More

  ಬೆಟ್ಟಿಂಗ್​ ಆಡುತ್ತಿದ್ದ ನಾಲ್ವರ ಬಂಧನ

  ಕೋಲಾರ: ನಗರದ ರಹಮತ್​ ನಗರದಲ್ಲಿ ಐಪಿಎಲ್​ ಕ್ರಿಕೆಟ್​ ಬೆಟ್ಟಿಂಗ್​ ಆಡುತ್ತಿದ್ದ ಆರೋಪಿಗಳನ್ನು ಗಲ್​ಪೇಟೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

  ನಗರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿಗಳಾದ ಸೈಯದ್​ ನಿಜಾಮುದ್ದೀನ್​ (30), ಮುಜಾಮಿಲ್​ (30), ರಹಮತ್​ ನಗರದ ಕುತುಬ್​ಪಾಷಾ (26), ಶಹಿನ್​ ಷಾ ನಗರದ ಇಮ್ರಾನ್​ (37) ಬಂಧಿತರು.

  ರಹಮತ್​ ನಗರದಲ್ಲಿ ಯುವಕರು ಗುಂಪು ಕಟ್ಟಿಕೊಂಡು ಕ್ರಿಕೆಟ್​ ಬೆಟ್ಟಿಂಗ್​ ಆಡುತ್ತಿದ್ದರು. ಸ್ಥಳಿಯರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಐಪಿಎಲ್​ ಕ್ರಿಕೆಟ್​ ಬೆಟ್ಟಿಂಗ್​ ಆಡುತ್ತಿರುವುದು ಕಂಡು ಬಂದಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಮುಜಾಮಿಲ್​ನನ್ನು ವಿಚಾರಿಸಿದಾಗ ಬೆಟ್ಟಿಂಗ್​ ನಡೆಸಲಾಗುತ್ತಿದೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ 1 ಮೊಬೈಲ್​ ಹಾಗೂ 3,400 ರೂ. ವಶಕ್ಕೆ ಪಡೆದಿದ್ದು, ಗಲ್​ಪೇಟೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts