More

    ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಕಟ್ಟೆಚ್ಚರ

    ಗಂಗಾವತಿ: ಲೋಕಸಭೆ ಚುನಾವಣೆಯ ಶಾಂತಿಯುತ ಮತದಾನಕ್ಕಾಗಿ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದ್ದು, ಪ್ಯಾರಾಮಿಲಿಟರಿ ತಂಡದೊಂದಿಗೆ ನಗರದಲ್ಲಿ ಗುರುವಾರ ಪಥ ಸಂಚಲನ ನಡೆಸಿತು.

    ಮೇ 7ರಂದು ಮತದಾನ ನಡೆಯಲಿದ್ದು, ನಗರದ 99 ಮತಟ್ಟೆಗಳಲ್ಲಿ ಮತದಾನದ ವ್ಯವಸ್ಥೆ ಮಾಡಲಾಗಿದೆ. ನಗರದ ಕೆಲ ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮವೆಂದು ಚುನಾವಣೆ ಸಮಿತಿ ಪರಿಗಣಿಸಿದ್ದು, ಕಟ್ಟೆಚ್ಚರವಹಿಸಲಾಗಿದೆ. ನಗರ, ಸಂಚಾರಿ ಪೊಲೀಸರು, ಜಿಲ್ಲಾ ಮೀಸಲು ಪಡೆಯೊಂದಿಗೆ ನಾಗಲ್ಯಾಂಡ್‌ನ ಪ್ಯಾರಾ ಮಿಲಿಟರ್ ೆರ್ಸ್‌ಗಳನ್ನು ನಿಯೋಜಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಪೊಲೀಸ್ ಮತ್ತು ಪ್ಯಾರಾಮಿಲಿಟರಿ ೆರ್ಸ್‌ಗಳು ನಗರಾದ್ಯಂತ ಪಥ ಸಂಚಲನ ನಡೆಸಿದವು.

    ಪೊಲೀಸ್ ಠಾಣೆಯಿಂದ ಆರಂಭವಾದ ಪಥ ಸಂಚಲನ, ಶ್ರೀಕೃಷ್ಣ ದೇವರಾಯ ವೃತ್ತದದಿಂದ ಜುಲಾಯಿನಗರ, ಅಮರ ಭಗತ್‌ಸಿಂಗ್ ನಗರ, ಅಂಬೇಡ್ಕರ್ ನಗರ, ಲಕ್ಷ್ಮೀಕ್ಯಾಂಪ್, ಜೈಭೀಮ್ ನಗರ, ಛಲವಾದಿ ಓಣಿ, ಹೊಸಳ್ಳಿ ರಸ್ತೆ, ಕನಕದಾಸ, ನೀಲಕಂಠೇಶ್ವರ ವೃತ್ತದ ಮೂಲಕ ಪೊಲೀಸ್ ಠಾಣೆಯಲ್ಲಿ ಸಮಾರೋಪಗೊಂಡಿತ್ತು. ಪ್ಯಾರಾಮಿಲಿಟರಿ ತಂಡವನ್ನು ಸ್ಥಳೀಯರು ಅದ್ದೂರಿಯಾಗಿ ಸ್ವಾಗತಿಸಿದ್ದು, ಕೆಲವರು ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.
    ಶಾಂತಿಯುತ ಮತದಾನಕ್ಕಾಗಿ ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳ ಕುರಿತು ನಗರ ಠಾಣೆ ಪಿಐ ವಾಸುಕುಮಾರ ಮಾಹಿತಿ ನೀಡಿದರು. ಎಎಸೈ ಶಿವಶಂಕರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts