More

  ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ, ಮೂವರ ವಿರುದ್ಧ ಪ್ರಕರಣ

  ಉಪ್ಪಿನಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪದ್ಮುಂಜ ಎಂಬಲ್ಲಿ ಪಿಕಪ್ ವಾಹನವೊಂದರಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಮೂರು ಜಾನುವಾರುಗಳನ್ನು ಉಪ್ಪಿನಂಗಡಿ ಪೊಲೀಸರು ಪತ್ತೆಹಚ್ಚಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸ್ ಉಪನಿರೀಕ್ಷಕರಾದ ಭರತ್ ಕುಮಾರ್ ವಿ.ಮತ್ತವರ ತಂಡ ಪದ್ಮುಂಜ ಕಡೆಯಿಂದ ಕುಪ್ಪೆಟ್ಟಿ ಕಡೆಗೆ ಪಿಕಪ್ ವಾಹನದಲ್ಲಿ ಮೂರು ಜಾನುವಾರುಗಳ ಕಾಲುಗಳನ್ನು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಹಾಕಿರುವುದನ್ನು ಕಂಡುಬಂದು ವಾಹನ ಚಾಲಕನಲ್ಲಿ ವಿಚಾರಿಸಿದಾಗ ಈ ಜಾನುವಾರುಗಳನ್ನು ಪದ್ಮುಂಜ ದೊಂಬ ಗೌಡ ಎಂಬುವರಿಂದ ಖರೀದಿ ಮಾಡಿ ಉರುವಾಲುಪದವಿನ ಶಾಕೀರ್ ಎಂಬಾತನಿಗೆ ಕಡಿದು ಮಾಂಸ ಮಾಡಲು ಸಾಗಾಟಮಾಡುವುದಾಗಿ ತಿಳಿಸಲಾಯಿತು. ಪೊಲೀಸರು ವಾಹನ ಮತ್ತದರಲ್ಲಿನ ಒಂದು ದನ, ಒಂದು ಹೋರಿ, ಒಂದು ಕರು ಸಹಿತ ಚಾಲಕ ರಕ್ಷಿತ್‌ನನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts