More

    ರಾಷ್ಟ್ರ ರಾಜಧಾನಿಯಲ್ಲಿ 50ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್​ ಬೆದರಿಕೆ! ಪೊಲೀಸ್​ ಇಲಾಖೆ ಹೈ ಅಲರ್ಟ್​

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ, ಎನ್​ಸಿಆರ್​ನಲ್ಲಿರುವ ಅನೇಕ ಶಾಲೆಗಳು ಬುಧವಾರ (ಮೇ 1) ಬೆಳಗ್ಗೆ​ ಇಮೇಲ್​ ಮೂಲಕ ಬಾಂಬ್​ ಬೆದರಿಕೆ ಸಂದೇಶಗಳನ್ನು ಸ್ವೀಕರಿಸಿದ್ದು, ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳನ್ನು ಮನೆಗೆ ವಾಪಸ್​ ಕಳುಹಿಸಿರುವುದಾಗಿ ವರದಿಯಾಗಿದೆ.

    ಮಾಧ್ಯಮ ವರದಿಗಳ ಪ್ರಕಾರ ಸುಮಾರು 50ಕ್ಕೂ ಅಧಿಕ ಶಾಲೆಗಳು ಇಮೇಲ್​ ಬೆದರಿಕೆ ಸಂದೇಶಗಳನ್ನು ಸ್ವೀಕರಿಸಿವೆ. ಸದ್ಯ ಎಲ್ಲ ಶಾಲೆಗಳಲ್ಲಿ ತಪಾಸಣೆ ನಡೆಸಿದ್ದು, ಗಾಬರಿ ಪಡುವಂಥದ್ದು ಏನೂ ಇಲ್ಲ ಎಂದು ಕೇಂದ್ರ ಡಿಸಿಪಿ ದೇವೇಶ್​ ಕುಮಾರ್​ ಮಹ್ಲಾ ಮಾಧ್ಯಗಳಿಗೆ ಮಾಹಿತಿ ನೀಡಿದ್ದಾರೆ.

    ಶ್ವಾನ ದಳ ಮತ್ತು ದೆಹಲಿ ಹಾಗೂ ನೊಯ್ಡಾ ಪೊಲೀಸ್​ ತಂಡ ಸ್ಥಳಕ್ಕೆ ಧಾವಿಸಿದ್ದು, ಶಾಲಾ ಆವರಣಗಳನ್ನು ಪರಿಶೀಲಿಸುತ್ತಿವೆ. ನಿನ್ನೆಯಿಂದ ಇಲ್ಲಿಯವರೆಗೂ ಅನೇಕ ಶಾಲೆಗಳಿಗೆ ಬೆದರಿಕೆ ಸಂದೇಶಗಳು ಇಮೇಲ್​ ಮೂಲಕ ಹೋಗಿದ್ದು, ಎಲ್ಲ ಸಂದೇಶಗಳ ಮಾದರಿಯು ಒಂದೇ ರೀತಿ ಇರುವುದಾಗಿ ತನಿಖೆಯ ಆರಂಭದಲ್ಲಿ ತಿಳಿದುಬಂದಿದೆ. ಸಂದೇಶದಲ್ಲಿ ಯಾವುದೇ ಡೇಟ್​ಲೈನ್​ ಉಲ್ಲೇಖಿಸಿಲ್ಲ. ಸದ್ಯ ತನಿಖೆ ಮುಂದುವರಿದಿದೆ ಎಂದು ದೆಹಲಿ ಪೊಲೀಸ್​ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಯಾವ ಶಾಲೆಗಳಿಗೆ ಬೆದರಿಕೆ ಕರೆ ಹೋಗಿದೆ?
    * ದೆಹಲಿ ಪಬ್ಲಿಕ್ ಸ್ಕೂಲ್ (ದ್ವಾರಕಾ)
    * ಸಂಸ್ಕೃತಿ ಶಾಲೆ, ಚಾಣಕ್ಯ ಪುರಿ, ದೆಹಲಿ
    * ಮದರ್ ಮೇರಿಸ್ ಸ್ಕೂಲ್, ಮಯೂರ್ ವಿಹಾರ್, ಪೂರ್ವ ದೆಹಲಿ
    * ದೆಹಲಿ ಪಬ್ಲಿಕ್ ಸ್ಕೂಲ್ (ನೋಯ್ಡಾ)
    * ದೆಹಲಿ ಪಬ್ಲಿಕ್ ಸ್ಕೂಲ್ (ಆರ್​ಕೆ ಪುರಂ)
    * ದೆಹಲಿ ಪಬ್ಲಿಕ್ ಸ್ಕೂಲ್ (ವಸಂತ್ ಕುಂಜ್)
    * ದೆಹಲಿ ಪಬ್ಲಿಕ್ ಸ್ಕೂಲ್ (ಗ್ರೇಟರ್ ನೋಯ್ಡಾ)
    * ಸೇಂಟ್ ಥಾಮಸ್ ಬಾಲಕಿಯರ ಹಿರಿಯ ಮಾಧ್ಯಮಿಕ ಶಾಲೆ, ದೆಹಲಿ
    * ಆರ್ಮಿ ಪಬ್ಲಿಕ್ ಸ್ಕೂಲ್, ದೆಹಲಿ
    * ದೆಹಲಿ ಪಬ್ಲಿಕ್ ಸ್ಕೂಲ್, ಕೈಲಾಶ್ ಪೂರ್ವ, ದೆಹಲಿ
    * ಜಿ ಡಿ ಗೋಯೆಂಕಾ ಪಬ್ಲಿಕ್ ಸ್ಕೂಲ್, ದೆಹಲಿ

    ಇಂದು ಬೆಳಗಿನ ಜಾವ 4.15ರ ಸುಮಾರಿಗೆ ಹಲವು ಶಾಲೆಗಳಿಗೆ ಒಂದೇ ಇಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿರುವ ಮಾಹಿತಿ ನಮಗೆ ಸಿಕ್ಕಿದೆ. ನಾವು ತಕ್ಷಣ ಕ್ರಮ ಕೈಗೊಂಡು ಶಾಲೆಗಳನ್ನು ಮುಚ್ಚಲು ಮತ್ತು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆವು. ಎಲ್ಲ ಶಾಲೆಗಳಲ್ಲಿ ತಪಾಸಣೆ ನಡೆಯುತ್ತಿದೆ ಮತ್ತು ನಮ್ಮ ತಾಂತ್ರಿಕ ವಿಭಾಗವು ಇಮೇಲ್ ಕುರಿತು ತನಿಖೆ ಮಾಡುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಸಾಮೂಹಿಕ ಇಮೇಲ್ ಎಂದು ತೋರುತ್ತದೆ. ವಿದ್ಯಾರ್ಥಿಗಳು ಮತ್ತು ಪಾಲಕರು ಶಾಂತವಾಗಿರಲು ಮತ್ತು ಗಾಬರಿಯಾಗದಂತೆ ನಾವು ವಿನಂತಿಸುತ್ತೇವೆ. ನಾವು ಪ್ರತಿಯೊಂದು ಶಾಲೆಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಶಾಲೆಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ದೆಹಲಿ-ಎನ್​ಸಿಆರ್​ ನೈರುತ್ಯ ಡಿಸಿಪಿ ರೋಹಿತ್​ ಮೀನಾ ಹೇಳಿದ್ದಾರೆ.

    ವಿದ್ಯಾರ್ಥಿಗಳ ಸುರಕ್ಷತೆಗೆ ಬೆದರಿಕೆ ಹಾಕುವ ಇಮೇಲ್ ಸ್ವೀಕರಿಸಿದ್ದೇವೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಾವು ವಿದ್ಯಾರ್ಥಿಗಳನ್ನು ತಕ್ಷಣ ಮನೆಗೆ ಕಳುಹಿಸುತ್ತಿದ್ದೇವೆ. ಖಾಸಗಿ ಪ್ರಯಾಣಿಕರು ದಯವಿಟ್ಟು ನಿಮ್ಮ ಮಕ್ಕಳನ್ನು ಶಾಲೆಯ ಆವರಣದಿಂದ ತಕ್ಷಣ ಕರೆತರಲು ವ್ಯವಸ್ಥೆ ಮಾಡಿ. ಸಾಧ್ಯವಾದಷ್ಟು ನಿಮ್ಮ ಸಹಕಾರವಿರಲಿ ಎಂದು ಶಾಲಾ ಆಡಳಿತ ಮಂಡಳಿಗಳು ವಿನಂತಿಸಿವೆ. (ಏಜೆನ್ಸೀಸ್​)

    ರಸ್ತೆ ಏನು ನಿಮ್ಮ ಅಪ್ಪನ ಮನೆ ಆಸ್ತಿಯಾ? ಶಾಸಕ-ಮೇಯರ್​ ದಂಪತಿಗೆ KSRTC ಡ್ರೈವರ್​ ತಾಯಿಯಿಂದ ತರಾಟೆ

    ಮಹಿಳೆ ಹಸಿದಿದ್ದಾಗ ಬಾಯಿಗೆ ಅನ್ನ ಹಾಕಿ ಅದನ್ನಲ್ಲ… ಭಾರಿ ಸಂಚಲನ ಸೃಷ್ಟಿಸಿದ ನಟಿ ರಶ್ಮಿ ಪೋಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts