More

    ಚಿಕಿತ್ಸೆಯಿಂದ ಮಲೇರಿಯಾ ನಿಯಂತ್ರಣ ಸಾಧ್ಯ

    ಗಂಗಾವತಿ: ಸಕಾಲಕ್ಕೆ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವ ಮೂಲಕ ಮಲೇರಿಯಾ ನಿಯಂತ್ರಿಸಬಹುದಾಗಿದ್ದು, ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವಂತೆ ಉಪವಿಭಾಗ ಆಸ್ಪತ್ರೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗುರುರಾಜ್ ಹಿರೇಮಠ ತಿಳಿಸಿದರು.

    ನಗರದ ಹಿರೇಜಂತಕಲ್ ಬಾಲವಾಡಿ ಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಲೇರಿಯಾ ನಿಯಂತ್ರಣ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಮಲೇರಿಯಾ ದಿನಾಚರಣೆಯಲ್ಲಿ ಮಾತನಾಡಿದರು. ಚಳಿ ಜ್ವರ, ನಡುಕ ಶುರುವಾದರೆ, ರಕ್ತ ಪರೀಕ್ಷೆಗೊಳಪಡಬೇಕಿದೆ.

    ಮಲೇರಿಯಾ ದೃಢಪಟ್ಟರೆ ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು. ಸೊಳ್ಳೆಗಳಿಂದ ಮಲೇರಿಯಾ ಬರಲಿದ್ದು, ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮಲಗುವಾಗ ಸೊಳ್ಳೆ ಪರದೆ ಬಳಕೆ, ಶುದ್ಧ ನೀರು ಮತ್ತು ಸಮತೋಲಿತ ಆಹಾರ ಸೇವನೆ ಮೂಲಕ ಸಂಭವನೀಯ ಮಲೇರಿಯಾ ನಿಯಂತ್ರಿಸಬಹುದಾಗಿದೆ ಎಂದರು.

    ನಗರಸಭೆ ಸದಸ್ಯೆ ಹುಲಿಗೆಮ್ಮ ಕಿರಿಕಿರಿ ಮಾತನಾಡಿದರು. ಆರೋಗ್ಯ ಕಿರಿಯ ಸಹಾಯಕರಾದ ಕೆ.ಹನುಮೇಶ, ರಮೇಶ, ಮಲೇರಿಯಾ ಲಿಂಕ್ ವರ್ಕರ್ ಎಚ್.ಸುರೇಶ, ರಮೇಶ ಸಾಲ್ಮನಿ, ಆರೋಗ್ಯ ಕಾರ್ಯಕರ್ತೆ ಸರಸ್ವತಿ, ಆಶಾ ಕಾರ್ಯಕರ್ತೆಯರಾದ ರಂಗಮ್ಮ, ಮಹಾದೇವಮ್ಮ, ಗೌರಮ್ಮ ಇತರರಿದ್ದರು. ನಗರದ ಐದನೇ ವಾರ್ಡ್ ಕಿಲ್ಲಾ ಏರಿಯಾದ ಶ್ರೀ ಅಂಬಾಭವಾನಿ ದೇವಾಲಯ ಆವರಣದಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts