More

    ತೋಡಾರಿನಲ್ಲಿ 14 ಗೋವುಗಳ ರಕ್ಷಣೆ

    ಮೂಡುಬಿದಿರೆ: ಕಸಾಯಿಖಾನೆಗೆ ಕೊಂಡೊಯ್ಯಲು ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ 14 ಗೋವುಗಳನ್ನು ಕಟ್ಟಿ ಹಾಕಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿ ತೋಡಾರಿನಲ್ಲಿ ಗೋವುಗಳನ್ನು ಶನಿವಾರ ರಕ್ಷಿಸಿದ್ದಾರೆ. ತೋಡಾರಿನ ಹಿದಾಯತ್ ನಗರದ ಪೆರಾಡಿ ಕಾಂಪೌಂಡ್‌ನ ಅಬುಸಾಲಿ ಎಂಬುವರ ಮನೆಯ ಜಾಗದಲ್ಲಿ ಹಂಡೇಲಿನ ಹಸನ್ ಬಾವಾ ಎಂಬುವರು 12 ಹೋರಿ ಮತ್ತು 2 ಕೋಣಗಳನ್ನು ಅಕ್ರಮವಾಗಿ ಕಟ್ಟಿ ಹಾಕಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿತ್ಯಾನಂದ ಪಂಡಿತ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಹಸನ್ ಬಾವಾ ಮತ್ತು ಅಬುಸಾಲಿ ತಪ್ಪಿಸಿಕೊಂಡಿದ್ದಾರೆ. ರಕ್ಷಿಸಿದ ಗೋವುಗಳನ್ನು ಕೆಂಜಾರಿನ ಗೋಶಾಲೆಗೆ ಹಸ್ತಾಂತರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts