More

  2ನೇ ಮದುವೆಯಾಗಿದ್ದವಗೆ ಒಂದು ವರ್ಷ ಜೈಲು

  ಗಂಗಾವತಿ: ಮೊದಲ ಮದುವೆ ಮುಚ್ಚಿಟ್ಟು ಎರಡನೇ ವಿವಾಹವಾಗಿದ್ದ ಸಂಡೂರು ತಾಲೂಕಿನ ದೊಣಿಮಲೈ ನಿವಾಸಿ ವಿ.ಶ್ರೀನಿವಾಸ ನುಕುಲಗೆ ಗಂಗಾವತಿ ಪ್ರಧಾನ ಸಿವಿಲ್ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿದೆ.

  ಶ್ರೀನಿವಾಸಗೆ ಮೊದಲೇ ಮದುವೆಯಾಗಿದ್ದು, ವಿಚ್ಛೇದನ ಪಡೆದಿರಲಿಲ್ಲ. ಆದರೆ, ತಾಲೂಕಿನ ಶ್ರೀರಾಮನಗರದ ಮಹಿಳೆಗೆ ವಿಚ್ಛೇದನ ಪಡೆದಿದ್ದೇನೆಂದು ಸುಳ್ಳು ಹೇಳಿ ಮದುವೆಯಾಗಿದ್ದ. ಈ ಮೊದಲೇ ಮದುವೆಯಾಗಿರುವ ಬಗ್ಗೆ ಎರಡನೇ ಪತ್ನಿಗೆ ಗೊತ್ತಾಗಿದ್ದು, ಗ್ರಾಮೀಣ ಠಾಣೆಯಲ್ಲಿ ಪತಿ ವಿರುದ್ಧ 2016ರಲ್ಲಿ ಪ್ರಕರಣ ದಾಖಲಿಸಿದ್ದಳು.

  ಈತನ ವಿರುದ್ಧ ಅಂದಿನ ಗ್ರಾಮೀಣ ಪಿಐ ಆಗಿದ್ದ ಪ್ರಕಾಶಮಾಳೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾಗಿದ್ದರಿಂದ ಹಿನ್ನೆಲೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ ದರಬಾರೆ ತೀರ್ಪುನೀಡಿದ್ದಾರೆ. ದೂರುದಾರರ ಪರ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ ವಾದ ಮಂಡಿಸಿದ್ದಾರೆ.

  See also  ಮತದಾನ ಹೆಚ್ಚಳಕ್ಕೆ ವಿಭಿನ್ನ ಮತಗಟ್ಟೆಗಳ ನಿರ್ಮಾಣ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts