More

    ಹಿಂದು ಯುವಕನನ್ನು ವರಿಸಿದ ಮುಸ್ಲಿಂ ಯುವತಿ! ಮದುವೆ ಬಳಿಕ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಆಕೆಯ ಹೇಳಿಕೆ

    ಲಖನೌ: ಇತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹಗಳು ಜಾಸ್ತಿಯಾಗುತ್ತಿರುವುದು ಗೊತ್ತೇ ಇದೆ. ಕೆಲವೊಮ್ಮೆ ಹಿರಿಯರು ಒಪ್ಪಿ, ತಾವೇ ಮುಂದೆ ನಿಂತು ಮದುವೆ ಮಾಡುತ್ತಾರೆ. ಆದರೆ, ಕೆಲ ಪಾಲಕರು ಮಕ್ಕಳ ಪ್ರೇಮ ವಿವಾಹಕ್ಕೆ ಸಮ್ಮತಿ ನೀಡುವುದಿಲ್ಲ. ಆದರೂ ಓಡಿಹೋಗಿ ಮದುವೆಯಾಗುತ್ತಾರೆ. ಇತ್ತೀಚೆಗಷ್ಟೇ ಹಿಂದು ದೇವಸ್ಥಾನದಲ್ಲಿ ಹಿಂದು ಸಂಪ್ರದಾಯದಂತೆ ಏಳು ಹೆಜ್ಜೆ ಹಾಕುವ ಮೂಲಕ ಜೋಡಿಯೊಂದು ಒಂದಾಗಿದೆ. ಗಮನಾರ್ಹ ಸಂಗತಿ ಏನೆಂದರೆ, ಇಲ್ಲಿ ವರ ಹಿಂದು ಆಗಿದ್ದರೆ, ವಧು ಮುಸ್ಲಿಂ ಯುವತಿ. ಮದುವೆಯಾಗಿದ್ದು ಮಾತ್ರವಲ್ಲ, ಸನಾತನ ಧರ್ಮವನ್ನು ಯುವತಿ ಅಳವಡಿಸಿಕೊಂಡಿದ್ದಾಳೆ. ಸದ್ಯ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ಜಾತಿ, ಧರ್ಮದ ಬೇಧವಿಲ್ಲದೆ ಪ್ರೀತಿಸಿ ಮದುವೆಯಾಗುವವರೂ ಬಹಳಷ್ಟು ಮಂದಿ ಇದ್ದಾರೆ. ಈ ಪಟ್ಟಿಗೆ ಮತ್ತೊಂದು ಜೋಡಿ ಸೇರಿಕೊಂಡಿದೆ. ಉತ್ತರ ಪ್ರದೇಶದ ಮಹೋಬಾ ನಗರದ ಪಾನ್​ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರೇಮ ವಿವಾಹ ನಡೆದಿದೆ. ಕಸಬಾ ಪನ್ವಾಡಿ ಮೂಲದ ದಿನೇಶ್ ಜೈಸ್ವಾಲ್ ಅದೇ ಗ್ರಾಮದ ಅರ್ಜು ರೈನ್ ಎಂಬ ಮುಸ್ಲಿಂ ಯುವತಿಯನ್ನು ದೇವಸ್ಥಾನದಲ್ಲಿ ಹಿಂದು ಧರ್ಮದ ಪ್ರಕಾರ ವಿವಾಹವಾಗಿದ್ದಾರೆ. ಅಲ್ಲದೆ, ಯುವತಿಯು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಮದುವೆಯ ನಂತರ ತನ್ನ ಹೆಸರನ್ನು ಸಹ ಬದಲಾಯಿಸಿಕೊಂಡಿದ್ದಾರೆ.

    ಅರ್ಜು ರೈನ್ ಆಗಿದ್ದ ಯುವತಿ ತನ್ನ ಹೆಸರನ್ನು ಆರತಿ ಜೈಸ್ವಾಲ್ ಎಂದು ಬದಲಾಯಿಸಿಕೊಂಡಿದ್ದಾಳೆ. ಮದುವೆಯ ನಂತರ ಯುವತಿ ಜೈ ಶ್ರೀರಾಮ್ ಘೋಷಣೆ ಸಹ ಮಾಡಿದ್ದಾಳೆ. ಆರತಿ ಜೈಸ್ವಾಲ್ ತಾನು ಪ್ರೀತಿಸಿದ ಯುವಕನನ್ನು ಮದುವೆಯಾಗಿದ್ದಲ್ಲದೆ, ಸನಾತನ ಧರ್ಮವನ್ನು ಸ್ವೀಕರಿಸಲು ತುಂಬಾ ಸಂತೋಷವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ತನಗೆ ಸನಾತನ ಧರ್ಮ ಎಂದರೆ ತುಂಬಾ ಇಷ್ಟ. ಎಲ್ಲರೂ ಸನಾತನ ಧರ್ಮದಿಂದ ಬಂದವರು. ಸನಾತನ ಧರ್ಮವನ್ನು ಸ್ವ ಇಚ್ಛೆಯಿಂದ ಸ್ವೀಕರಿಸಿದ್ದೇನೆ ಎಂದು ಅರ್ಜು ರೈನ್​ ಸ್ಪಷ್ಟಪಡಿಸಿದ್ದಾರೆ.

    Muslim Girl 1

    ಅಂದಹಾಗೆ ಅರ್ಜು ರೈನ್ ಅವರು ತುಂಬಾ ವರ್ಷಗಳಿಂದ ಹಿಂದು ಧರ್ಮವನ್ನು ಅನುಸರಿಸುತ್ತಿರುವುದಾಗಿ ಬಹಿರಂಗಪಡಿಸಿದರು. ನವರಾತ್ರಿಗೆ ದುರ್ಗಾ ಪೂಜೆ, ಶ್ರೀರಾಮ ನವಮಿಗೆ ರಾಮನ ಪೂಜೆ ಹಾಗೂ ದೀಪಾವಳಿಗೆ ವ್ರತವನ್ನು ಕೈಗೊಳ್ಳುವುದಾಗಿ ತಿಳಿಸಿದರು. ಮುಸ್ಲಿಂ ಧರ್ಮದ ಪ್ರಕಾರ ನಿಖಾ ಎಂದರೆ ಮದುವೆ. ಆದರೆ, ಹಿಂದು ಧರ್ಮದಲ್ಲಿ ಮದುವೆಯ ಸಮಯದಲ್ಲಿ ಒಟ್ಟಿಗೆ ಇಡುವ ಏಳು ಹೆಜ್ಜೆಗಳನ್ನು ಏಳು ಜನ್ಮಗಳ ಸಂಬಂಧವೆಂದು ಪರಿಗಣಿಸಲಾಗುತ್ತದೆ. ನವಜೋಡಿಯು ಕೂಡ ಸಪ್ತಪದಿಯನ್ನು ತುಳಿದಿದೆ.

    ಅಂದಹಾಗೆ ಅರ್ಜು ರೈನ್-ದಿನೇಶ್ ಜೈಸ್ವಾಲ್ 2018ರಲ್ಲಿ ಮನೆಯಿಂದ ಓಡಿಹೋದರು. ಇಬ್ಬರೂ ನೋಯ್ಡಾದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಮಾರು ಆರು ವರ್ಷಗಳ ನಂತರ ಇಬ್ಬರೂ ಮನೆಗೆ ಹಿಂತಿರುಗಿ ಹಿಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಆದರೆ ಈ ಮದುವೆಯನ್ನು ಆರತಿ ಜೈಸ್ವಾಲ್ ಕುಟುಂಬದವರು ಒಪ್ಪಿಕೊಳ್ಳುತ್ತಿಲ್ಲ. ತಮಗೆ ಹೆಣ್ಣು ಮಗು ಹುಟ್ಟೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. (ಏಜೆನ್ಸೀಸ್​)

    ಮತದಾನ ಮಾಡುವವರಿಗೆ ಬಂಪರ್​ ಆಫರ್​! ಡೈಮಂಡ್​ ರಿಂಗ್​, ಫ್ರಿಡ್ಜ್​, ಟಿವಿ ಗೆಲ್ಲುವ ಸುವರ್ಣಾವಕಾಶ

    ರಾಮನಗರ ಶಾಸಕನ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts