುರುಮಾಡಲಾಗುತ್ತದೆ.
    *ರೋವರ್ ಎಂದರೆ ನಾಲ್ಕು ಚಕ್ರ ಹೊಂದಿರುವ ಒಂದು ರೋಬೋಟಿಕ್ ಯಂತ್ರ. ಒಮ್ಮೆ ಚಂದ್ರನ ಮೇಲೆ‌ ರೋವರ್ ತಲುಪಿದ ಮೇಲೆ 14 ರಿಂದ 15 ದಿನಗಳ ಕಾಲ ಅಧ್ಯಯನ ನಡೆಸಲಾಗುತ್ತದೆ.
    *ಈ ಚಂದ್ರಯಾನದ ಪ್ರಮುಖ ಉದ್ದೇಶ ಖನಿಜ ಸಂಪತ್ತು ಚಂದ್ರನ ರೂಟ್ ಸರ್ಫೆಸ್ ಬಗ್ಗೆ ಅಧ್ಯಯನ ಮಾಡುವುದಾಗಿದೆ.ಇದಕ್ಕೆ ಪೂರಕವಾಗಿ ಬೇಕಾದ ದಾಖಲಾತಿಗಳನ್ನು ರೋವರ್ ಸಂಗ್ರಹಿಸಿ ಸಾಟಿಲೈಟ್​​ಗೆ ಕಳುಹಿಕೊಡಲಾಗುತ್ತದೆ. ಅಲ್ಲಿಂದ ನಮ್ಮ ವಿಜ್ಞಾನಿಗಳು ಚಿತ್ರಗಳನ್ನು, ಮಾಹಿತಿಯನ್ನು ಸಂಗ್ರಹಿಸಿ ಅಧ್ಯಯನ ಮುಂದುವರೆಸುತ್ತಾರೆ.
    *ಚಂದ್ರಯಾನ 3 ಎಂಬ ಸಾಹಸ ಒಟ್ಟು 7 ರೋಬೋಟಿಕ್ ತಂತ್ರಜ್ಞಾನವನ್ನು ಇಟ್ಟು ಮಾಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts