More

    ಹೆಚ್ಚು ಅಂಕ, ಹಣ ಕೊಡ್ತೀನಿ ಆದ್ರೆ… ವಿದ್ಯಾರ್ಥಿನಿಯರ ಜೀವನದ ಜತೆ ಚೆಲ್ಲಾಟವಾಡಿದ ಪ್ರಾಧ್ಯಾಪಕಿಗೆ 10 ವರ್ಷ ಶಿಕ್ಷೆ!

    ವಿರುಧುನಗರ: ಹಿರಿಯ ಅಧಿಕಾರಿಗಳ ಜತೆ ಹಾಸಿಗೆ ಹಂಚಿಕೊಳ್ಳುವಂತೆ ಕಾಲೇಜು ವಿದ್ಯಾರ್ಥಿನಿಯರಿಗೆ ಆಮಿಷವೊಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಹಾಯಕ ಪ್ರಾಧ್ಯಾಪಕಿ ನಿರ್ಮಲಾ ದೇವಿಗೆ ತಮಿಳುನಾಡಿನ ಶ್ರೀವಿಲ್ಲಿಪುತ್ತೂರಿನಲ್ಲಿರುವ ಮಹಿಳಾ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ.

    ನಿರ್ಮಲಾ ದೇವಿಗೆ ಶಿಕ್ಷೆ ವಿಧಿಸಿದ್ದಲ್ಲದೆ, 2.45 ಲಕ್ಷ ರೂಪಾಯಿ ದಂಡ ಪಾವತಿ ಮಾಡುವಂತೆ ಮಹಿಳಾ ನ್ಯಾಯಾಲಯದ ಸೆಷನ್ಸ್ ನ್ಯಾಯಾಧೀಶೆ ಟಿ. ಬಗವತಿಅಮ್ಮಾಳ್ ಅವರು ಆದೇಶ ಹೊರಡಿಸಿದ್ದಾರೆ.

    ಮದುರೈ ಕಾಮರಾಜ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ವಿ. ಮುರುಗನ್ ಮತ್ತು ಸಂಶೋಧನಾ ವಿದ್ಯಾರ್ಥಿ ಎಸ್. ಕರುಪ್ಪಸಾಮಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ ನ್ಯಾಯಾಲಯ ನಿರ್ಮಲಾ ದೇವಿ ಅವರನ್ನು ದೋಷಿ ಎಂದು ಸೋಮವಾರ (ಏಪ್ರಿಲ್​ 29) ತೀರ್ಪು ನೀಡಿದೆ.

    ವಿರುಧುನಗರ ಜಿಲ್ಲೆಯ ಅರುಪ್ಪುಕೊಟ್ಟೈನಲ್ಲಿರುವ ದೇವಾಂಗ ಆರ್ಟ್ಸ್​ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ನಿರ್ಮಲಾ ದೇವಿ, ವಿದ್ಯಾರ್ಥಿನಿಯರ ಜತೆ ಮಾತನಾಡಿರುವ ದೂರವಾಣಿ ಸಂಭಾಷಣೆಯ ಆಡಿಯೋ ಕ್ಲಿಪ್​ ಬಹಿರಂಗಗೊಂಡ ಬಳಿಕ 2018ರ ಏಪ್ರಿಲ್ 16ರಂದು ಬಂಧಿಸಲಾಯಿತು. ಹಿರಿಯ ಅಧಿಕಾರಿಗಳ ಕಾಮದಾಸೆ ತೀರಿಸಿಲು ಆಮಿಷವೊಡ್ಡಿರುವುದು ಆಡಿಯೋದಲ್ಲಿದೆ.

    ನಿರ್ಮಲಾ ದೇವಿ ಅವರು ಗಣಿತ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಳು. ಈಕೆ ಮದುರೈ ಕಾಮರಾಜ್ ವಿಶ್ವವಿದ್ಯಾನಿಲಯದಲ್ಲಿಯೂ ಕೆಲಸ ಮಾಡಿದ್ದಳು. ಬಡ ವಿದ್ಯಾರ್ಥಿಗಳನ್ನೇ ಟಾರ್ಗೆಟ್​ ಮಾಡುತ್ತಿದ್ದಳು. ತಾನು ಕೆಲಸ ಮಾಡುವ ಕ್ಷೇತ್ರದ ಪ್ರಭಾವಿ ವ್ಯಕ್ತಿಗಳ ಬಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದು ಈಕೆಯ ಉದ್ದೇಶವಾಗಿತ್ತು. ಹೇಳಿದಂತೆ ಕೇಳಿದರೆ ಅತ್ಯಧಿಕ ಅಂಕಗಳು ಮತ್ತು ಹಣ ಕೊಡುವುದಾಗಿಯೂ ಆಮಿವವೊಡ್ಡಿದ್ದಳು. 2018ರಲ್ಲಿ ನಿರ್ಮಲಾದೇವಿ ವಿದ್ಯಾರ್ಥಿನಿಯೊಂದಿಗೆ ಆಡಿಯೋ ಕ್ಲಬ್‌ನಲ್ಲಿ ಮಾತನಾಡಿದ್ದರು. ಇದರ ಆಧಾರದ ಮೇಲೆ ವಿದ್ಯಾರ್ಥಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

    ಆಡಿಯೋ ಸೋರಿಕೆಯಾದ ನಂತರ ಪ್ರಕರಣವನ್ನು ಸಿಬಿ-ಸಿಐಡಿಗೆ ವರ್ಗಾಯಿಸಲಾಗಿತ್ತು. ತನಿಖೆಯನ್ನು ಪೂರ್ಣಗೊಳಿಸಿದ ನಂತರ ಸಿಬಿ-ಸಿಐಡಿ ಪ್ರಕರಣದ ಚಾರ್ಜ್​ಶೀಟ್​ ಸಲ್ಲಿಸಿತು. ಇದೀಗ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, 10 ವರ್ಷಗಳ ಶಿಕ್ಷೆಯನ್ನು ವಿಧಿಸಿದೆ. (ಏಜೆನ್ಸೀಸ್​)

    ಮಹಿಳೆ ಹಸಿದಿದ್ದಾಗ ಬಾಯಿಗೆ ಅನ್ನ ಹಾಕಿ ಅದನ್ನಲ್ಲ… ಭಾರಿ ಸಂಚಲನ ಸೃಷ್ಟಿಸಿದ ನಟಿ ರಶ್ಮಿ ಪೋಸ್ಟ್​

    ಹಿಂದು ಯುವಕನನ್ನು ವರಿಸಿದ ಮುಸ್ಲಿಂ ಯುವತಿ! ಮದುವೆ ಬಳಿಕ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಆಕೆಯ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts