More

  800 ಅತಿಥಿಗಳು, ಐಷಾರಾಮಿ ಹಡಗು! ಸಮುದ್ರದ ಮಧ್ಯೆ ಮುಕೇಶ್​ ಅಂಬಾನಿ ಪುತ್ರನ 2ನೇ ಪ್ರೀ ವೆಡ್ಡಿಂಗ್ ಸಂಭ್ರಮ

  ಮುಂಬೈ: ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ತಮ್ಮ ಮನೆಯ ಪ್ರತಿಯೊಂದು ವಿಶೇಷ ಕ್ಷಣವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುವ ಮೂಲಕ ಸ್ಮರಣೀಯವಾಗಿಸುತ್ತಾರೆ. ಅಲ್ಲದೆ, ತಮ್ಮ ಅದ್ಧೂರಿತನದಿಂದಲೇ ಸಖತ್​ ಸುದ್ದಿಯಾಗುತ್ತಾರೆ.

  ಇತ್ತೀಚೆಗಷ್ಟೇ ಈ ದಂಪತಿ ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಭಾವಿ ಸೊಸೆ ರಾಧಿಕಾ ಮರ್ಚೆಂಟ್​ ಅವರ ಪ್ರೀ ವೆಡ್ಡಿಂಗ್​ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಿತು. ಗುಜರಾತಿನ ಜಾಮ್​ನಗರದಲ್ಲಿ ಮಾರ್ಚ್​ 1 ರಿಂದ 3ರವರೆಗೆ ನಡೆದ ಕಾರ್ಯಕ್ರಮದಲ್ಲಿ ಸ್ವರ್ಗವೇ ಧರೆಗಿಳಿದಿತ್ತು. ಕ್ರೀಡೆ, ಸಿನಿಮಾ, ಉದ್ಯಮ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರ ದಂಡೇ ಆಗಮಿಸಿ, ಪ್ರೀವೆಡ್ಡಿಂಗ್​ ರಂಗನ್ನು ಹೆಚ್ಚಿಸಿದ್ದರು.

  ಇದೀಗ ಕೇಳಿಬರುತ್ತಿರುವ ಮತ್ತೊಂದು ಸಂಗತಿ ಏನೆಂದರೆ, ಮುಕೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಅನಂತ್​-ರಾಧಿಕಾಗೆ ಎರಡನೇ ಪ್ರೀ ವೆಡ್ಡಿಂಗ್​ ಸಂಭ್ರಮಾಚರಣೆ ಮಾಡಲು ಮುಂದಾಗಿದ್ದಾರಂತೆ. ಮೇ 28ರಿಂದ ಮೇ 30ರವರೆಗೆ ಪ್ರೀ ವೆಡ್ಡಿಂಗ್​ ಸಮಾರಂಭ ನಡೆಯಲಿದೆ. ಅದು ಕೂಡ ದಕ್ಷಿಣ ಫ್ರಾನ್ಸ್ ಕರಾವಳಿಯಲ್ಲಿ ಐಷಾರಾಮಿ ಹಡಗಿನಲ್ಲಿ ಸಮುದ್ರದ ಮಧ್ಯೆ ಈ ಪ್ರೀ ವೆಡ್ಡಿಂಗ್​ ನಡೆಯಲಿದೆ ಎಂದು ಹೇಳಲಾಗುತ್ತಿದೆ.

  ಐಷಾರಾಮಿ ಹಡಗು ಇಟಲಿಯಿಂದ ಹೊರಟು ತನ್ನ ಪ್ರಯಾಣವನ್ನು ದಕ್ಷಿಣ ಫ್ರಾನ್ಸ್​ನಲ್ಲಿ ಅಂತ್ಯಗೊಳಿಸಲಿದೆ. ಈ ಕಾರ್ಯಕ್ರಮಕ್ಕೆ ಒಟ್ಟು 800 ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. 600 ಸಿಬ್ಬಂದಿ ಸಹ ಹಡಗಿನಲ್ಲಿ ಇರಲಿದ್ದು, ಆಹಾರದಿಂದ ವಸತಿವರೆಗೂ ಅತಿಥಿಗಳಿಗೆ ಬೇಕಾದ ಎಲ್ಲ ಅಗತ್ಯಗಳನ್ನು ನೋಡಿಕೊಳ್ಳಲಿದ್ದಾರೆ.

  ಮೇ 28ರಂದು ಇಟಲಿಯಿಂದ ಹಡಗು ಪ್ರಯಾಣ ಪ್ರಾರಂಭವಾಗಲಿದ್ದು, 2365 ನಾಟಿಕಲ್ ಮೈಲುಗಳಷ್ಟು (4380 ಕಿಮೀ) ದೂರ ಕ್ರಮಿಸಲಿದೆ. ಅಂಬಾನಿ ಕುಟುಂಬ ಆತಿಥ್ಯ ವಹಿಸಲಿರುವ ಪ್ರೀವೆಡ್ಡಿಂಗ್​ ಸಮಾರಂಭದ ಅತಿಥಿಗಳ ಪಟ್ಟಿಯಲ್ಲಿ ಬಾಲಿವುಡ್​ನ ಸಲ್ಮಾನ್​ ಖಾನ್​, ಶಾರುಖ್​ ಖಾನ್​ ಮತ್ತು ಆಮೀರ್​ ಖಾನ್ ಕೂಡ ಸೇರಿದ್ದಾರೆ. ಉಳಿದಂತೆ ಆಕಾಶ್​ ಅಂಬಾನಿ ಮತ್ತು ಶ್ಲೋಕಾ ಮೆಹ್ತಾಗೆ ಆಪ್ತರಾಗಿರುವ ರಣಬೀರ್​ ಕಪೂರ್​, ಆಲಿಯಾ ಭಟ್​ ಕೂಡ ಭಾಗವಹಿಸಲಿದ್ದಾರೆ.​

  ಅಂದಹಾಗೆ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಮಗ ಅನಂತ್ ಅಂಬಾನಿಯ ವಿವಾಹ ಕ್ಷಣಗಳನ್ನು ಸ್ಮರಣೀಯವಾಗಿಸಲು ತಮ್ಮ ಶಕ್ತಿಯಿಂದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅನಂತ್ ಮತ್ತು ರಾಧಿಕಾ ಜುಲೈ 12 ರಂದು ವಿವಾಹವಾಗಲಿದ್ದಾರೆ. (ಏಜೆನ್ಸೀಸ್​)

  ಆರ್​ಸಿಬಿ ಈ ಒಂದು ಕೆಲಸ ಮಾಡಿದ್ರೆ ಸಾಕು ಪ್ಲೇಆಫ್​ ಅಲ್ಲ ಕಪ್​ ಸಹ ಗೆಲ್ಲುತ್ತದೆ ಎಂದ ಮೊಹಮ್ಮದ್​ ಕೈಫ್​!

  ಮೇ 18ರಂದು ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲುವು ನಿಶ್ಚಿತ ಪ್ಲೇಆಫ್ ಪ್ರವೇಶ​ ಖಚಿತ! ಇದಕ್ಕೆ ಕೊಹ್ಲಿಯೇ ಸಾಕ್ಷಿ

  ಗಂಭೀರ್​​ ನಗುವವರೆಗೂ ನನ್ನ ಕ್ರಶ್​ಗೆ ಪ್ರಪೋಸ್ ಮಾಡಲ್ಲ ಎಂದ ಅಭಿಮಾನಿ! ಗೌತಿ ಕೊಟ್ಟ ಪ್ರತಿಕ್ರಿಯೆ ವೈರಲ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts