More

    ಮತದಾನ ಮಾಡುವವರಿಗೆ ಬಂಪರ್​ ಆಫರ್​! ಡೈಮಂಡ್​ ರಿಂಗ್​, ಫ್ರಿಡ್ಜ್​, ಟಿವಿ ಗೆಲ್ಲುವ ಸುವರ್ಣಾವಕಾಶ

    ಭೋಪಾಲ್​: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಬಹಳ ಮೌಲ್ಯಯುತವಾಗಿದೆ. ಹಾಗಾಗಿ ಮತದಾನದ ಹಕ್ಕನ್ನು ಚಲಾಯಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ನಮ್ಮ ಒಂದು ಮತ ದೇಶದ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ಆದರೆ, ಇಂದಿನ ದಿನಗಳಲ್ಲಿ ಮತದಾನದ ಬಗ್ಗೆ ಬಹಳಷ್ಟು ಜನ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅದರಲ್ಲೂ ವಿದ್ಯಾವಂತರು ಕೂಡ ಮತದಾನದ ಹಕ್ಕಿನ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳು ಮತದಾನ ಪ್ರಮಾಣ ಹೆಚ್ಚಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಬಾರ್‌ಗಳು ಕೂಡ ಮತದಾನ ಮಾಡಿದವರಿಗೆ ಉಚಿತ ಟಿಫಿನ್, ಬಿರಿಯಾನಿ ಮತ್ತು ಬಿಯರ್ ಆಫರ್‌ಗಳನ್ನು ಸಹ ಘೋಷಿಸುತ್ತಿವೆ. ಇದೀಗ ಮತ ಹಾಕುವವರಿಗೆ ಬಂಪರ್​ ಆಫರ್​ ಒಂದನ್ನು ಘೋಷಣೆ ಮಾಡಲಾಗಿದೆ. ಮತದಾನ ಮಾಡಿದರೆ ಡೈಮಂಡ್​ ರಿಂಗ್, ಫ್ರಿಡ್ಜ್​ ಮತ್ತು ಟಿವಿಯಂತಹ ಬೆಲೆ ಬಾಳುವ ವಸ್ತುಗಳನ್ನು ಗೆಲ್ಲುವ ಸುವರ್ಣಾವಕಾಶ ಒದಗಿಬಂದಿದೆ. ಈ ಘೋಷಣೆ ಮಾಡಿದ್ದು ಎಲ್ಲಿ ಎಂಬುದರ ಬಗ್ಗೆ ನಾವೀಗ ತಿಳಿಯೋಣ.

    ಅಂದಹಾಗೆ ಪ್ರಜಾಪ್ರಭುತ್ವದಲ್ಲಿ ಮತದಾನ ಬಹಳ ಮುಖ್ಯ. ನಾವು ಮತ ಚಲಾಯಿಸಿದಾಗ ಮಾತ್ರ ದೇಶದ ಸ್ಥಿತಿಗತಿಯಲ್ಲಿ ಬದಲಾವಣೆಯಾಗುತ್ತದೆ. ಆದರೆ ಇಂದಿನ ಕಾಲಘಟ್ಟದಲ್ಲಿ ಮತದಾನ ಮಾಡಲು ಯುವ ಜನಾಂಗವೇ ಸೋಮಾರಿತನ ತೋರುತ್ತಿದೆ. ಮತದಾನದ ದಿನ ಎಲ್ಲರಿಗೂ ನೌಕರರಿಗೆ ರಜೆ ನೀಡಿದರೂ ಮತದಾನ ಮಾಡಲು ಮಾತ್ರ ಆಸಕ್ತಿ ತೋರುತ್ತಿಲ್ಲ. ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಚುನಾವಣಾ ಆಯೋಗ, ವಿವಿಧ ಎನ್‌ಜಿಒಗಳು ಮತ್ತು ಸೆಲೆಬ್ರಿಟಿಗಳು ವಿಶೇಷ ಪ್ರಚಾರವನ್ನು ಮಾಡುತ್ತಾರೆ. ಆದರೂ, ಪ್ರಯೋಜನಾವಾಗುತ್ತಿಲ್ಲ.

    ಇತ್ತೀಚೆಗಷ್ಟೇ ಆ ಒಂದು ಕ್ಷೇತ್ರದಲ್ಲಿ ಮಾತ್ರ ಅದ್ಭುತ ಕೊಡುಗೆಯೊಂದು ಪ್ರಕಟವಾಗಿದೆ. ಮತಗಟ್ಟೆಯಲ್ಲಿ ಲಕ್ಕಿ ಡ್ರಾ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಲಕ್ಕಿ ಡ್ರಾದಲ್ಲಿ ವಿಜೇತರಾದವರಿಗೆ ಡೈಮಂಡ್ ರಿಂಗ್, ಫ್ರಿಡ್ಜ್ ಹಾಗೂ ಟಿವಿ ಸೇರಿದಂತೆ ವಿವಿಧ ಬಹುಮಾನಗಳನ್ನು ನೀಡಲಾಗುವುದು. ಮತದಾನದ ಎರಡು ಗಂಟೆಗಳಿಗೊಮ್ಮೆ ಲಕ್ಕಿ ಡ್ರಾ ಮಾಡಲಾಗುವುದು ಮತ್ತು ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ. ಅಷ್ಟಕ್ಕೂ ಆ ಕ್ಷೇತ್ರ ಯಾವುದೆಂದರೆ, ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರ. ಇಲ್ಲಿನ ಜನರಿಗೆ ಈ ಬಂಪರ್ ಆಫರ್‌ನಲ್ಲಿ ಭಾಗವಹಿಸಲು ಅವಕಾಶವಿದೆ.

    ಮಧ್ಯಪ್ರದೇಶವು ಒಟ್ಟು 29 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಇಲ್ಲಿಯವರೆಗೆ 13 ಸ್ಥಾನಗಳಿಗೆ ಮತದಾನ ನಡೆದಿದೆ. ಉಳಿದ ಸ್ಥಾನಗಳಿಗೆ ಮೂರು ಮತ್ತು ನಾಲ್ಕನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಕ್ಷೇತ್ರಗಳ ಅಧಿಕಾರಿಗಳು ಮತದಾನದ ಪ್ರಮಾಣ ಹೆಚ್ಚಿಸಲು ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಈ ಕ್ರಮದಲ್ಲಿ ಭೋಪಾಲ್ ಅಧಿಕಾರಿಗಳು ಈ ವಿನೂತನ ಮತ್ತು ಬಂಪರ್ ಆಫರ್ ಅನ್ನು ತೆರೆದಿದ್ದಾರೆ.

    ಮತದಾನದ ನಂತರ ಮತದಾರರು ತಮ್ಮ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಬರೆದು ಸ್ವಯಂಸೇವಕರಿಗೆ ನೀಡಬೇಕು. ಎರಡು ಗಂಟೆಗಳಿಗೊಮ್ಮೆ ಲಕ್ಕಿ ಡ್ರಾ ನಡೆಸಿ ವಿಜೇತರನ್ನು ಆಯ್ಕೆ ಮಾಡಲಾಗುವುದು. ವಿಜೇತರಿಗೆ ವಜ್ರದ ಉಂಗುರಗಳು, ರೆಫ್ರಿಜರೇಟರ್‌ಗಳು ಮತ್ತು ಟಿವಿಯಂತಹ ಬಹುಮಾನಗಳನ್ನು ನೀಡಲಾಗುತ್ತದೆ. ಮತದಾರರಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಭೋಪಾಲ್ ಜಿಲ್ಲಾಧಿಕಾರಿ ಕೌಸಲೇಂದ್ರ ವಿಕ್ರಮ್ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್​)

    ಮದುವೆಯಾಗದೇ ಮಗು ಮಾಡಿಕೊಳ್ಳಲು ಖ್ಯಾತ ನಟಿ ಮೆಹ್ರೀನ್ ಫಿರ್ಜಾದಾ ಏನ್​ ಮಾಡಿದ್ರು ನೋಡಿ!

    ಸದಾ ಗ್ಲಾಮರ್​​ ಪ್ರದರ್ಶನ ಮಾಡ್ತೀರಲ್ಲ ಏಕೆ? ಏಕೆಂದರೆ… ಮಾಳವಿಕಾ ಕೊಟ್ಟ ಉತ್ತರ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts