More

    ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟ ಕೇಸ್​: ತನ್ನ ಸುಳಿವು ಸಿಗದಂತೆ ಮಾಡಲು ಆರೋಪಿ ಮಾಡಿದ ಪ್ಲಾನ್​ ಬಯಲು

    ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟ ಪ್ರಕರಣದ ಆರೋಪಿಯ ಪತ್ತೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಇದರ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದ ಒಂದೊಂದೆ ಸ್ಪೋಟಕ ಸಂಗತಿಗಳು ಬಯಲಾಗುತ್ತಿವೆ. ಬಾಂಬ್ ಸ್ಪೋಟಕ್ಕೂ ಮುನ್ನ ಆರೋಪಿ ಖತರ್ನಾಕ್ ಐಡಿಯಾ ಮಾಡಿದ್ದ. ತನ್ನ ಸುಳಿವು ಸಿಗದಂತೆ ಮಾಡಲು ಮೊದಲೇ ಪ್ಲಾನ್​ ಮಾಡಿದ್ದ ಎಂಬುದು ಬಯಲಾಗಿದೆ.

    ಬಾಂಬ್​ ಸ್ಪೋಟಕ್ಕೂ ಮುನ್ನ ರಾಮೇಶ್ವರಂ ಕೆಫೆ ರಸ್ತೆಯಲ್ಲಿಯೇ ಆರೋಪಿ ಸಾಕಷ್ಟು ಬಾರಿ ಸಂಚರಿಸಿದ್ದ. ಕೆಫೆ ಮುಂದೆ ಇಳಿಯುವುದಕ್ಕೂ ಮುಂಚೆ 10 ರಿಂದ 15 ಬಾರಿ ಬಸ್ ಚೇಂಜ್ ಮಾಡಿದ್ದಾನೆ. ಬಳಿಕ ಕೆಫೆ ಹತ್ತಿರ KA-57-F-4517 ನಂಬರ್ ಬಸ್ ನಿಂದ ಇಳಿದಿದ್ದ. ಈ ಬಸ್​ ಡಿಪೋ-25ಕ್ಕೆ ಸೇರಿದೆ. ಆದರೆ, ಅದಕ್ಕೂ ಮುಂಚೆ ಪ್ರತಿ ಬಸ್ ನಿಲ್ದಾಣದಲ್ಲೂ ಇಳಿದು ಬಸ್ ಚೇಂಜ್ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಆರೋಪಿ ಕ್ಯಾಮರಾಗಳಿಲ್ಲದ ಬಸ್​ ನಿಲ್ದಾಣಗಳನ್ನೇ ನೋಡಿ ಇಳಿದಿದ್ದಾನೆ. ಒಂದೇ ಬಾರಿ ಮೂರರಿಂದ ನಾಲ್ಕು ಬಸ್ ಬಂದಾಗ, ಅನೇಕ ಬಾರಿ ಬಸ್ ಚೇಂಜ್ ಮಾಡಿದ್ದಾನೆ. ತನ್ನ ಸುಳಿವು ಸುಲಭವಾಗಿ ಸಿಗುತ್ತೆ ಅನ್ನೋ ಕಾರಣಕ್ಕೆ ಸಾಕಷ್ಟು ಬಸ್​ಗಳನ್ನು ಆರೋಪಿ ಚೇಂಜ್ ಮಾಡಿದ್ದಾನೆ. ಎಲ್ಲೂ ಕೂಡ ಮಾಸ್ಕ್ ತೆಗೆಯದೆ ಮತ್ತು ಮಾತನಾಡದೇ ಸಂಚಾರ ಮಾಡಿದ್ದಾನೆ.

    ಆರಾಮಾಗಿ, ಯಾರಿಗೂ ಅನುಮಾನ ಬರದಂತೆ ಬಸ್​ನಲ್ಲಿ ಸಂಚರಿಸಿದ್ದಾನೆ. ಬಸ್​ನಲ್ಲಿ ಟಿಕೆಟ್ ತೆಗೆದುಕೊಂಡರೆ ತೊಂದರೆ ಆಗುತ್ತೆ ಅಂತಾ ದಿನದ ಪಾಸ್ ತೆಗೆದುಕೊಂಡು ಸಂಚರಿಸಿದ್ದಾನೆ. ವೋಲ್ವೋ ಬಸ್​ನಿಂದ ದಿನದ ಪಾಸ್ ತೆಗೆದುಕೊಂಡು ಎಲ್ಲ ಕಡೆ ಪಾಸ್ ತೋರಿಸಿ ಸಂಚರಿಸಿದ್ದಾನೆ.

    ರಾಮೇಶ್ವರಂ ಕೆಫೆಯಿಂದ ಕುಂದನಹಳ್ಳಿ ಕಾಲೊನಿ, ಐಟಿಪಿಯಲ್ ಮಾರ್ಗವಾಗಿ ಹಲವು ಬಸ್​ಗಳನ್ನು ಆರೋಪಿ ಬದಲಾಯಿಸಿದ್ದಾರೆ. ಮಾರ್ಗ ಮಧ್ಯೆ ಎರಡು ಕಡೆ ತನ್ನ ಶರ್ಟ್ ಚೇಂಜ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದರಿಂದಲೇ ಆರೋಪಿ ಸುಳಿವು ಸಿಗದೇ ಪೊಲೀಸ್​ ಇಲಾಖೆ ತಲೆಕೆಡಸಿಕೊಂಡಿದೆ.

    ಬಿಎಂಟಿಸಿ ಬಸ್​ಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಅಧಿಕಾರಿಗಳು ಒಂದೊಂದಾಗಿ ನೋಡಿತ್ತಿದ್ದಾರೆ. ಸದ್ಯಕ್ಕೆ ಆರೋಪಿಯನ್ನು ಕಂಡು ಹಿಡಿಯುವುದೇ ದೊಡ್ಡ ಟಾಸ್ಕ್ ಆಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಬಿಎಂಟಿಸಿ ಉನ್ನತ ಮೂಲಗಳಿಂದ ಈ ಮಾಹಿತಿ ತಿಳಿದುಬಂದಿದೆ.

    ಲಿಪ್​ಲಾಕ್​ ಮಾಡೋದಾದ್ರೆ ಈ ನಟನೊಂದಿಗೆ ಮಾತ್ರ! ನಟಿ ಪ್ರಿಯಾ ಭವಾನಿ ಶಂಕರ್​ ಓಪನ್​ ಟಾಕ್​

    ಕರ್ತವ್ಯ ಮುಗಿಸಿ ಮನೆಗೆ ಹೋಗುವಾಗ ಕೇಳಿಸಿತು ಆಕ್ರಂದನ: ಸಂಪಿಗೆ ಧುಮುಕಿ ಮಗುವನ್ನು ರಕ್ಷಿಸಿದ ಎಸ್​ಐ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts