More

    ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ; 1 ಕೆ.ಜಿ. ಗಾಂಜಾ ವಶ

    ಸವಣೂರ: ಪಟ್ಟಣದ ಪ್ರವಾಸಿ ಮಂದಿರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು ಸೋಮವಾರ ಬಂಧಿಸಿ ಆತನಿಂದ 20 ಸಾವಿರ ರೂ. ಮೌಲ್ಯದ 1 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
    ಪಟ್ಟಣದ ಮಂಗಳವಾರ ಪೇಟೆಯ ಮಳೆಮಲ್ಲಯ್ಯ ಚಂದ್ರಶೇಖರಯ್ಯ ಕನವಳ್ಳಿಮಠ (25) ಬಂಧಿತ ಆರೋಪಿ.
    ಈತ ಪಟ್ಟಣದ ಪ್ರವಾಸಿ ಮಂದಿರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸೈಬರ್ ಕ್ರೈಂ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಗಾಂಜಾ ಹಾಗೂ ಆತನ ಬಳಿಯಿದ್ದ ಮೊಬೈಲ್ ಪೋನ್ ವಶಪಡಿಸಿಕೊಂಡಿದ್ದಾರೆ.
    ಈ ಕುರಿತು ಹಾವೇರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಶಿವಶಂಕರ ಗಣಾಚಾರಿ, ಪಿಎಸ್‌ಐ ಎಂ.ಎಫ್. ದುರ್ಗಪ್ಪನವರ, ಎನ್.ಡಿ. ಮಳಗಾವಿ, ಎಚ್.ಎಂ. ಗಾಜಿಗೌಡ್ರ, ಪಿ.ಆರ್. ಭಾವಿಕಟ್ಟಿ ಮತ್ತಿತರರ ಸಿಬ್ಬಂದಿ ದಾಳಿಯ ತಂಡದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts