More

    ಮಕ್ಕಳು ಕ್ಲಾಸ್​ಗೆ ಬರುತ್ತಿಲ್ಲ ಎಂದು ವಿಭಿನ್ನ ಪ್ರಯತ್ನಕ್ಕೆ ಮುಂದಾದ ಶಾಲಾ ಮಂಡಳಿ! ಇದನ್ನು ಕಂಡು ಪೋಷಕರು ಶಾಕ್

    ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಅಥವಾ ಕಾಲೇಜಿಗೆ ಕರೆತರುವುದು ಅತೀ ದೊಡ್ಡ ಸಾಹಸ ಎನ್ನುವಂತಾಗಿದೆ. ಅದರಲ್ಲೂ ಈಗ ಬೇಸಿಗೆ ಕಾಲ ಆದ ಕಾರಣ, ವಿದ್ಯಾರ್ಥಿಗಳು ಕೇವಲ ಶಾಲೆಗೆ ಹೋಗಲು ಆಗುವುದಿಲ್ಲ ಎಂದಲ್ಲ, ಮನೆಯಿಂದಲೇ ಹೊರಬರಲು ಕಷ್ಟಪಡುತ್ತಿದ್ದಾರೆ. ಕಾರಣ, ಸುಡುವ ಬಿಸಿಲು, ಗರಿಷ್ಠ ತಾಪಮಾನ. ಇದೇ ಕಾರಣವನ್ನು ಮುಂದಿಟ್ಟು, ಶಾಲೆಗೆ ಚಕ್ಕರ್​ ಹೊಡೆಯುತ್ತಿದ್ದಾರೆ. ಇದರಿಂದ ತೀವ್ರ ತೊಂದರೆಗೆ ಸಿಲುಕಿರುವ ಶಾಲಾ ಆಡಳಿತ ಮಂಡಳಿಯೊಂದು ಇದೀಗ ಮಕ್ಕಳನ್ನು ಸ್ಕೂಲ್​ನತ್ತ ಕರೆತರಲು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ.

    ಇದನ್ನೂ ಓದಿ: ಜಾಮೀನಿನ ಮೇಲಿದ್ದ ಆರೋಪಿ ಮನೆ ಮೇಲೆ ದಾಳಿ: ವೀರಶೈವ ಲಿಂಗಾಯತರ ಪ್ರತಿಭಟನೆ

    ಬಿಸಿಲ ಧಗೆಗೆ ತತ್ತರಿಸಿರುವ ಉತ್ತರಪ್ರದೇಶದ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದೆ, ಹಾಜರಾತಿ ಕಡಿಮೆಯಾದ ಕಾರಣ, ಸರ್ಕಾರಿ ಸ್ಕೂಲ್​ನ ಪ್ರಾಂಶುಪಾಲರು ಇದೀಗ ಮಕ್ಕಳಿಗಿದ್ದ ತರಗತಿಯನ್ನೇ ಈಜುಕೊಳವಾಗಿ ಬದಲಾಯಿಸಿದ್ದಾರೆ. ಈ ಮೂಲಕ ಮಕ್ಕಳು ಈಜುವ ಜತೆ ಜತೆಗೆ ಪಾಠ ಕೇಳಲಿ ಎಂದು ವಿಭಿನ್ನ ಪ್ರಯತ್ನಕ್ಕೆ ಇಳಿದಿದ್ದಾರೆ. ಇದು ಮಕ್ಕಳ ಪೋಷಕರಿಗೆ ಭಾರೀ ಅಚ್ಚರಿ ತಂದಿದ್ದೇ ಆದರೂ ಒಳ್ಳೆಯದೇ ಆಯಿತು ಎಂದು ಒಪ್ಪಿಕೊಂಡಿದ್ದಾರೆ.

    ಭೂಮಿ ಕೆಳಗೆ ಕೊರೆಸಲಾಗಿದ್ದ​​​ ಬೋರ್​ವೆಲ್​ ನೀರನ್ನೇ ಸ್ವೀಮಿಂಗ್ ಪೂಲ್​ಗೆ ಪಂಪ್ ಮಾಡಿ ಬಿಟ್ಟಿದ್ದು, ಇದರಿಂದ ಮಕ್ಕಳಿಗೆ ಈಜಲು ತಂಪಾದ ನೀರೇ ಲಭಿಸುತ್ತದೆ. ಈಜಾಡುವ ಮೂಲಕ ಮಕ್ಕಳು ಕೂಡ ಪಾಠವನ್ನು ಆನಂದಿಸುತ್ತಿದ್ದು, ಹಾಜರಾತಿ ಸಂಖ್ಯೆ 38ರಿಂದ ದಿಢೀರ್​ 65ಕ್ಕೆ ಏರಿದೆ ಎಂದು ಕೌನಜ್​ ಕಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರು ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).

    ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನವನ್ನು ಈತ ತುಂಬಲಿದ್ದಾನೆ: ಯುವ ಸ್ಟಾರ್​​ ಆಟಗಾರನ ಮೇಲೆ ಸಿದ್ದು ಭರವಸೆ

    ಟಿ-20 ವಿಶ್ವಕಪ್​: ತಂಡದಲ್ಲಿ ಇವರಿಗೆ ಸ್ಥಾನ ಕೊಡಿ, ಆತ ಬೇಡ! ಅಭಿಪ್ರಾಯ ಹೊರಹಾಕಿದ ಕ್ರಿಕೆಟ್ ಫ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts