More

    ಪಿಎಸ್‌ಐ ಅಕ್ರಮದ ಆರೋಪಿಗಳ ಜತೆ ಬಿಜೆಪಿ ಅಭ್ಯರ್ಥಿ; ಕಾಂಗ್ರೆಸ್ ಗುರುತರ ಆರೋಪ

    ಬೆಂಗಳೂರು: ಪಿಎಸ್‌ಐ ಹಗರಣದ ಪ್ರಮುಖ ಆರೋಪಿಗಳಾದ ಆರ್.ಡಿ.ಪಾಟೀಲ್, ದಿವ್ಯಾ ಹಾಗರಗಿ ಜತೆ ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾದವ್ ಕಾಣಿಸಿಕೊಂಡಿದ್ದಾರೆ. ಅವರ ಮನೆಗಳಿಗೆ ಹೋಗಿ ಊಟ ಮಾಡುತ್ತಿದ್ದಾರೆ. ಪಿಎಸ್‌ಐ ಹಗರಣದ ಎಲ್ಲಾ ಆರೋಪಿಗಳ ಜತೆ ಸೇರಿಕೊಂಡು ಬಿಜೆಪಿಯವರು ಸಾಕ್ಷಿ ನಾಶ ಮಾಡುವ ಕೆಲಸ ಮಾಡುತ್ತಿದ್ದಾರೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು,
    ಕಲಬುರ್ಗಿಯ ಎಂಪಿ ಉಮೇಶ್ ಜಾದವ್ ಅವರು ನಕಲು ಕೇಂದ್ರ ಗಳನ್ನು ಸೃಷ್ಟಿ ಮಾಡುವುದರಲ್ಲಿ ಪರಿಣಿತರು. ಅಕ್ರಮ ನಡೆದ ದಿವ್ಯಾ ಹಾಗರಗಿ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆಯಬಹುದು ಎಂದು ಶಿಫಾರಸ್ಸು ಪತ್ರ ನೀಡಿದ್ದರು ಎಂದು ಆಪಾದಿಸಿದರು.
    ಈಕೆ ಮನೆಯಲ್ಲಿ ಅಂದಿನ ಗೃಹಸಚಿವ ದ್ರಾಕ್ಷಿ, ಗೋಡಂಬಿ ತಿಂದು ಬಂದಿದ್ದರು. ಇದನ್ನು ದಾಖಲೆ ಸಮೇತ ಬಹಿರಂಗ ಮಾಡಿದಾಗ ಅದಕ್ಕೆ ಅವರಿಂದ ಸರಿಯಾದ ಉತ್ತರವೇ ಬರಲಿಲ್ಲ. ರಾಜ್ಯಕ್ಕೆ ಕಪ್ಪುಚುಕ್ಕೆ ತಂದವರ ಜತೆ ಬಿಜೆಪಿಯವರು ಮೆರವಣೆಗೆ ಮಾಡುವ ಮೂಲಕ ಕಿಂಚಿತ್ತೂ ನೈತಿಕತೆ ಇಲ್ಲದೇ ಓಡಾಡುತ್ತಿದ್ದಾರೆ ಎಂದು ಕುಟುಕಿದರು.
    ಬಿಟ್ ಕಾಯಿನ್ ಹಗರಣದ ಶ್ರೀಕಿಯನ್ನು ಬಸವರಾಜ ಬೊಮ್ಮಾಯಿ ಹಾವೇರಿಗೆ ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಬಂದರೆ ಒಳ್ಳೆಯದು ಎಂಬುದು ನನ್ನ ಸಲಹೆ ಎಂದು ವ್ಯಂಗ್ಯವಾಡಿದ್ದಾರೆ.
    ಕೆಪಿಸಿಸಿ ಮುಖ್ಯ ವಕ್ತಾರರಾದ ತೇಜಸ್ವಿನಿ ರಮೇಶ್ ಮಾತನಾಡಿ, ಉಮೇಶ್ ಜಾದವ್ ಅವರು ಪಿಎಸ್‌ಐ ಹಗರಣದ ಆರೋಪಿಗಳಿಂದ ಅಂತರ ಕಾಯ್ದುಕೊಳ್ಳದೆ ಅವರ ಜತೆಯೇ ಕೈ ಜೋಡಿಸಿದ್ದಾರೆ. ಇವುಗಳಿಗೆ ನಾ ಖಾವೋಂಗಾ ನಾ ಖಾನೆದೋಂಗಾ ಎನ್ನುವ ಮೋದಿಯವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts