ನಿಮಗೆ ಪ್ರೀತಿಯಲ್ಲಿ ಕಾನ್ಫಿಡೆಂಟ್​​ ಇದೆಯಾ? ಇಲ್ವಾ? ಮೊದಲ ನೋಟದಲ್ಲಿ ಏನು ಕಾಣ್ಸುತ್ತೆ ಅದರ ಮೇಲೆ ನಿರ್ಧಾರ!

Optical Illution

ನವದೆಹಲಿ: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ ಎಂದು ಕರೆಯುತ್ತೇವೆ.

ಈ ಆಪ್ಟಿಕಲ್ ಇಲ್ಯೂಷನ್, ಪರ್ಸನಾಲಿಟಿ ಟೆಸ್ಟ್‌ಗಳು ವ್ಯಕ್ತಿಯ ಸ್ವ ವಿಮರ್ಶಾತ್ಮಕ ಪ್ರವೃತ್ತಿಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಒಬ್ಬರ ವ್ಯಕ್ತಿತ್ವದ ಗುಣಲಕ್ಷಣಗಳನ್ನು ತಿಳಿಸುವಂತಹ ದೃಷ್ಟಿಕೋನವನ್ನು ಹೊಂದಿವೆ. ಆಪ್ಟಿಕಲ್ ಇಲ್ಯೂಷನ್​ಗಳು ನಮ್ಮ ಮನಸ್ಸನ್ನು ದಂಧ್ವಕ್ಕೆ ಸಿಲುಕಿಸಿದರು ಕೂಡ ನಮ್ಮ ವ್ಯಕ್ತಿತ್ವ ಏನೆಂಬುದನ್ನು ನಮಗೆ ತಿಳಿಸುತ್ತದೆ.

ನಮ್ಮ ಇಂದಿನ ಆಪ್ಟಿಕಲ್ ಇಲ್ಯೂಷನ್ ಏನು ಹೇಳುತ್ತದೆ ಎಂಬುದನ್ನು ನಾವೀಗ ತಿಳಿಯೋಣ.
ನಮ್ಮ ಇಂದಿನ ಆಪ್ಟಿಕಲ್ ಇಲ್ಯೂಷನ್, ನೀವು ಸಂಬಂಧದಲ್ಲಿ ಯಾವ ರೀತಿಯ ವ್ಯಕ್ತಿ ಎಂಬುದನ್ನು ಬಹಿರಂಗಪಡಿಸುತ್ತದೆ. ನೀವು ಪ್ರೀತಿಯ ವಿಚಾರದಲ್ಲಿ ಆತ್ಮವಿಶ್ವಾಸ ಹೊಂದಿರುವ ಗುಣಗಳನ್ನು ಹೊಂದಿದ್ದೀರಾ ಅಥವಾ ನೀವು ಅಪನಂಬಿಕೆಯುಳ್ಳ ವ್ಯಕ್ತಿಯಾಗಿದ್ದೀರಾ ಎಂಬುದನ್ನು ತಿಳಿಸುತ್ತದೆ. ಈ ಆಕರ್ಷಕ ಆಪ್ಟಿಕಲ್ ಇಲ್ಯೂಷನ್ ಅನ್ನು ಮಿಯಾ ಟಿಲಿನ್ ಎಂಬುವರು ರಚನೆ ಮಾಡಿದ್ದಾರೆ ಮತ್ತು ಇದು ವ್ಯಕ್ತಿತ್ವದ ಲಕ್ಷಣಗಳನ್ನು ಸೂಚಿಸುವ ಸಾಮರ್ಥ್ಯದೊಂದಿಗೆ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಸದ್ಯ ವೈರಲ್​ ಆಗಿರುವ ಚಿತ್ರದಲ್ಲಿ, ನೀವು ಸಿಂಹದ ಮುಖ ಅಥವಾ ಹಿಮದಿಂದ ಆವರಿಸಿದ ಮರವನ್ನು ನೋಡುತ್ತೀರಿ. ಈ ಎರಡರ ಅರ್ಥ ಏನೆಂದು ತಿಳಿಯೋಣ.

Loin and Tree

ಮೊದಲು ಮರ ಕಂಡರೆ
ಮೇಲಿನ ಚಿತ್ರವನ್ನು ನೋಡಿದಾಗ ನಿಮಗೆ ಮೊದಲ ನೋಟದಲ್ಲಿ ಮರ ಕಂಡರೆ, ನೀವು ಜನರೊಂದಿಗೆ ಬೆರೆಯಲು ಮತ್ತು ಅವರನ್ನು ನಂಬಲು ಸಮಯ ತೆಗೆದುಕೊಳ್ಳುವಂತಹ ವ್ಯಕ್ತಿಯಾಗಿರುತ್ತೀರಿ ಎಂಬುದನ್ನು ಸೂಚಿಸುತ್ತದೆ. ಮೊದಲು ಜನರಿಂದ ಅಂತರ ಕಾಯ್ದುಕೊಳ್ಳುತ್ತೀರಿ. ಆದರೆ, ಒಮ್ಮೆ ಜನರು ನಿಮ್ಮ ಬಗ್ಗೆ ತಿಳಿದರೆ, ಸ್ನೇಹಿತರಿಗೆ ನೀವು ನಿಷ್ಠಾವಂತ ವ್ಯಕ್ತಿ ಅನಿಸುತ್ತೀರಿ. ನೀವು ಜೀವನದಲ್ಲಿ ತುಂಬಾ ಖಾಸಗಿತನ ಬಯಸುವುದರಿಂದ ಮತ್ತು ನಿಗೂಢ ಸ್ವಭಾವವನ್ನು ಹೊಂದಿರುವುದರಿಂದ ಜನರು ಯಾವಾಗಲೂ ನಿಮ್ಮನ್ನು ಆಸಕ್ತಿದಾಯಕ ವ್ಯಕ್ತಿಯಾಗಿ ಕಾಣುತ್ತಾರೆ. ಆದರೆ, ಪ್ರೀತಿಯ ವಿಚಾರಕ್ಕೆ ಬಂದಾಗ, ನೀವು ಮೊದಲ ಹೆಜ್ಜೆ ಮತ್ತು ಮೊದಲ ಪ್ರಯತ್ನ ಮಾಡಲು ಇಷ್ಟಪಡುವುದಿಲ್ಲ. ಅಂದರೆ ಕಾನ್ಫಿಡೆಂಟ್​ ಇರುವುದಿಲ್ಲ. ಬದಲಾಗಿ ನೀವು ಇತರ ವ್ಯಕ್ತಿಗಾಗಿ ತುಂಬಾ ಕಾಯುತ್ತೀರಿ.

ಸಿಂಹ ಕಂಡರೆ ಏನರ್ಥ?
ನೀವು ಮೊದಲು ನೋಟದಲ್ಲಿ ಸಿಂಹದ ಮುಖವನ್ನು ಕಂಡರೆ, ನೀವು ಮುಕ್ತ ಸ್ವಭಾವದ ವ್ಯಕ್ತಿಯಾಗುತ್ತೀರಿ ಎಂದರ್ಥ. ನೀವು ಜನರನ್ನು ಪ್ರೀತಿಸುತ್ತೀರಿ ಮತ್ತು ಅತಿ ಆತ್ಮವಿಶ್ವಾಸದ ವ್ಯಕ್ತಿತ್ವವನ್ನು ಹೊಂದಿರುವುದರಿಂದ ಸುಲಭವಾಗಿ ಸ್ನೇಹಿತರನ್ನು ಮಾಡಿಕೊಳ್ಳಬಹುದು. ನೀವು ನಾಟಕವನ್ನು ದ್ವೇಷಿಸುತ್ತೀರಿ ಮತ್ತು ಯಾವುದೇ ಘರ್ಷಣೆಯಲ್ಲಿ ತೊಡಗುವುದನ್ನು ಸಹ ನೀವು ದ್ವೇಷಿಸುತ್ತೀರಿ. ಈ ಗುಣ ಕೆಲವೊಮ್ಮೆ ನಿಮ್ಮನ್ನು ನಂಬರ್ ಒನ್ ವ್ಯಕ್ತಿಯನ್ನಾಗಿ ಮಾಡುತ್ತದೆ. ನೀವು ಜೀವನದಲ್ಲಿ ಎಷ್ಟು ವಿಶ್ವಾಸಾರ್ಹರಾಗಿದ್ದೀರಿ ಎಂಬ ಕಾರಣದಿಂದ ನಿಮ್ಮ ಸುತ್ತಲಿನ ಜನರು ನಿಮ್ಮನ್ನು ಮೆಚ್ಚುತ್ತಾರೆ. ನಿಮ್ಮ ಅತ್ಯಂತ ಸಹಾನುಭೂತಿಯ ವರ್ತನೆಯಿಂದ ಕೆಲವರಿಗೆ ಸಹಾಯ ಮಾಡುತ್ತೀರಿ.

ಮೋಜಿನ ಮಾರ್ಗ
ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟ್ಟಿಗರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು ಸಹ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. (ಏಜೆನ್ಸೀಸ್​)

ಶಾಸಕ-ಮೇಯರ್​ ದಂಪತಿ ವಿರುದ್ಧ KSRTC ಚಾಲಕನಿಗೆ ಮೊದಲ ಗೆಲುವು! ಪೊಲೀಸರು ಕೈ ಬಿಟ್ರು ಕೋರ್ಟ್​ ಬಿಡಲಿಲ್ಲ

ನಾಡಿನ ಮಹಿಳೆಯರಿಗೆ ಪತ್ರ ಬರೆದು ವಿಶೇಷ ಮನವಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Share This Article

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…

ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups

Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…