More

    ಕೋಲಾರ ನಗರಸಭೆ ಆಯುಕ್ತರ ಕಚೇರಿಗೆ ಮುತ್ತಿಗೆ

    ಕೋಲಾರ: ಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಸೋಮವಾರ ನಗರಸಭೆ ಸದಸ್ಯರು, ಕೋಲಾರ ನಗರಸಭೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಕೋಲಾರ ನಗರಸಭೆ ಅಂದರೇ ಹಾಗೆ. ಇಲ್ಲಿ ಬಡವರು ಬಂದರೆ ಕೆಲಸಗಳು ಆಗುವುದಿಲ್ಲ. ಸಿಬ್ಬಂದಿಗೆ ಮಾನವೀಯತೆಯೇ ಇಲ್ಲ, ದುಡ್ಡುಕೊಟ್ಟರೆ ಏನು ಬೇಕಾದರೂ ಮಾಡುತ್ತಾರೆ. ದೂರವಾಣಿ ಕರೆ ಮಾಡಿದರೆ ಕಮಿಷನರ್ ಶಿವಾನಂದ, ಹೂ ಆರ್ ಯು ಅಂತಾರೆ! ದಲ್ಲಾಳಿಗಳಿಗೆ ಇರುವ ಗೌರವ ಸದಸ್ಯರಿಗೆ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿದರು.
    ಸದಸ್ಯ ಎಸ್.ಆರ್.ಮುರಳಿಗೌಡ ಮಾತನಾಡಿ, ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಅಽಕಾರಾವಽ ಮುಗಿದು 10 ತಿಂಗಳಾಗಿದ್ದು, ಜಿಲ್ಲಾಧಿಕಾರಿಯನ್ನು ಆಡಳಿತಾಽಕಾರಿಯಾಗಿ ಸರ್ಕಾರ ನೇಮಕ ಮಾಡಿದೆ. ಜಿಲ್ಲಾಽಕಾರಿ ನಗರಸಭೆ ಕಚೇರಿಗೆ ಬಂದು ಪ್ರತಿವಾರ ಅಧಿಕಾರಿಗಳ ಸಭೆ ನಡೆಸಬೇಕು. ಆದರೆ ಕೋಲಾರ ಡಿಸಿ ಜಿಲ್ಲಾಡಳಿತ ಭವನದಲ್ಲೇ ಕುಳಿತು ಹಲವು ವಿಷಯಗಳಿಗೆ ಅನುಮೋದನೆ ನೀಡುತ್ತಾರೆ ಎಂದು ಕಿಡಿಕಾರಿದರು.
    ಇಲ್ಲಿನ ಪೌರಾಯುಕ್ತರಿಗೆ, ಸಿಬ್ಬಂದಿಗೆ ನಗರಸಭೆ ಕಾರ್ಯದ ಬಗ್ಗೆ ಸೂಕ್ತ ಅರಿವಿಲ್ಲ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದಿಲ್ಲ. ಖಾಸಗಿ ಹೋಟಲ್‌ಗಳಲ್ಲಿ ಕುಳಿತು ಕಡತ ವಿಲೇವಾರಿ ಮಾಡುತ್ತಾರೆ. ಸಿಬ್ಬಂದಿಯಂತೂ ಮೀತಿ ಮೀರಿ ಹೋಗಿದ್ದಾರೆ. ದಲ್ಲಾಳಿಗಳ ಮೂಲಕ ಬಂದರೆ ಮಾತ್ರ ಕೆಲಸ ಆಗುತ್ತದೆ, ಸದಸ್ಯರ ಮಾತಿಗೂ ಗೌರವ ಕೊಡುವುದಿಲ್ಲ ಎಂದು ಆರೋಪಿಸಿದರು.
    ಖಾತೆ ಬದಲಾವಣೆ, ತೆರಿಗೆ ಪಾವತಿ, ಟ್ರೇಡ್ ಲೈಸನ್ಸ್, ದಾಖಲೆ ತಿದ್ದುಪಡಿ ಹೀಗೆ ಹಲವು ಕೆಲಸಗಳಿಗೆ ನಗರವಾಸಿಗಳು ಅರ್ಜಿ ಸಲ್ಲಿಸಿರುತ್ತಾರೆ, ಹಿರಿಯ ನಾಗರಿಕರು ಪ್ರತಿದಿನ ಕಚೇರಿಗೆ ಅಲೆದಾಡಿದರೂ ಅರ್ಜಿ ವಿಲೇವಾರಿ ಆಗಿರುವುದಿಲ್ಲ. ಬರ್ಥ್ ಆ್ಯಂಡ್ ಡೆತ್ ವಿಭಾಗದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ವಿಭಾಗದಲ್ಲಿ ಪ್ರಮಾಣ ಪತ್ರ ಪಡೆದುಕೊಳ್ಳಬೇಕಾದರೆ ದಿನಗಟ್ಟಲೇ ಕಾಯಬೇಕು. ಜನತೆ ಎಷ್ಟೇ ಸಮಸ್ಯೆ ಅನುಭವಿಸುತ್ತಿದ್ದರೂ ಅಧಿಕಾರಿಗಳಿಗೆ, ಸಿಬ್ಬಂದಿಗೆ ಗಂಭೀರತೆ ಇಲ್ಲದಂತಾಗಿದೆ ಎಂದು ದೂರಿದರು.
    ನಗರದ ವಿವಿಧ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನಗರಸಭೆಯ ಸಹಾಯವಾಣಿಗೆ ಸಾರ್ವಜನಿಕರು ಕರೆ ಮಾಡಿದರೆ ಉತ್ತರ ನೀಡುವವರು ಇಲ್ಲದಂತಾಗಿದೆ. ಇಂಜನಿಯರ್‌ಗಳಂತೂ ಕೈಗೆ ಸಿಗುವುದಿಲ್ಲ. ಇವರಿಗೆಲ್ಲ ಸರ್ಕಾರಿ ಕೆಲಸಕ್ಕಿಂತ ಖಾಸಗಿ ವ್ಯವಹಾರವೇ ಮುಖ್ಯವಾಗಿದೆ. ಯರಗೋಳ್ ಪೈಪ್‌ಲೈನ್ ಹಾನಿಯಾಗಿ ನೀರು ಪೋಲಾಗುತ್ತಿದೆ. ಗೊತ್ತಿದ್ದರೂ ಸಹ ಅಭಿವೃದ್ಧಿಗೆ ಒತ್ತು ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಇಷ್ಟು ದಿನ ಅಽಕಾರಿಗಳು, ಸಿಬ್ಬಂದಿ ಚುನಾವಣೆಯ ನೆಪ ಹೇಳಿಕೊಂಡು ಓಡಾಡುತ್ತಿದ್ದರು, ಮತದಾನ ಮುಗಿದಿದ್ದು ಇನ್ನಾದರೂ ಬಡವರ ಕೆಲಸಗಳತ್ತ ಗಮನ ಹರಿಸಬೇಕು, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    • ಹೂ ಆರ್ ಯು…?
      ಸಮಸ್ಯೆ ಹೇಳಿಕೊಂಡು ನಗರಸಭೆ ಪೌರಾಯುಕ್ತ ಶಿವಾನಂದ ಅವರಿಗೆ ದೂರವಾಣಿ ಕರೆ ಮಾಡಿದರೆ ಹೂ ಆರ್ ಯು….? ಎನ್ನುತ್ತಾರೆ. ಸಮಸ್ಯೆ ಹೇಳಿದರೆ ಕಚೇರಿಗೆ ಬನ್ನಿ ಅಂತಾರೆ, ಕಚೇರಿಗೆ ಬಂದರೆ ಕಚೇರಿಯಲ್ಲಿ ಲಭ್ಯವಾಗುವುದಿಲ್ಲ, ನಗರಸಭೆ ಜನರಿಂದ ದೂರವಾಗಿದೆ ಎಂದು ಪ್ರತಿಭಟನಾನಿರತ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
      ನಗರಸಭೆ ಸದಸ್ಯರಾದ ಪ್ರವೀಣಗೌಡ, ನಾಜಿಯಾ ಬಾಬಾ ಜಾನ್, ಸಂಗೀತಾ ಜಗದೀಶ್ ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts