More

  ಎಕ್ಸೆಲ್‌ನಲ್ಲಿ ಪ್ರತಿಭಾವಂತರಿಗೆ ಉಚಿತ ನೀಟ್ ಕೋಚಿಂಗ್ : ಲಾಂಗ್ ಟರ್ಮ್ ಕೋರ್ಸ್ ವೈಶಿಷ್ಟ್ಯ

  ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

  ಸಾಧನೆಗಳ ಮೂಲಕ ರಾಜ್ಯದ ಶೈಕ್ಷಣಿಕ ಭೂಪಟದಲ್ಲಿ ಅನನ್ಯ ಸ್ಥಾನ ಗಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ವಿಶಾಲ ದಂಡೆಯ ಮೇಲೆ ಇರುವ ಎಕ್ಸೆಲ್ ಪದವಿಪೂರ್ವ ಕಾಲೇಜು ಲಾಂಗ್ ಟರ್ಮ್ ನೀಟ್ ಕೋಚಿಂಗ್ ಸೆಂಟರ್‌ನ್ನು ಪ್ರಾರಂಭಿಸಿದೆ. ಸಂಸ್ಥೆಯ ಸ್ಥಾಪಕರಾದ ನೀಟ್, ಜೆಇಇ ಟ್ರೈನರ್ ಹಾಗೂ ರಸಾಯನ ವಿಜ್ಞಾನ ಪ್ರಾಧ್ಯಾಪಕ ಸುಮಂತ್ ಕುಮಾರ್ ಜೈನ್ ಅವರು ನೂರಾರು ವಿದ್ಯಾರ್ಥಿಗಳ ಹಾಗೂ ಪಾಲಕರ ಬೇಡಿಕೆಯ ಮೇರೆಗೆ ಈ ಸೆಂಟರ್ ಆರಂಭಿಸಿದ್ದಾರೆ.

  ಲಾಂಗ್ ಟರ್ಮ್ ನೀಟ್

  ಡಾಕ್ಟರ್ ಆಗಬೇಕೆಂದು ಗುರಿ ಇಟ್ಟುಕೊಂಡ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನೀಟ್ ಪರೀಕ್ಷೆ ಬರೆದು, ನಿರೀಕ್ಷಿತ ಅಂಕಗಳು ಬಾರದಿದ್ದಾಗ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿಯೇ ಸಂಪೂರ್ಣ ತಯಾರಾಗಿ, ಒಂದು ವರ್ಷ ಪರ್ಯಂತ ತರಬೇತಿ ಪಡೆಯುವುದನ್ನು ಲಾಂಗ್ ಟರ್ಮ್ ನೀಟ್ ತರಬೇತಿ ಎನ್ನುತ್ತಾರೆ.

  ನೀಟ್ ಪರೀಕ್ಷೆಯಲ್ಲಿ ರಾಂಕ್ ಪಡೆಯಲು ಎಷ್ಟೋ ಸಲ ಪ್ರತಿಭಾವಂತರಿಗೆ ಕೂಡ ಸಾಧ್ಯವಾಗುವುದಿಲ್ಲ. ಸರಿಯಾದ ಕೋಚಿಂಗ್ ದೊರಕದಿರುವುದು, ಯೋಗ್ಯ ಸ್ಟಡಿ ಮೆಟೀರಿಯಲ್ ಸಿಗದಿರುವುದು, ಸೂಕ್ತ ಮಾರ್ಗದರ್ಶನದ ಕೊರತೆ, ವಿಷಯಗಳನ್ನು ನೆನಪಿಟ್ಟುಕೊಳ್ಳುವ ತಂತ್ರಗಳ ಅರಿವಿಲ್ಲದಿರುವಿಕೆ, ಪರಿಣಾಮಕಾರಿಯಾಗಿರದ ಪಾಠ ಪ್ರವಚನ ಮೊದಲಾದವು ಕಡಿಮೆ ಅಂಕ ಗಳಿಸಲು ಕಾರಣಗಳು. ಇವನ್ನೆಲ್ಲ ದೃಷ್ಟಿಯಲ್ಲಿರಿಸಿಕೊಂಡೇ ಎಕ್ಸೆಲ್ ಲಾಂಗ್ ಟರ್ಮ್ ಕೋಚಿಂಗ್ ಸೆಂಟರ್ ಕಾರ್ಯ ನಿರ್ವಹಿಸುತ್ತದೆ. ರಿಪೀಟರ್ಸ್ ಮನೋವಿಜ್ಞಾನ ಅರ್ಥ ಮಾಡಿಕೊಂಡು, ಅವರು ಅಧಿಕ ಅಂಕ ಗಳಿಸಲು ಬೇಕಾಗುವ ಎಲ್ಲ ವಿಧಾನಗಳನ್ನು ಎಕ್ಸೆಲ್‌ನಲ್ಲಿ ಹೇಳಿ ಕೊಡಲಾಗುತ್ತದೆ.

  ಎಕ್ಸೆಲ್‌ನ ವೈಶಿಷ್ಟ್ಯ

  ವೈದ್ಯಕೀಯ ಶಿಕ್ಷಣ ಪಡೆಯಲು ರಾಷ್ಟ್ರಮಟ್ಟದಲ್ಲಿ ಈ ಬಾರಿ ಸುಮಾರು ಇಪ್ಪತ್ತೈದು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇಂಥ ಕಠಿಣ ಸ್ಪರ್ಧೆಯ ನಡುವೆ ಸೀಮಿತ ಸಂಖ್ಯೆಯ ಸೀಟುಗಳಿರುವಾಗ, ಎಕ್ಸೆಲ್‌ನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ. ನೀಟ್ ಬರೆದ 180 ವಿದ್ಯಾರ್ಥಿಗಳ ಪೈಕಿ 176 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. 53 ಮಂದಿಗೆ 550ಕ್ಕಿಂತ ಹೆಚ್ಚು ಅಂಕಗಳು, 11 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿಕ ಅಂಕಗಳು ಬಂದಿರುವುದು ಗಮನಾರ್ಹ. 35ನೇ ರಾಷ್ಟ್ರೀಯ ಕೆಟಗರಿ ರ‌್ಯಾಂಕ್ ಪಡೆದುಕೊಂಡ ಸಂಜನಾ ಈರೈನವರ್ ಭೋಪಾಲ್‌ನ ಏಮ್ಸ್‌ನಲ್ಲಿ ಸ್ಥಾನ ಪಡೆದರೆ, 720ರ ಪೈಕಿ 692 ಅಂಕ ಪಡೆದ ಆದಿತ್ ಜೈನ್ ಭುವನೇಶ್ವರದ ಏಮ್ಸ್‌ನಲ್ಲಿ ಮೆಡಿಕಲ್ ಕೋರ್ಸ್‌ಗೆ ಆಯ್ಕೆಯಾಗಿದ್ದಾರೆ. ಇಂಥ ಅಪೂರ್ವ ಸಾಧನೆಗೆ ಎಕ್ಸೆಲ್‌ನ ಪಾಠ-ಪ್ರವಚನ ವ್ಯವಸ್ಥೆಯೇ ಕಾರಣವೆನ್ನುವುದು ವಿದ್ಯಾರ್ಥಿಗಳ ಅಭಿಮತ.

  ಪ್ರತಿಭಾವಂತರಿಗೆ ರಿಯಾಯಿತಿ

  ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡವರಿಗೆ ಸಂಪೂರ್ಣ ಉಚಿತ ನೀಟ್ ಕೋಚಿಂಗ್, ಶೇ.85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದವರಿಗೆ ಕಾಲೇಜು ಶುಲ್ಕದಲ್ಲಿ 50 ಶೇ. ರಿಯಾಯಿತಿ ಇರುತ್ತದೆ. ನೀಟ್ ಪರೀಕ್ಷೆಯಲ್ಲಿ 450ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಕೋಚಿಂಗ್ ನೀಡಲಾಗುತ್ತದೆ. 400ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಫೀಸ್‌ನಲ್ಲಿ 50 ಶೇ. ರಿಯಾಯಿತಿ ನೀಡಲಾಗುತ್ತದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 9880899769, 9902284110 ಸಂಪರ್ಕಿಸಬಹುದು.

  ಭೌತವಿಜ್ಞಾನ ವಿಭಾಗ

  ಡಾ.ಸತ್ಯ ನಾರಾಯಣ ಭಟ್: 15 ವರ್ಷಗಳ ಬೋಧನಾನುಭವ, ರೋಹಿತ್ ಕೋಟೇಶ್ವರ್ : 20 ವರ್ಷ, ಮಂಜುಳಾ: 15 ವರ್ಷ, ದಿವ್ಯಾ ಹೆಗಡೆ: 12 ವರ್ಷ, ಮನೋಹರ್: 10 ವರ್ಷ, ಜೋಸ್ಟಮ್: 10 ವರ್ಷ, ಶರತ್ ಕ್ರಾಸ್ತಾ: 8 ವರ್ಷ, ಶ್ರೀನಿಧಿ ರಾಜ್: 6 ವರ್ಷ, ಆನಂದ ಧರ್ಣಪ್ಪ ಪೂಜಾರಿ: 20 ವರ್ಷ, ಶಿಲ್ಪಾ: 8 ವರ್ಷಗಳ ಬೋಧನಾನುಭವ.

  ರಸಾಯನ ವಿಜ್ಞಾನ

  ಸುಮಂತ್ ಕುಮಾರ್ ಜೈನ್: 16 ವರ್ಷಗಳ ಬೋಧನಾನುಭವ, ವೆಂಕಟೇಶ್: 24 ವರ್ಷ, ಜೈಸ್ ಆಂಟನಿ: 15 ವರ್ಷ, ಕೇಶವ ರಾವ್: 12 ವರ್ಷ, ಈಶ್ವರ್ ಶರ್ಮ: 10 ವರ್ಷ, ಹರೀಶ್ ಗೌಡ: 8 ವರ್ಷ, ವಿಚೇತ್ ಕುಮಾರ್: 10 ವರ್ಷಗಳ ಬೋಧನಾನುಭವ.

  ಜೀವ ವಿಜ್ಞಾನ

  ಚಿಗುರು ಪ್ರಕಾಶ್: 22 ವರ್ಷಗಳ ಬೋಧನಾನುಭವ, ಅಜಯ್ ವಿಲ್ಸನ್: 20 ವರ್ಷ, ನಿಶಾ ಪೂಜಾರಿ: 8 ವರ್ಷ, ದೀಪಾ: 15 ವರ್ಷ ಹಾಗೂ ಸ್ಮಿತಾ: 10 ವರ್ಷಗಳ ಬೋಧನಾನುಭವವಿದೆ.

  ಪ್ರತ್ಯೇಕ ಹಾಸ್ಟೆಲ್

  ಎಕ್ಸೆಲ್‌ನಲ್ಲಿ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್, ಪ್ರತ್ಯೇಕ ಸ್ಟಡಿ ಅವರ್, ಯೋಗ ಧ್ಯಾನ ತರಬೇತಿ, ಸ್ಮರಣ ಶಕ್ತಿ ಹೆಚ್ಚಿಸುವ ತಂತ್ರಗಳನ್ನು ಹೇಳಿಕೊಡಲಾಗುತ್ತದೆ. 24್ಡ7 ಆರೋಗ್ಯ ಸೇವೆ, ಬಿಸಿನೀರಿನ ವ್ಯವಸ್ಥೆ, ಲಾಂಡ್ರಿ, ಇ-ಲೈಬ್ರರಿ ಮೊದಲಾಗಿ ಹತ್ತಾರು ವಿದ್ಯಾರ್ಥಿ ಸ್ನೇಹಿ ಸೌಕರ್ಯಗಳು ಎಕ್ಸೆಲ್‌ನಲ್ಲಿವೆ.

  ಪ್ರಾಧ್ಯಾಪಕರೇ ಆಸ್ತಿ

  ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದ, ಅನುಭವಿ, ಪ್ರತಿಭಾವಂತ, ಉನ್ನತ ಶೈಕ್ಷಣಿಕ ಅರ್ಹತೆಗಳಿರುವ ಪ್ರಾಧ್ಯಾಪಕರು ಎಕ್ಸೆಲ್‌ನಲ್ಲಿದ್ದಾರೆ. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಈ ಪ್ರಾಧ್ಯಾಪಕರ ವಿದ್ಯಾರ್ಥಿಗಳು ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts