More

    ಹುಬ್ಬಳ್ಳಿಯಲ್ಲಿ ದಂಪತಿ ಸಮೇತರಾಗಿ ಮತ ಚಲಾಯಿಸಿದ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ

    ಹುಬ್ಬಳ್ಳಿ: ಇಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಇಂದು ಬೆಳಗ್ಗೆ 7 ಗಂಟೆಯಿಂದಲೇ ವೋಟಿಂಗ್ ಪ್ರಕ್ರಿಯೇ ಆರಂಭಗೊಂಡಿದೆ. ಇನ್ನು ಹುಬ್ಬಳ್ಳಿ ಕೇಶ್ವಾಪುರ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮತಗಟ್ಟೆ ಸಂಖ್ಯೆ 130ರಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಹಾಗೂ ಅವರ ಶ್ರೀಮತಿ ವಾಣಿ ಆನಂದ ಸಂಕೇಶ್ವರ ಮೊದಲಿಗರಾಗಿ ಮತ ಚಲಾಯಿಸುವ ಮೂಲಕ ತಪ್ಪದೇ ನಿಮ್ಮ ಹಕ್ಕನ್ನು ಚಲಾಯಿಸಿ ಎಂಬ ಸಂದೇಶ ಸಾರಿದರು.

    ಇದನ್ನೂ ಓದಿ: ಗೀತಾ ಸೋಲೋದು ಖಚಿತ! ನಟ ಶಿವರಾಜ್​ ಕುಮಾರ್ ಹೇಳಿಕೆ​ಗೆ ಕುಮಾರ್ ಬಂಗಾರಪ್ಪ ವ್ಯಂಗ್ಯ

    ಹುಬ್ಬಳ್ಳಿಯ ವಿವಿಧೆಡೆ ಬೆಳಗ್ಗೆ 7 ಗಂಟೆಗೆ ಮತ ಚಲಾಯಿಸಲು ಮತದಾರರು ಉತ್ಸುಕತೆ ತೋರಿಸಿದ್ದು, ಕೆಲವೆಡೆ ಮತದಾನ ಪ್ರಕ್ರಿಯೆ ಆರಂಭಕ್ಕೆ ಪೂರ್ವವೇ ಮತಗಟ್ಟೆ ಬಳಿ ಜನರು ಸಾಲುಗಟ್ಟಿ ನಿಂತಿದ್ದರು. ಇದನ್ನು ನೋಡಿದ ಚುನಾವಣಾ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದು, ಮೊದಲ ಹಂತದ ಮತದಾನಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವೋಟಿಂಗ್ ಆಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಇಂದು ಮತದಾನ ಆರಂಭಗೊಂಡಿದ್ದು, ಮತದಾರರನ್ನು ಸೆಳೆಯಲು ಅಧಿಕಾರಿಗಳು ಹೊಸ ಹೊಸ ಪ್ರಯತ್ನಕ್ಕೆ ಮುಂದಾಗಿರುವುದು ವಿಶೇಷ ಎಂದೇ ಹೇಳಬಹುದು.

    ಗೀತಾ ಸೋಲೋದು ಖಚಿತ! ನಟ ಶಿವರಾಜ್​ ಕುಮಾರ್ ಹೇಳಿಕೆ​ಗೆ ಕುಮಾರ್ ಬಂಗಾರಪ್ಪ ವ್ಯಂಗ್ಯ

    ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್​: ಪ್ರಧಾನಿ ಮೋದಿ ಕೊಟ್ಟ ಮೊದಲ ಪ್ರತಿಕ್ರಿಯೆ ಹೀಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts