More

    ಜೈ ಭೀಮ್​ ಸಿನಿಮಾವೇನೋ ಸೂಪರ್​ ಹಿಟ್:​ ಆದ್ರೆ ನಿಜವಾದ ಸಂತ್ರಸ್ತೆಯ ಸ್ಥಿತಿ ಹೇಗಿದೆ ಗೊತ್ತಾ?

    ಚೆನ್ನೈ: ಕಳೆದ ವರ್ಷ ಕೇಂದ್ರ ಸರ್ಕಾರ 2021ನೇ ಸಾಲಿನ 69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಿಸಿತು. ಮಾಧವನ್​ ನಿರ್ದೇಶನದ “ರಾಕೆಟ್ರಿ” ಅತ್ಯುತ್ತಮ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಪುಷ್ಪ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರು. ಆದರೆ, ಕೆಲವು ಚಿತ್ರಗಳಿಗೆ ಪ್ರಶಸ್ತಿ ಸಿಗದಿದ್ದಕ್ಕೆ ಭಾರಿ ಟೀಕೆಗಳು ವ್ಯಕ್ತವಾದವು. ಅವುಗಳಲ್ಲಿ ಸೂರ್ಯ ನಟನೆಯ ಜೈ ಭೀಮ್ ಕೂಡ ಒಂದು. ಪ್ರಶಸ್ತಿ ಪಡೆಯಲು ಎಲ್ಲ ಅರ್ಹತೆಗಳಿದ್ದರೂ ಒಂದೇ ಒಂದು ಪ್ರಶಸ್ತಿ ಸಿಗದೇ ಚಿತ್ರತಂಡ ನಿರಾಸೆ ಅನುಭವಿಸಿತು.

    ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ನೈಜ ಕಥೆಯನ್ನು ತೆರೆಗೆ ತರುವಲ್ಲಿ ನಿರ್ದೇಶಕ ಟಿ.ಜೆ.ಜ್ಞಾನವೇಲ್ ಯಶಸ್ವಿಯಾಗಿದರು. ವಿಮರ್ಶಕರು ಕೂಡ ಈ ಚಿತ್ರಕ್ಕೆ ಬಹಳ ಮೆಚ್ಚುಗೆಯನ್ನು ಸೂಚಿಸಿದರು. ಜೈ ಭೀಮ್ ಚಿತ್ರವನ್ನು ಇಷ್ಟಪಡದವರು ಬಹಳ ಕಡಿಮೆ ಅಂತಾನೇ ಹೇಳಬಹುದು. ಅಷ್ಟು ಚೆನ್ನಾಗಿದೆ ಈ ಸಿನಿಮಾ.

    ತಮಿಳು ವಿಭಾಗದಲ್ಲಿ ಚಿತ್ರಕ್ಕೆ ಪ್ರಶಸ್ತಿ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಸಿಗಲಿಲ್ಲ. ಈ ಸಿನಿಮಾದಲ್ಲಿ ಸೂರ್ಯ, ಲಿಜೋಮೋಲ್ ಜೋಸ್, ಮಣಿಕಂದನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2ಡಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಜ್ಯೋತಿಕಾ ಮತ್ತು ಸೂರ್ಯ ದಂಪತಿ ನಿರ್ಮಿಸಿದರು. ಆದಿವಾಸಿಗಳಿಗೆ ಆಗುವ ಅನ್ಯಾಯವನ್ನು ಎದುರಿಸಿದ ವಕೀಲರೊಬ್ಬರು ಅವರ ಬದುಕಿಗೆ ಹೇಗೆ ಬೆಳಕಾದರು ಎಂಬುದನ್ನು ತೋರಿಸುವ ಸಿನಿಮಾ ಇದಾಗಿದೆ.

    ಈ ಸಿನಿಮಾದಲ್ಲಿ ನಟಿಸಿದ ಎಲ್ಲರೂ ತಮ್ಮ ನಟನೆಯಿಂದ ಮೆಚ್ಚುಗೆಗೆ ಪಾತ್ರರಾದರು. ಚಿತ್ರಕ್ಕೆ ಒಳ್ಳೆಯ ವೀವ್ಸ್ ಕೂಡ ಸಿಕ್ಕಿತು. ರಾಜಾಕಣ್ಣು ಪಾತ್ರದಲ್ಲಿ ಮಣಿಕಂದನ್ ಮತ್ತು ಸೆಂಗಣಿ ಪಾತ್ರದಲ್ಲಿ ಲಿಜಿಮೋಲ್ ಜೋಸ್ ಹೆಚ್ಚು ಜನಪ್ರಿಯತೆ ಪಡೆದರು. ಆದರೆ, ಸೆಂಗಣಿ ಪಾತ್ರದ ನಿಜವಾದ ಪಾತ್ರಧಾರಿ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ? ಜೈ ಭೀಮ್​ ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಕಳೆದಿದ್ದರೂ ಅವರ ಜೀವನ ಮಾತ್ರ ಇನ್ನೂ ಬದಲಾಗಿಲ್ಲ.

    ಜೈ ಭೀಮ್​ ಪಾತ್ರಧಾರಿ ಸೆಂಗಣಿ ಅವರ ನಿಜವಾದ ಹೆಸರು ಪಾರ್ವತಿ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ನಮ್ಮ ಜೀವನದಲ್ಲಿ ಯಾವುದೇ ದೊಡ್ಡ ಬದಲಾವಣೆಗಳಾಗಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ತನ್ನ ಪತಿಯನ್ನು ಅಕ್ರಮವಾಗಿ ಪ್ರಕರಣದಲ್ಲಿ ಸಿಲುಕಿಸಿದ ಪೊಲೀಸರು ಜೈಲಿನಲ್ಲಿಟ್ಟುಕೊಂಡೇ ಹೊಡೆದು ಸಾಯಿಸಿದರು. ಈ ಪ್ರಕರಣದಲ್ಲಿ ಹೋರಾಡಿದ ಪಾರ್ವತಿ ಕೊನೆಗೂ ನ್ಯಾಯವನ್ನು ಪಡೆದರು. ಆದರೆ, ಈವರೆಗೂ ಮಾತ್ರ ಯಾವುದೇ ಪರಿಹಾರ ಸಿಕ್ಕಿಲ್ಲ. ಕೋರ್ಟ್ ಆದೇಶ ಹೊರಡಿಸಿದ್ದರೂ ಪರಿಹಾರ ಮಾತ್ರ ನೀಡಿಲ್ಲ. ನಮಗೆ ಮಾತ್ರವಲ್ಲ ನಮ್ಮ ಸಂಬಂಧಿಕರೆಲ್ಲರಿಗೂ ತಮಿಳುನಾಡು ಪೊಲೀಸರು ಹೊಡೆದು ಚಿತ್ರಹಿಂಸೆ ನೀಡಿದ್ದಾರೆ. ಇದುವರೆಗೆ ತಮಿಳುನಾಡು ಸರ್ಕಾರದಿಂದ 4 ಲಕ್ಷ ರೂ. ಮಾತ್ರ ಮಂಜೂರಾಗಿದೆ. ಆದರೆ ನನಗೆ ಸಿಕ್ಕಿದ್ದು ಮಾತ್ರ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ಎಂದು ಬೇಸರ ಹೊರಹಾಕಿದ್ದಾರೆ.

    ಈ ಪ್ರಕರಣ ನಡೆಯುತ್ತಿರುವಾಗ ಹಿಂಪಡೆಯುವಂತೆ ಒತ್ತಾಯಿಸಿದರು. ಸಾಕಷ್ಟು ಸಮಸ್ಯೆಗಳನ್ನು ತಂದರು. ಆದರೂ ನನ್ನ ಪ್ರಯತ್ನ ನಾನು ಬಿಡಲಿಲ್ಲ. ನನಗೆ ಮೂವರು ಮಕ್ಕಳಿದ್ದಾರೆ. ಆದರೆ, ಯಾರು ವಿದ್ಯಾವಂತರಲ್ಲ. ಎಲ್ಲರೂ ಕೂಲಿ ಕೆಲಸ ಮಾಡುತ್ತಿದ್ದಾರೆ. ನನ್ನ ಮಕ್ಕಳಿಗೆ ಎಂಟು ಮಕ್ಕಳಿದ್ದಾರೆ. ಮಗಳಿಗೆ ಇಬ್ಬರು ಮಕ್ಕಳಿದ್ದಾರೆ. ಒಟ್ಟು 10 ಮೊಮ್ಮಕ್ಕಳಿದ್ದಾರೆ. ಜೈ ಭೀಮ್ ಸಿನಿಮಾ ನಂತರ ನನ್ನ ಜೀವನದ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ ಎಂದು ಸೆಂಗಣಿ ಹೇಳಿದರು.

    ಸೂರ್ಯ ಸರ್ ನನಗೆ 10 ಲಕ್ಷ ರೂಪಾಯಿ ನೀಡಿದರು. ಇದು ಠೇವಣಿ ನಿಧಿಯಾಗಿರುವುದರಿಂದ ತಿಂಗಳಿಗೆ 4 ರಿಂದ 5 ಸಾವಿರ ರೂ. ಬರುತ್ತದೆ. ನನ್ನ ಮೊಮ್ಮಕ್ಕಳಿಗೆ ಕೊಡುತ್ತೇನೆ. ರಾಘವ ಲಾರೆನ್ಸ್ ಕೂಡ ನನಗೆ ಒಂದು ಲಕ್ಷ ಕೊಟ್ಟರು. ಆರ್ಥಿಕವಾಗಿ ಸಹಾಯ ಮಾಡಿದರು. ಆದರೆ ಇನ್ನೂ ನನಗೆ ಸ್ವಂತ ಮನೆ ಇಲ್ಲ. ನಾವು ಪೈನ್ ಮರದ ಕೆಳಗೆ ವಾಸಿಸುತ್ತೇವೆ. ನನ್ನ ಮಕ್ಕಳೂ ನಿರಾಶ್ರಿತರಾಗಿದ್ದಾರೆ. ಅದಕ್ಕಾಗಿಯೇ ಪುತ್ರರು ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ತಮಿಳುನಾಡು ಸರ್ಕಾರಕ್ಕೆ ಸೂಕ್ತ ಪರಿಹಾರ ಹಾಗೂ ನ್ಯಾಯ ಒದಗಿಸುವ ಹೊಣೆಗಾರಿಕೆ ಇದೆ ಎಂದು ಪಾರ್ವತಿ ಹೇಳಿದರು. (ಏಜೆನ್ಸೀಸ್​)

    ಹೆಚ್ಚು ಅಂಕ, ಹಣ ಕೊಡ್ತೀನಿ ಆದ್ರೆ… ವಿದ್ಯಾರ್ಥಿನಿಯರ ಜೀವನದ ಜತೆ ಚೆಲ್ಲಾಟವಾಡಿದ ಪ್ರಾಧ್ಯಾಪಕಿಗೆ 10 ವರ್ಷ ಶಿಕ್ಷೆ!

    ರಸ್ತೆ ಏನು ನಿಮ್ಮ ಅಪ್ಪನ ಮನೆ ಆಸ್ತಿಯಾ? ಶಾಸಕ-ಮೇಯರ್​ ದಂಪತಿಗೆ KSRTC ಡ್ರೈವರ್​ ತಾಯಿಯಿಂದ ತರಾಟೆ

    ಮಹಿಳೆ ಹಸಿದಿದ್ದಾಗ ಬಾಯಿಗೆ ಅನ್ನ ಹಾಕಿ ಅದನ್ನಲ್ಲ… ಭಾರಿ ಸಂಚಲನ ಸೃಷ್ಟಿಸಿದ ನಟಿ ರಶ್ಮಿ ಪೋಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts