More

  ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಸಮಾರೋಪ

  ಬೀದರ್: ಇಲ್ಲಿಯ ಕುಂಬಾರವಾಡದ ಸಮರಸ ಸಂಸ್ಥೆ ಕಚೇರಿಯಲ್ಲಿ ದಿ. ಹಂಗರ್ ಪ್ರಾಜೆಕ್ಟ್ ಅಡಿಯಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರ ನಾಲ್ಕು ದಿನಗಳ ಉಚಿತ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಗುರುವಾರ ಸಮಾರೋಪಗೊಂಡಿತು.
  ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ನಂತರದ ಐಟಿಐ, ಡಿಪ್ಲೊಮಾ, ಪದವಿ ಸೇರಿದಂತೆ ವಿವಿಧ ಕೋರ್ಸ್‍ಗಳು ಹಾಗೂ ಸ್ವ ಉದ್ಯೋಗ ಅವಕಾಶಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಿದರು.
  ನ್ಯಾಯಾಧೀಶೆ ಶಿವಲೀಲಾ, ಸಪ್ತಗಿರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅನಿಲಕುಮಾರ, ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಕಾಶ, ನಿಟ್ಟೂರ ಕೈಗಾರಿಕಾ ತರಬೇತಿ ಸಂಸ್ಥೆಯ ರೆಡ್ಡಿ, ದಿ ಹಂಗರ್ ಪ್ರಾಜೆಕ್ಟ್‍ನ ಬೆಂಗಳೂರಿನ ಸೋಮಶೇಖರ ಅಲ್ಕೋಡ್, ಪದ್ಮಿನಿ, ಅಮೀತ್ ಫೊಟೊ ಸ್ಟೂಡಿಯೊದ ನಿರಂಜನ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
  ಸಮರಸ ಸಂಸ್ಥೆಯ ಕಾರ್ಯದರ್ಶಿ ವೇದಮಣಿ, ಲಲಿತಾ ಉಪಸ್ಥಿತರಿದ್ದರು.
  ಕಾರ್ಯಾಗಾರದಲ್ಲಿ ಬೀದರ್, ಹುಮನಾಬಾದ್ ಹಾಗೂ ಔರಾದ್ ತಾಲ್ಲೂಕುಗಳ 25 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 113 ಗ್ರಾಮಗಳ 368 ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts