More

  ಹೊಸ ಕಾನೂನುಗಳ ಅರಿವು ಕಾರ್ಯಾಗಾರ

  ಹೊಳೆನರಸೀಪುರ : ಭಾರತೀಯ ನಾಗರಿಕ ಸಂಹಿತೆ, ನಾಗಕರಿಕ ಸುರಕ್ಷಾ ಸಂಹಿತೆ, ಸಾಕ್ಷ ನಿಯಮ ಕಾನೂನುಗಳು ಮುಂಬರುವ ಜುಲೈನಿಂದ ಜಾರಿಗೆ ಬರಲಿವೆ ಎಂದು ಜಿಲ್ಲಾ ಪೋಲಿಸ್ ತರಬೇತಿ ಕೇಂದ್ರದ ಅಧಿಕಾರಿ ಶಾಂತಿನಾಥ್ ವಣ್ಣೂರು ತಿಳಿಸಿದರು.


  ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಶುಕ್ರವಾರ ಆಯೋಜಿಸಿದ್ದ ಹೊಸ ಕಾನೂನುಗಳ ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರ


  ಮೊಬೈಲ್ ಫೋನ್ ಬಳಕೆ ಬಗ್ಗೆ ವಿಷಯ ಪ್ರಸ್ತಾಪಿಸಿದ ಅವರು, ಯಾವುದೇ ಕರೆ ಮತ್ತು ಸಂದೇಶಗಳನ್ನು ರವಾನಿಸುವಾಗ ಎಚ್ಚರಿಕೆ ಅಗತ್ಯ ಎಂದರು.
  ಪ್ರಾಂಶುಪಾಲ ಲಕ್ಷ್ಮಣ್ ಮಾತನಾಡಿ, ಕಾನೂನುಗಳು ವ್ಯಕ್ತಿಯ ನೆಮ್ಮದಿಯ ಬದುಕಿಗೆ ಹೆಚ್ಚು ಪೂರಕವಾಗಿವೆ. ಅವುಗಳ ಉಲ್ಲಂಘನೆಯಾದರೆ ಅದಕ್ಕೆ ತಕ್ಕ ಶಿಕ್ಷೆಯೂ ಆಗುತ್ತದೆ. ಆದ್ದರಿಂದ ಯುವ ಸಮುದಾಯ ಜಾಗೃತರಾಗಿರಬೇಕು. ಕಾನೂನು ಪಾಲನೆಗೆ ಆದ್ಯತೆ ನೀಡಬೇಕು ಎಂದರು.
  ಸರ್ಕಾರಿ ಅಭಿಯೋಜಕ ಮಂಜುನಾಥ್ ಹಾಗು ಸಂಪನ್ಮೂಲ ವ್ಯಕ್ತಿ ಗಂಗಾಧರಪ್ಪ ಮಾತನಾಡಿ ವಿವಿಧ ಭಾರತೀಯ ದಂಡ ಸಂಹಿತೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವರದರಾಜು, ಸಮಾಜಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ವೆಂಕಟೇಶ್ ಇತರರು ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts