More

    ಶ್ರೀ ವಾಗೀಶ ತೀರ್ಥರ ಪೂರ್ವಾರಾಧನೆ ವಿಜೃಂಭಣೆ

    ಗಂಗಾವತಿ: ತಾಲೂಕಿನ ಆನೆಗೊಂದಿಯ ಐತಿಹಾಸಿಕ ನವವೃಂದಾವನಗಡ್ಡಿಯಲ್ಲಿ ಶ್ರೀ ವಾಗೀಶ ತೀರ್ಥರ ಪೂರ್ವಾರಾಧನೆ ಶುಕ್ರವಾರ ವಿಜೃಂಭಣೆಯಿಂದ ನೆರವೇರಿಸಲಾಯಿತು.

    ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಅಜ್ಞಾನುಸಾರ ಆರಾಧನೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ವಾಗೀಶ ತೀರ್ಥರು ಸೇರಿ ಎಲ್ಲ ವೃಂದಾವನಗಳಿಗೆ ನಿರ್ಮಾಲ್ಯವಿಸರ್ಜನೆ, ಪಂಚಾಮೃತಾಭಿಷೆಕ, ವಿಶೇಷ ಹೂವಿನ ಅಲಂಕಾರ, ಅಷ್ಟೋತ್ತರ ಪಾರಾಯಣ, ಪಂಡಿತರಿಂದ ಉಪನ್ಯಾಸ, ಭಜನೆ, ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ನಡೆಯಿತು.

    ಆನೆಗೊಂದಿ ರಾಯರ ಮಠದ ವ್ಯವಸ್ಥಾಪಕ ಸುಮಂತಕುಲ್ಕರ್ಣಿ ಇಡಪನೂರ್, ಗಂಗಾವತಿ ರಾಯರ ಮಠದ ವ್ಯವಸ್ಥಾಪಕ ಸಾಮವೇದ ಗುರುರಾಜಾಚಾರ್, ಮುಖಂಡರಾದ ಪವನ್‌ಆಚಾರ್, ಸಂಜೀವ್ ಕುಲ್ಕರ್ಣಿ, ವಾಜೀಂದ್ರರಾವ್, ಸಂಪೂರ್ತಿ ಮೋಹನ್, ಲಕ್ಷ್ಮಣ್ ರಾಜಪುರೋಹಿತ್, ಗುರುರಾಜ್, ಪ್ರಭಾಕರ್ ರಾವ್, ಲಕ್ಷ್ಮೀಕಾಂತ ಸಾಲಗುಂದಿ, ನವೀನ್ ಹೈದ್ರಾಬಾದ್, ವಿಜಯಕುಮಾರ, ಸಂಜೀವ, ಆನೆಗುಂದಿ ರಾಯರ ಮಠದ ಅರ್ಚಕರಾದ ವಿಜೇಂದ್ರಾಚಾರ್ ಚಳ್ಳಾರಿ, ಶ್ರೀನಿವಾಸಾಚಾರ್ಯ ಇತರರಿದ್ದರು.

    ಮಧ್ಯಾರಾಧನೆ: ನವವೃಂದಾವನಗಡ್ಡಿಯಲ್ಲಿ ಏ.27ಕ್ಕೆ ಶ್ರೀ ವಾಗೀಶತೀರ್ಥರ ಮಧ್ಯಾರಾಧನೆ ಜರುಗಲಿದ್ದು, ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರು ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಸಂಸ್ಥಾನ ಪೂಜೆ, ಪಂಚಾಮೃತಾಭಿಷೇಕ, ಶ್ರೀಗಳ ಆಶೀವರ್ಚನ ಮತ್ತು ಅಷ್ಟೋತ್ತರ ಪಾರಾಯಣ ಜರುಗಲಿವೆ ಎಂದು ಆನೆಗೊಂದಿ ರಾಯರ ಮಠದ ವ್ಯವಸ್ಥಾಪಕ ಸುಮಂತಕುಲ್ಕರ್ಣಿ ಇಡಪನೂರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts